Advertisement

Ashes Test ಇಂಗ್ಲೆಂಡ್‌ ತಂಡದ ವೇಗಿ ಸ್ಟುವರ್ಟ್‌ ಬ್ರಾಡ್‌ 600 ವಿಕೆಟ್‌ ಸಾಧನೆ

11:01 PM Jul 19, 2023 | Team Udayavani |

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ತಂಡದ ವೇಗಿ ಸ್ಟುವರ್ಟ್‌ ಬ್ರಾಡ್‌ ಟೆಸ್ಟ್‌ ಕ್ರಿಕೆಟ್‌ನ 600 ವಿಕೆಟ್‌ ಸಾಧಕರ ಕ್ಲಬ್‌ಗ ಸೇರ್ಪಡೆಗೊಂಡರು.

Advertisement

ಬುಧವಾರ ಇಲ್ಲಿ ಆರಂಭಗೊಂಡ ಆ್ಯಶಸ್‌ ಸರಣಿಯ 4ನೇ ಟೆಸ್ಟ್‌ ಪಂದ್ಯದಲ್ಲಿ ಅವರು ಈ ಮೈಲುಗಲ್ಲು ನೆಟ್ಟರು.

ಬ್ರಾಡ್‌ 600 ವಿಕೆಟ್‌ ಉರುಳಿಸಿದ ವಿಶ್ವದ 5ನೇ ಹಾಗೂ ಇಂಗ್ಲೆಂಡ್‌ನ‌ 2ನೇ ಸಾಧಕ.

ಉಳಿದ ನಾಲ್ವರೆಂದರೆ ಮುತ್ತಯ್ಯ ಮುರಳೀಧರನ್‌ (800), ಶೇನ್‌ ವಾರ್ನ್ (708), ಜೇಮ್ಸ್‌ ಆ್ಯಂಡರ್ಸನ್‌ (688) ಮತ್ತು. ಅನಿಲ್‌ ಕುಂಬ್ಳೆ (619). ಆಸ್ಟ್ರೇಲಿಯ 7 ವಿಕೆಟಿಗೆ 276 ರನ್‌ ಗಳಿಸಿ ದಿನದಾಟ ಮುಂದುವರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next