Advertisement

ಮಂಗಳೂರು: ಮತ ಎಣಿಕೆಗೂ ಮುನ್ನ ಭದ್ರತಾ ಕೊಠಡಿಯ ಕೀಲಿಕೈ ಕಾಣೆ… ಬಡಗಿಯ ನೆರವು!

01:10 AM May 14, 2023 | Team Udayavani |

ಮಂಗಳೂರು: ಸುರತ್ಕಲ್‌ ಎನ್‌ಐಟಿಕೆ ಕಾಲೇಜಿನಲ್ಲಿ ಮತ ಎಣಿಕೆ ಮಾಡುವುದಕ್ಕೂ ಮುನ್ನ ಭದ್ರತಾ ಕೊಠಡಿಯ ಬಾಗಿಲು ತೆರೆಯುವ ವೇಳೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್‌ ರೂಂನ ಬೀಗದ ಕೀಲಿ ಕೈಯನ್ನು ಅಧಿಕಾರಿಗಳು ಕಳೆದು ಕೊಂಡಿದ್ದರು.

Advertisement

ಹೀಗಾಗಿ ಸ್ಟ್ರಾಂಗ್‌ ರೂಂ ತೆರೆಯಲು ಸಾಧ್ಯವಾಗಲಿಲ್ಲ. ಅಲ್ಲೇ ಇದ್ದ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಬಡಗಿಯನ್ನು ಕರೆಸುವಂತೆ ಸೂಚಿಸಿದರು. ಎನ್‌ಐಟಿಕೆ ಕೇಂದ್ರದಲ್ಲೇ ಇದ್ದ ಬಡಗಿ ತತ್‌ಕ್ಷಣವೇ ಬಂದು ಸ್ಟ್ರಾಂಗ್‌ ರೂಂನ ಬೀಗವನ್ನು ತುಂಡರಿಸಿ ಮತ ಎಣಿಕೆ ಕಾರ್ಯಕ್ಕೆ ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next