Advertisement
ಈಕೆ ಸಿದ್ಧಕಟ್ಟೆ ಸರಕಾರಿ ಪ್ರ.ದ. ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದಳು.
ಹಿಂದೆ ಟೈಲರಿಂಗ್ ಮಾಡುತ್ತಿದ್ದ ತಂದೆ ಕೃಷ್ಣ ಪೂಜಾರಿ ಈಗ ಕಾಲು ನೋವಿನ ಸಮಸ್ಯೆಯಿಂದ ಕೆಲಸ ಮಾಡಲಾಗದೆ ಮನೆಯಲ್ಲಿದ್ದಾರೆ. ಅವರ ಮತ್ತೂಬ್ಬ ಪುತ್ರಿ ಮೂಡಬಿದಿರೆ ಬಿಲ್ಲವ ಸಂಘದಲ್ಲಿ ಟೈಲರಿಂಗ್ ತರಬೇತಿ ಪಡೆಯುತ್ತಿದ್ದಾಳೆ. ಪತ್ನಿ ಬೀಡಿ ಕಟ್ಟಿದ ಸಂಪಾದನೆಯೇ ಕುಟುಂಬಕ್ಕೆ ಆಧಾರ. ಮನೆಯ ಪರಿಸ್ಥಿತಿಯನ್ನು ಕಂಡು ಯಕ್ಷಿತಾ ತನ್ನ ಕಾಯಿಲೆಯನ್ನು ಗೌಪ್ಯವಾಗಿಟ್ಟಿದ್ದಳು. ಕಾಲೇಜಿನಿಂದ ಬಂದವಳು ಕಾರಣ ಹೇಳದೆ ಸುಮ್ಮನೆ ಮಲಗಿಬಿಡುತ್ತಿದ್ದಳು. ತಾಯಿ ವಿಚಾರಿಸಿದಾಗ ಏನೂ ಇಲ್ಲ ಎಂದು ಬಿಡುತ್ತಿದ್ದಳು. ಅಸೌಖ್ಯದ ಹಿನ್ನೆಲೆಯಲ್ಲಿ ಎರಡು ದಿನ ಕಾಲೇಜಿಗೆ ಹೋಗದೆ ಇದ್ದಾಗ ಆತಂಕಗೊಂಡ ಮನೆ ಯವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅದಾಗಲೇ ಆಕೆಯ ರಕ್ತದೊತ್ತಡ ತೀವ್ರ ಇಳಿದಿದ್ದು, ಮಧುಮೇಹ ಉಲ್ಬಣಾವಸ್ಥೆ ತಲುಪಿತ್ತು. ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಂಜೆ ಮೃತಪಟ್ಟಳು.