Advertisement

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಹೋರಾಟ

12:43 PM Dec 11, 2022 | Team Udayavani |

ದೇವನಹಳ್ಳಿ: ಈಗಿರುವ ಎನ್‌ಪಿಎಸ್‌ ರದ್ದು ಮಾಡಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗಾಗಿ ಹೋರಾಟಮಾಡುತ್ತೇವೆ. ಸರ್ಕಾರಿ ನೌಕರರ ಹಿತ ಕಾಪಾಡುವಕೆಲಸ ಮಾಡುತ್ತೇವೆ. ಸಂಘದಲ್ಲಿ ದುಡ್ಡಿದೆ. ಅದನ್ನು ಬಳಸುವ ಪ್ರಾಮಾಣಿಕ ಮನಸ್ಥಿತಿ ಇರಬೇಕಷ್ಟೇ.ಸರ್ಕಾರಿ ನೌಕರರ ಸಂಘದ ಕಚೇರಿಯೂಯಾವುದೇ ಕಾರ್ಪೋರೇಟ್‌ ಕಂಪನಿಗಿಂತ ಕಡಿಮೆಇರಬಾರದು ಎಂಬ ಆಶಯ ನಮ್ಮದು ಎಂದುರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರುಮ 7ನೇ ವೇತನ ಆಯೋಗವನ್ನೂ ಸಹ ಮಾರ್ಚ್‌ ತಿಂಗಳಲ್ಲಿ ಜಾರಿಗೆ ತರಲು ಸರ್ಕಾರ ಎಲ್ಲಾ ಸಿದ್ಧತೆ ನಡೆಸುತ್ತಿದೆ. 7ನೇ ವೇತನ ಆಯೋಗವನ್ನುತೆಗೆದುಕೊಂಡ ನಂತರ ಸಂಘದ ತೀರ್ಮಾನದಂತೆ ಎನ್‌ಪಿಎಸ್‌ ರದ್ದು ಮಾಡಿ ಒಪಿಎಸ್‌ ಜಾರಿಗೆ ತರುವಕುರಿತು ಸರ್ಕಾರದ ಜೊತೆ ಸಂಧಾನ ಮಾತುಕತೆಗಳು ನಡೆಸುತ್ತವೆ. ಒಂದು ವೇಳೆ ಸರ್ಕಾರ ಜಾರಿ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದರು.

ಪ್ರತಿಭೆಗಳಿಗೆ ಉತ್ತೇಜನ: ಸರ್ಕಾರಿ ನೌಕರರು ಅನಾರೋಗ್ಯಕ್ಕೆ ಒಳಗಾದಾಗ ತಮ್ಮ ಕುಟುಂಬದಎಲ್ಲಾ ಸದಸ್ಯರಿಗೂ ಎಲ್ಲಾ ಮಲ್ಟಿ ಸ್ಪೆಷಾಲಿಟಿಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ದೊರೆಯುವಂತೆಮಾಡಲಾಗುತ್ತದೆ. ಸರ್ಕಾರದಿಂದ ಕಾರ್ಡ್‌ ನೀಡುತ್ತಿದ್ದೇವೆ. ಜನವರಿಯಿಂದ ಈ ಯೋಜನೆಜಾರಿಗೊಳ್ಳಲಿದೆ. ಸರ್ಕಾರಿ ನೌಕರರ ಮಕ್ಕಳು ಸ್ವಾಭಿಮಾನದಿಂದ ಜೀವನ ರೂಪಿಸಿಕೊಳ್ಳಬೇಕು.ಅವರ ಪೋಷಕರಿಗೆ ಪಿಂಚಣಿ ಇಲ್ಲದಿದ್ದರೂ ಸಂಬಳ ಬರದಿದ್ದರೂ ಕುಟುಂಬ ನಿರ್ವಹಣೆ ಮಾಡುವಂತಹ ಆರ್ಥಿಕ ಸ್ಥೈರ್ಯ ಅವರದಾಗಬೇಕೆಂದು ಗುರುತಿಸಿ ಪ್ರತಿಭೆಗಳಿಗೆ ಉತ್ತೇಜನ ಮಾಡಿದ್ದೇವೆ ಎಂದರು.

ಭಾಷೆ ಉಳಿವಿಗೆ ಸರ್ಕಾರಿ ನೌಕರರ ಸಂಘ ಬದ್ಧವಾಗಿದೆ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣ್ಣಪ್ಪ ಮಾತನಾಡಿ, ಸರ್ಕಾರದೊಂದಿಗೆ ಸೌಹಾರ್ದದ ವಾತಾವರಣ ಸೃಷ್ಟಿಸಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಮೇಲ್ದರ್ಜೆಗೆ ಏರಿಸುವುದರಲ್ಲಿ ಅವರ ಶ್ರಮ ಅಭಿನಂದನಾರ್ಹ. ಸರ್ಕಾರಿ ನೌಕರರ ಬೇಡಿಕೆಯನ್ನು ಬಗೆಹರಿಸುವ ಚಾಣಾಕ್ಷತನ ಅವರಲ್ಲಿದೆ. ಶೀಘ್ರವೇ ಕೇಂದ್ರ ಸರ್ಕಾರದ ವೇತನ ಸ್ಕೇಲ್‌ ರಾಜ್ಯಕ್ಕೆಸಿಗುವುದಿದೆ. ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವಆಚರಣೆ ಮಾಡುತ್ತಿರುವುದು ಭಾಷೆಯ ಉಳಿವಿಗೆ ಸರ್ಕಾರಿ ನೌಕರರ ಬದ್ಧತೆಯಾಗಿದೆ ಎಂದರು.

ಕ್ರೀಡಾಕೂಟಕ್ಕೆ ಅನುದಾನ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್‌.ಬಾಲಕೃಷ್ಣ ಮಾತನಾಡಿ,ನಿತ್ಯ ಪತ್ರಿಕೆಗಳಲ್ಲಿ ಸರ್ಕಾರಿ ನೌಕರರ ಒಳಿತಿಗಾಗಿ ದುಡಿಯುತ್ತಿದ್ದಾರೆ. ಸಾಕಷ್ಟು ರಾಜಕೀಯ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅನಾಮಧೇಯ ದೂರುಗಳ ವಿರುದ್ಧ ಸರ್ಕಾರಿ ನೌಕರರಿಗೆ ಹೊಂದಿರುವ ಮಾನಸಿಕನೋವುಗಳನ್ನು ತಡೆ ನೀಡಿದ್ದಾರೆ. ಮೃತ ಸರ್ಕಾರಿನೌಕರರ ಕುಟುಂಬದ ಹೆಚ್ಚುವರಿ ಪಿಂಚಣಿ, ರಜೆಗಳನ್ನು ಹೆಚ್ಚು ವಾರ್ಷಿಕ 15ದಿನಗಳ ಮಾಡಿದ್ದರು.ಹಲವಾರು ಮುಂಬಡ್ತಿ ರಾಜ್ಯಮಟ್ಟದ ಸರ್ಕಾರಿನೌಕರರ ಕ್ರೀಡಾಕೂಟಕ್ಕೆ ಅನುದಾನ ಹೆಚ್ಚಿಸಿದರು.ಸುಲಭ ಸಾಲ ಸೌಲಭ್ಯ, ತುಟ್ಟಿ ಭತ್ಯೆ ಹೆಚ್ಚಿಸಿದರು. ಅವರ ಚತುರತೆಯಿಂದ ಸಾಕಷ್ಟು ಸರ್ಕಾರಿ ನೌಕರರಿಗೆಸವಲತ್ತು ಮಾಡಿದ್ದರು ಎಂದರು.

Advertisement

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಜಿಪಂ ಉಪಕಾರ್ಯದರ್ಶಿ ಡಾ.ನಾಗರಾಜ್‌, ರಾಜ್ಯ ಸರ್ಕಾರಿ ನೌಕರರ ಸಂಘದ

ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ಖಜಾಂಚಿ ಆರ್‌. ಶ್ರೀನಿವಾಸ್‌, ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಗಂಗಾಧರಪ್ಪ, ಹೊಸಕೋಟೆ ತಾಲೂಕು ಅಧ್ಯಕ್ಷ ಮುನಿಶಾಮಪ್ಪ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷಲಕ್ಷೀನರಸಿಂಹಯ್ಯ, ನೆಲಮಂಗಲ ತಾಲೂಕು ಅಧ್ಯಕ್ಷ ವಾಸುದೇವ ಮೂರ್ತಿ, ಜಿಲ್ಲಾ ಹಿರಿಯ ಉಪಾಧ್ಯಕ್ಷರವಿಶಂಕರ್‌, ಜಿಲ್ಲಾ ಖಜಾಂಚಿ ಮಹಮದ್‌ ಮುಜಾಮಿಲ್‌ ಹಾಗೂ ಮತ್ತಿತರರು ಇದ್ದರು.

ಪ್ರತಿಯೊಬ್ಬರೂ ಭಾಷಾಭಿಮಾನ ಬೆಳೆಸಿಕೊಳ್ಳಿ: ಷಡಕ್ಷರಿ:  ನಾಡು ನುಡಿ, ಗಡಿ, ಭಾಷೆಯ ವಿಚಾರದಲ್ಲಿಎಲ್ಲರೂ ಸೇನಾನಿಗಳಂತೆ ಕೆಲಸ ಮಾಡೋಣ. ನಾಡನ್ನು ಕಟ್ಟುವ ಕೆಲಸ ಮಾಡೋಣ. ಎಲ್ಲರೂ ಪ್ರಜ್ಞಾವಂತ ಸರ್ಕಾರಿ ನೌಕರರಂತೆ ವರ್ತಿಸಬೇಕು. ಅಧಿಕಾರ ಯಾರ ಬಳಿ ಇದ್ದರೂ, ನಮ್ಮ ಹಕ್ಕುಗಳಿಗೆ ಸಂಘಟಿತ ಹೋರಾಟ ಮಾಡುತ್ತೇವೆ. ಹೊರ ರಾಜ್ಯಗಳಿಂದ ಬರುವ ಜನರಿಗೆ ಕನ್ನಡವನ್ನು ಕಲಿಸುವ ಕೆಲಸವಾಗಬೇಕು. ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ವ್ಯಾಮೋಹದಿಂದ ಕನ್ನಡ ಭಾಷೆ ಕುಂಠಿತವಾಗುತ್ತಿದೆ. ನಮ್ಮ ಸಾಹಿತ್ಯ ಇತರರೆಲ್ಲಾ ಭಾಷೆಗಿಂತಲೂ ಶ್ರೀಮಂತವಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಕನ್ನಡ ಭಾಷೆ  ಯಲ್ಲಿ ವ್ಯವಹರಿಸುವುದರ ಮೂಲಕ ಭಾಷಾಭಿ  ಮಾನ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next