Advertisement

Sirsi: ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ತಿರುವು; ನವೆಂಬರ್‌ನಲ್ಲಿ ಡೆಲ್ಲಿ ಚಲೋ…

03:47 PM Sep 12, 2023 | Team Udayavani |

ಶಿರಸಿ: ನಿರಂತರ 32 ವರ್ಷ ಹೋರಾಟದ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕಿಗಾಗಿ ಪ್ರಬಲ ಹೋರಾಟವನ್ನು ಮುಂದುವರೆಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರು ತೀರ್ಮಾನಿಸಿದ್ದು, ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ನವೆಂಬರ್‌ನಲ್ಲಿ ಡೆಲ್ಲಿ ಚಲೋ ನಡೆಸಲು ತೀರ್ಮಾನಿಸಿದ್ದಾರೆ.

Advertisement

ಮಂಗಳವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯದಲ್ಲಿ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ಹೋರಾಟದ 33 ನೇ ವರ್ಷದ ಪಾದಾರ್ಪಣೆಯ ಸಂದರ್ಭದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟ ಚಿಂತನಾ ಸಭಾ ಕಾರ್ಯಕ್ರಮದಲ್ಲಿ ಈ ನಿರ್ಣಯವನ್ನು ಕೈಗೆತ್ತಿಕೊಳ್ಳಲಾಯಿತು.

ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟವನ್ನ ಮುಂದುವರೆಸಿ ಅರಣ್ಯ ಭೂಮಿ ಹಕ್ಕಿಗಾಗಿ ಜನಜಾಗೃತಿ ಅಭಿಯಾನವನ್ನ ಜಿಲ್ಲಾದ್ಯಂತ ಸಂಘಟಿಸುವುದು. ಸಕ್ರೀಯ ಅರಣ್ಯವಾಸಿ ಸದಸ್ಯರಿಗೆ ಉಚಿತವಾಗಿ ಗುರುತಿನ ಪತ್ರವನ್ನು ನೀಡುವುದು. ಸುಫ್ರೀಂ ಕೋರ್ಟ್ ನಲ್ಲಿ ಅರಣ್ಯವಾಸಿಗಳ ಪರವಾಗಿ ಪ್ರಬಲ ಕಾನೂನು ಹೋರಾಟ ಜರುಗಿಸುವುದು ಹಾಗೂ ಅರಣ್ಯವಾಸಿಗಳಿಗೆ ಕಾನೂನು ಜ್ಞಾನವನ್ನು ಹೆಚ್ಚಿಸುವ ಮುಂತಾದ ನಿರ್ಣಯಗಳನ್ನ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಇಬ್ರಾಹಿಂ ಗೌಡಳ್ಳಿ, ಜಿ.ಬಿ ನಾಯ್ಕ ಬೇಡ್ಕಣಿ, ಖೈರುನ್ನಿಸಾ ಮೆಹಬೂಬಲಿ ಸಾಬ, ಅಬ್ದುಲ್ ವಾಹಿದ್, ಚಿದಾನಂದ ಬಸಪ್ಪ ನಾಯ್ಕ, ಕನ್ನಪ್ಪ ನಾರಾಯಣ ನಾಯ್ಕ, ಮೆಹಬೂಬಲಿ ಇಮಾಮ ಪಟೇಲ್, ಬಿಬಿ ಅಮಿನಾ ಶೇಖ್, ಮೆಹಬೂಬಲಿ ಬಾಬುಸಾಬ ದಾಸನಕೊಪ್ಪ, ಅಲಿಸಾ ಮಹಮ್ಮದ್ ಸಾಬ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Indian Football Team; ಜ್ಯೋತಿಷಿಯ ಸಲಹೆ ಕೇಳಿ ಫುಟ್ಬಾಲ್ ತಂಡ ಆಯ್ಕೆ ಮಾಡಿದ ಕೋಚ್!

Advertisement
Advertisement

Udayavani is now on Telegram. Click here to join our channel and stay updated with the latest news.

Next