Advertisement

Blackmail,Rape: ವಿದ್ಯಾರ್ಥಿನಿ ಆತ್ಮಹತ್ಯೆ, ಮಹಿಳೆ ಸಹಿತ ಮೂವರ ಸೆರೆ

04:42 PM Aug 24, 2018 | Team Udayavani |

ಜಿಂದ್‌ : ಪದವಿ ತರಗತಿಯ ವಿದ್ಯಾರ್ಥಿನಿಯೋರ್ವಳನ್ನು ಬ್ಲಾಕ್‌ ಮೇಲ್‌ ಮಾಡಿ ಆಕೆಯ ಮೇಲೆ ಹಲವು ತಿಂಗಳ ಕಾಲ ಅತ್ಯಾಚಾರ ನಡೆಸಿ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಆರೋಪದ ಮೇಲೆ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. 

Advertisement

ತನ್ನ ಸಾವಿಗೆ ಈ ಮೂವರು ಕಾರಣರೆಂದು ಡೆತ್‌ ನೋಟ್‌ ಬರೆದಿಟ್ಟು ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆಯ ಬಗ್ಗೆ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದರು. 

ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ  ಘಟನೆಯಯನ್ನು ಈ ರೀತಿ ವಿವರಿಸಿದ್ದಾರೆ : “ಮೂವರು ಬಂಧಿತರಲ್ಲಿ ಓರ್ವಳಾಗಿರುವ ಮಹಿಳೆಯು ನನ್ನ ಮಗಳ ಸ್ನೇಹಿತೆಯಾಗಿದ್ದು ಆಕೆಯು ನನ್ನ ಮಗಳ ಫೋಟೋಗಳನ್ನು ತನ್ನ ಸಹಚರರಲ್ಲಿ ಹಂಚಿಕೊಂಡಿದ್ದಳು. ಅವರು ಈ ಫೋಟೋಗಳನ್ನು ಸಾಫ್ಟ್ ವೇರ್‌ ಮೂಲಕ ತಿರುಚಿ ನನ್ನ ಮಗಳನ್ನು  ಸೆಕ್ಸ್‌ ಗಾಗಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದರು. ಸೆಕ್ಸ್‌ಗೆ ಒಪ್ಪದಿದ್ದಲ್ಲಿ (ತಿರುಚಲ್ಪಟ್ಟ) ಫೋಟೋಗಳನ್ನು  ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರ ಪರಿಣಾಮವಾಗಿ ಅವರು ನನ್ನ ಮಗಳನ್ನು ಅನೇಕ ಬಾರಿ ಹಲವು ತಿಂಗಳ ಕಾಲ ರೇಪ್‌ ಮಾಡಿದರು’.

ಪೊಲೀಸರು ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಸಂಬಂಧಿಕರಿಗೆ ಬಿಟ್ಟುಕೊಟ್ಟಿದ್ದಾರೆ. ವಿದ್ಯಾರ್ಥಿನಿ ಬರೆದಿಟ್ಟಿರುವ ಡೆತ್‌ ನೋಟಿನ ಸಾಚಾತನವನ್ನು ಅರಿಯಲು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಡಿವೈಎಸ್ಪಿ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next