Advertisement

ಸ್ಮಾರ್ಟ್‌ಫೋನ್‌ ಇಲ್ಲದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

09:28 PM Jun 08, 2020 | Sriram |

ಚಂಡೀಗಢ: ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಮನೆಯಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದ ಕಾರಣ ಮನನೊಂದ ಪಂಜಾಬ್‌ನ ಮಾನ್ಸ ಜಿಲ್ಲೆಯ 11ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Advertisement

ಮೃತ ಬಾಲಕಿ ಕೂಲಿ ಕಾರ್ಮಿಕರೊಬ್ಬರ ಮಗಳು. ಕಳೆದ ಕೆಲವು ದಿನಗಳಿಂದ ಆಕೆ ತನ್ನ ಪೋಷಕರಿಗೆ ಸ್ಮಾರ್ಟ್‌ಫೋನ್‌ ಕೊಡಿಸುವಂತೆ ಕೇಳುತ್ತಿದ್ದಳು. ಆದರೆ ಅವರ ಬಡತನದ ಕಾರಣ ಅವರು ಅವಳಿಗೆ ಫೋನ್‌ ಕೊಡಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆಕೆ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್‌ ಕೊಡಿಸುವಂತೆ ಕೇಳುತ್ತಿದ್ದಳು, ಆದರೆ ನಮ್ಮ ಬಳಿ ಅಷ್ಟು ಹಣ ಇರಲಿಲ್ಲ. ಮನನೊಂದು ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿ ತಂದೆ ಜಗ್ಸಿರ್‌ ಸಿಂಗ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲಿ ವಿದ್ಯಾರ್ಥಿನಿಯೊಬ್ಬಳು ಇದೇ ಕಾರಣಕ್ಕಾಗಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಳು.

 

Advertisement

Udayavani is now on Telegram. Click here to join our channel and stay updated with the latest news.

Next