Advertisement

ಬಿಜೆಪಿ-ಕಾಂಗ್ರೆಸ್‌ ನಡುವೆ ಪ್ರಬಲ ಪೈಪೋಟಿ

12:38 PM Mar 24, 2019 | Team Udayavani |

ಕ್ಷೇತ್ರದ ವಸ್ತುಸ್ಥಿತಿ: ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪ್ರತ್ಯೇಕವಾದ ಬಳಿಕ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಪರಿಣಾಮ ಸತತ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಶಾಸಕರು ಗೆಲುವು ಸಾಧಿಸಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ಮತದಾರರ ಬಿಜೆಪಿಗೆ ಹೆಚ್ಚು ಮತ ನೀಡಿದ್ದಾರೆ.

Advertisement

ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 2,66,254 ಮತಗಳು ಚಲಾವಣೆಯಾಗಿದ್ದು, ಆ ಪೈಕಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಮುನಿರಾಜುಗೌಡ ಅವರ ಪರವಾಗಿ ಬರೋಬ್ಬರಿ 1,34,876 ಮತಗಳು ಬಂದಿದ್ದವು. ಕಾಂಗ್ರೆಸ್‌ನ ಹಾಲಿ ಸಂಸದ ಡಿ.ಕೆ.ಸುರೇಶ್‌ ಅವರ ಪರವಾಗಿ 98,841 ಮತಗಳು ಹಾಗೂ ಜೆಡಿಎಸ್‌ನ ಪ್ರಭಾಕರ್‌ ರೆಡ್ಡಿ ಪರವಾಗಿ 22,698 ಬಂದಿದ್ದವು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಗಳು ಪಡೆದ ಮತಗಳ ಅಂಕಿ-ಅಂಶಗಳು, ರಾಜ್ಯ ವಿಧಾನಸಭಾ ಚುನಾವಣೆಯ ಫ‌ಲಿತಾಂಶ ಗಮನಿಸಿದರೆ ಕ್ಷೇತ್ರದಲ್ಲಿ ಬಿಜೆಪಿಯ ಹಿಡಿತ ಹೆಚ್ಚಾಗಿರುವುದು ಕಂಡುಬರುತ್ತದೆ. 2014ರ ಚುನಾವಣೆಯ ವೇಳೆ ಕ್ಷೇತ್ರದ ಒಟ್ಟು 8 ವಾರ್ಡ್‌ಗಳ ಪೈಕಿ ಕೇವಲ 3 ವಾರ್ಡ್‌ಗಳಲ್ಲಿ ಮಾತ್ರ ಬಿಜೆಪಿ ಸದಸ್ಯರಿದ್ದರು. ಆದರೆ, ಸದ್ಯ 6 ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿರುವುದು ಬಿಜೆಪಿ ಕಳೆ ತಂದಿದೆ.

ಇನ್ನು ಕ್ಷೇತ್ರದಲ್ಲಿ ಎರಡು ವಾರ್ಡ್‌ಗಳಲ್ಲಿ ಮಾತ್ರ ಕಾಂಗ್ರೆಸ್‌ ಸದಸ್ಯರಿದ್ದು, ಕ್ಷೇತ್ರದಲ್ಲಿ ಸಂಸದರು ಅಭಿವೃದ್ಧಿಯ ಕಾರ್ಯಕ್ರಮಗಳ ಮೇಲೆ ಹೆಚ್ಚಿನ ಮತಗಳನ್ನು ಪಡೆಯುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಇದೆ. ಇನ್ನು ಜೆಡಿಎಸ್‌ ಬೆಂಬಲ ದೊರೆಯುವುದರಿಂದ ಬಿಜೆಪಿ-ಕಾಂಗ್ರೆಸ್‌ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-30ಕ್ಕೂ ಹೆಚ್ಚಿನ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ
-ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ರೂಂ ನಿರ್ಮಾಣಕ್ಕೆ ಅನುದಾನ
-ಕ್ಷೇತ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಅನುದಾನ
-ಎರಡು ಕೆರೆಗಳ ಅಭಿವೃದ್ಧಿಗೆ ಅನುದಾನ
-ಬನ್ನೇರುಘಟ್ಟ ರಸ್ತೆ ಅಗಲೀಕರಣ ಯೋಜನೆಯಲ್ಲಿ ಪ್ರಮುಖ ಪಾತ್ರ

Advertisement

ನಿರೀಕ್ಷೆಗಳು
-ಮೂಲಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ
-ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
-ಕೆರೆಗಳ ಅಭಿವೃದ್ಧಿಗೆ ಮಹತ್ವ ನೀಡಬೇಕು

-8 ವಾರ್ಡ್‌ಗಳು
-6 ಬಿಜೆಪಿ
-2 ಕಾಂಗ್ರೆಸ್‌
-0 ಜೆಡಿಎಸ್‌

-9,38,863- ಜನಸಂಖ್ಯೆ
-5,98,206- ಮತದಾರರ ಸಂಖ್ಯೆ
-3,18,956- ಪುರುಷರು
-2,78,250- ಮಹಿಳೆಯರು

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು-2,66,254
-1,34,876 (ಶೇ. 50) – ಬಿಜೆಪಿ ಪಡೆದ ಮತಗಳು
-98,841 (ಶೇ. 37.1)- ಕಾಂಗ್ರೆಸ್‌ ಪಡೆದ ಮತಗಳು
-22,698 (ಶೇ. 8.5)- ಜೆಡಿಎಸ್‌ ಪಡೆದ ಮತಗಳು

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಎಂ ಕೃಷ್ಣಪ್ಪ, ಬಿಜೆಪಿ ಶಾಸಕ
-ಪಾಲಿಕೆಯಲ್ಲಿ ಸಂಖ್ಯಾಬಲ 4 ಕಾಂಗ್ರೆಸ್‌ ಸದಸ್ಯರು
-3 ಬಿಜೆಪಿ ಸದಸ್ಯರು
-1 ಜೆಡಿಎಸ್‌

ಮಾಹಿತಿ: ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next