ಆಧುನಿಕ ಶೈಲಿಯ ಆಹಾರ ಕ್ರಮಗಳು ಮನಷ್ಯನನ್ನು ಬಹಳ ಬೇಗನೇ ಆಸ್ಪತ್ರೆಯತ್ತ ಮುಖಮಾಡಲು ಕಾರಣವಾಗುತ್ತಿವೆ. ಬೆನ್ನು, ಸೊಂಟ, ಕೈ, ಕಾಲು ನೋವು ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ವಯಸ್ಸಿನ ಪರಿಧಿಯನ್ನು ಮೀರಿ ಬಾಧಿಸುವುದಿದೆ. ಮೂಳೆಗಳು ಸದೃಢವಾಗಿದ್ದರೆ ಮಾತ್ರ ದೇಹ ಗಟ್ಟಿಮುಟ್ಟಾಗಿರಲು ಸಾಧ್ಯ. ದೇಹದಲ್ಲಿ ಕ್ಯಾಲ್ಸಿಯಂಗಳ ಅಂಶ ಕಡಿಮೆಯಾದರೆ ಮೂಳೆಗಳ ಆರೋಗ್ಯ ಕುಂಠಿತವಾಗುತ್ತದೆ. ನಿಯಮಿತ ವ್ಯಾಯಾಮ ಹಾಗೂ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಪೌಷ್ಟಿಕ ಆಹಾರ ಸೇವಿಸುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದಾಗಿದೆ.
ಮೂಳೆ ಗಳ ರಕ್ಷಣೆ ಹೇಗೆ ?
ಕ್ಯಾಲ್ಸಿಯಂ ಸೇವನೆ ಆಹಾರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿರುವಂತೆ ನೋಡಿಕೊಳ್ಳ ಬೇಕು. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಜೇನು ತುಪ್ಪ ಸೇರಿಸಿ ಕುಡಿದರೆ ಉತ್ತಮ.
ವಿಟಮಿನ್ ಡಿ
ಕ್ಯಾಲ್ಸಿಯಂನೊಂದಿಗೆ ವಿಟಮಿನ್ ಡಿ ಸಹ ಪೂರಕವಾಗಿ ಬೇಕು. ಹಸುರು ತರಕಾರಿಗಳಲ್ಲಿ ಇವುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಮಿಟಮಿನ್ ಡಿ ಪಡೆಯಲು ಬೆಳಗ್ಗೆ ಸೂರ್ಯನ ಬೆಳಕಿಗೆ ಮೈಯೊಡ್ಡಬೇಕು.
ವಿಟಮಿನ್ ಕೆ
ವಿಟ ಮಿನ್ ಕೆ ಹೆಚ್ಚಿರುವ ಬ್ರೋಕೋಲಿ (ಹೂ ಕೋಸು) ಮತ್ತು ಕೇಲ್, ಪಾಲಕ್ ಮೊದಲಾದ ಹಸಿರೆಲೆಗಳನ್ನು ಸೇವಿಸಬೇಕು.
ಪೊಟಾಶಿಯಂ ಪೊಟಾಶಿಯಂ ಮೂಳೆಗಳ ದೃಢತೆಯಲ್ಲಿ ಭಾರೀ ಪಾತ್ರ ವಹಿಸದಿ ದ್ದರೂ ಕ್ಯಾಲ್ಸಿಯಂ ಮೂಳೆಗಳಲ್ಲಿ ಸಂಚಲನಗೊಳ್ಳಲು ನೆರವಾಗುತ್ತದೆ. ಸಿಹಿಗೆಣಸು ಮತ್ತು ಬಾಳೆಹಣ್ಣುಗಳಲ್ಲಿ ಪೊಟ್ಯಾಶಿಯಂ ಹೇರಳವಾಗಿರುತ್ತದೆ.
ವ್ಯಾಯಾಮ ನಿತ್ಯದ ಚಟುವಟಿಕೆಗಳಲ್ಲಿ ಸಾಕಷ್ಟು ವ್ಯಾಯಾಮ ಇರಬೇಕಾದದ್ದು ಅಗತ್ಯ. ಚಟುವಟಿಕೆ ಕಡಿಮೆ ಇರುವವರ ಮೂಳೆಯಲ್ಲಿ ಗಾಳಿಗುಳ್ಳೆ ತುಂಬುವ ಸಾಧ್ಯತೆ ಹೆಚ್ಚು.
ಹಾಲು ಹೈನು ಉತ್ಪನ್ನಗಳಾಗಿರುವ ಹಾಲು, ಮೊಸರು, ಗಿಣ್ಣು ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕ ಮಟ್ಟದಲ್ಲಿದೆ. ಇದು ನೈಸರ್ಗಿಕವಾಗಿ ಸಮಸ್ಯೆಯುಳ್ಳ ಮೂಳೆಗಳನ್ನು ಸರಿಪಡಿಸುತ್ತದೆ.
ತೂಕ ಕಡಿಮೆ ಮಾಡಿ
ತೂಕ ಕಡಿಮೆ ಮಾಡಿ
ದೇಹದ ತೂಕ ಹೆಚ್ಚಾದರೆ ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ತಪ್ಪಿಸಲು ವ್ಯಾಯಾಮ ಮಾಡಿ ಸಮತೂಕದಲ್ಲಿದ್ದರೆ ಕಾಯಿಲೆಗಳಿಂದ ಬೇಗನೇ ಹೊರಬರಬಹುದಾಗಿದೆ.
ಅಪಾಯ ಏನು ?
ಸೂಕ್ತವಾದ ಆರೈಕೆಯಿಲ್ಲದಿದ್ದರೆ ಮೂಳೆಯ ಟೊಳ್ಳು ದೊಡ್ಡದಾಗುವ, ಗಾಳಿಗುಳ್ಳೆಗಳು ತುಂಬುವ ಅಪಾಯವಿದೆ. ಈ ಮೂಳೆಗಳು ಸುಲಭವಾಗಿ ತಂಡಾಗಬಹುದಾಗಿದೆ. ಕ್ಯಾಲ್ಸಿಯಂ ಮೂಳೆಗಳ ಅಣು ಅಣುಗಳ ರಚನೆಯನ್ನು ದೃಢಗೊಳಿಸಲು ಸಿಮೆಂಟಿನ ರೀತಿಯಲ್ಲಿ ಕೆಲಸ ಮಾಡುತ್ತದೆ.
ಆನುವಂಶೀಯ
ನಿಮ್ಮ ಹಿರಿಯರಲ್ಲಿ ಮೂಲೆ ಸಂಬಂಧಿ ಸಮಸ್ಯೆಗಳಿದ್ದರೆ ಅವುಗಳು ಬರುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಿಂದ ಹೊರ ಬರಲು ಚಿಕ್ಕ ವಯಸ್ಸಿನಲ್ಲೇ ಮೂಳೆಗಳ ಕಾಳಜಿ ವಹಿಸುವುದು ಅತ್ಯಗತ್ಯ.
ಕಾರ್ತಿಕ್ ಅಮೈ