Advertisement
ಕಾರವಾರದಲ್ಲಿ ಅತಂತ್ರ ನಗರಸಭೆ31 ವಾರ್ಡ್‌ಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 11 ಸ್ಥಾನಗಳನ್ನು ಗೆದ್ದುಕೊಂಡಿವೆ. ಜೆಡಿಎಸ್ 4 ಸ್ಥಾನಗಳನ್ನು ಗೆದ್ದಿದ್ದು, ಪಕ್ಷೇತರರು 5 ಮಂದಿ ಆಯ್ಕೆಯಾಗಿದ್ದು ಅವರೇ ನಿರ್ಣಾಯಕರಾಗಿದ್ದಾರೆ.
ಶಿರಸಿ ನಗರಸಭೆಯಲ್ಲಿ 17 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರಕ್ಕೇರಿದ್ದು,ಕಾಂಗ್ರೆಸ್ 9 , ಜೆಡಿಎಸ್ 1 ಮತ್ತು ಪಕ್ಷೇತರರು 4 ಸ್ಥಾನಗಳನ್ನು ಗೆದ್ದಿದ್ದಾರೆ. ದಾಂಡೇಲಿ ನಗರಸಭೆ ಉಳಿಸಿಕೊಂಡ ಕಾಂಗ್ರೆಸ್
31 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದಿದೆ. ಬಿಜೆಪಿ 11 ಮತ್ತು ನಾಲ್ವರು ಪಕ್ಷೇತರರು ಗೆದ್ದಿದ್ದಾರೆ.
Related Articles
ಕುಮಟಾ ಪುರಸಭೆಯಲ್ಲಿ 16 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅಧಿಕಾರಕ್ಕೇರಿದೆ. ಕಾಂಗ್ರೆಸ್ 6 , ಜೆಡಿಎಸ್ 1 ಸ್ಥಾನಗಳನ್ನು ಗೆದ್ದಿದೆ.
Advertisement
ಹಳಿಯಾಳ ಕಾಂಗ್ರೆಸ್‌ಗೆ ಹಳಿಯಾಳ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ 14 , ಬಿಜೆಪಿ 7 , ಜೆಡಿಎಸ್ 1 ಮತ್ತು ಪಕ್ಷೇತರ 1 ಸ್ಥಾನಗಳನ್ನು ಗೆದ್ದಿದ್ದಾರೆ. ಅಂಕೋಲಾ ಪುರಸಭೆ ಅತಂತ್ರ
23 ಕ್ಷೇತ್ರಗಳಿರುವ ಆಂಕೋಲಾ ಪುರಸಭೆ ಅತಂತ್ರವಾಗಿದ್ದು ಕಾಂಗ್ರೆಸ್ 10 , ಬಿಜೆಪಿ 8 ಮತ್ತು 5 ಪಕ್ಷೇತರರು ಗೆದ್ದಿದ್ದಾರೆ. ಮುಂಡಗೋಡ ಬಿಜೆಪಿ ಪಾಲು
ಮುಂಡಗೋಡ ಪಟ್ಟಣ ಪಂಚಾಯತ್‌ನಲ್ಲಿ 10 ಸ್ಥಾನಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದ್ದು , ಕಾಂಗ್ರೆಸ್ ನಿಂದ 9 ಮಂದಿ ಜಯಗಳಿಸಿದ್ದಾರೆ. ಯಲ್ಲಾಪುರ ಉಳಿಸಿಕೊಂಡ ಕಾಂಗ್ರೆಸ್
ಯಲ್ಲಾಪುರ ಪಟ್ಟಣ ಪಂಚಾಯತ್‌ನಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು , ಬಿಜೆಪಿ 5 , ಜೆಡಿಎಸ್ 1 ಮತ್ತು ಪಕ್ಷೇತರ 1 ಸ್ಥಾನದಲ್ಲಿ ಜಯಗಳಿಸಿದ್ದಾರೆ.