Advertisement

ಚಾರ್ಟೆಡ್‌ ಅಕೌಂಟೆಂಟ್‌ದಲ್ಲಿ ವಿಫುಲ ಉದ್ಯೋಗಾವಕಾಶ: ರಾಜಶೇಖರ

11:51 AM Jul 10, 2018 | Team Udayavani |

ಕಲಬುರಗಿ: ಭಾರತದಲ್ಲಿ 1.25 ಕೊಟಿ ಜನಸಂಖ್ಯೆ ಇದ್ದರೂ ಕೇವಲ 3 ಲಕ್ಷ ಚಾರ್ಟೆಡ್‌ ಅಕೌಂಟೆಂಟ್‌ಗಳಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ ಇರುವುದನ್ನು ಸೂಚಿಸುತ್ತದೆ ಎಂದು ಖ್ಯಾತ ಚಾರ್ಟೆಡ್‌ ಅಕೌಂಟೆಂಟ್‌ ರಾಜಶೇಖರ ಪಾಟೀಲ ಹೇಳಿದರು.

Advertisement

ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಸಿಎ, ಪತ್ರಕರ್ತರ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿ.ಎ. ಅಧ್ಯಯನಕ್ಕೆ ಹೆಚ್ಚು ಹಣ ಖರ್ಚು ಮಾಡಬೇಕಾಗಿಲ್ಲ. ಹೀಗಾಗಿ ಸಿಎ ಶಿಕ್ಷಣ ಕಡೆ ವಿದ್ಯಾರ್ಥಿಗಳು ಆಸಕ್ತಿ ಹೊಂದಬೇಕು ಎಂದು ಕಿವಿ ಮಾತು ಹೇಳಿದರು.
 
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ| ಸಿದ್ದರಾಜ ಎಸ್‌. ವಾಲಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚು ಓದಲು ಬರೆಯಲು ಹೇಳಿದರೆ ಅವರನ್ನೆ ತಿರಸ್ಕರಿಸುತ್ತಾರೆ. ಆದರೆ ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಗಾಗಿ ಹೇಳುತಿದ್ದಾರೆ ಎಂಬುದು ಅವರಿಗೆ ಆ ಮೇಲೆ ಅರ್ಥವಾಗುತ್ತದೆ. ಪ್ರಾಮಾಣಿಕವಾಗಿ ಶ್ರಮವಹಿಸಿ ಓದಿದರೆ ಜಿವನದಲ್ಲಿ ಎಲ್ಲರೂ ಯಶಸ್ವಿಯಾಗಲು ಸಾಧ್ಯವಿದೆ ಎಂದು ಹೇಳಿದರು.

ಪತ್ರಕರ್ತ ಉಪನ್ಯಾಸಕರಾದ ಹಣಮಂತ ಶೇರಿ ಮಾತನಾಡಿ, ವ್ಯಕ್ತಿಗೆ ಅವಕಾಶಗಳು ಪದೇಪದೇ ಬರುವುದಿಲ್ಲ. ಬಂದಾಗ ಅದನ್ನು ಬಳಸಿಕೊಳ್ಳಬೇಕು. ರೇಡಿಯೋ ಕೇಳುವ ಹವ್ಯಾಸ ಬೆಳೆಸಿಕೊಂಡರೆ ಆಲೋಚನಾ ಶಕ್ತಿ ಹೆಚ್ಚುತದೆ. ಮನ್‌ ಕಿ-ಬಾತ್‌ನಿಂದ ರೇಡಿಯೋ ಕೇಳುಗರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.

ಪತ್ರಕರ್ತರು ಸಮಾಜದಲ್ಲಿ ಇರುವ ವಿಷಯಗಳನ್ನು ಎತ್ತಿ ತೋರಿಸುತ್ತಾರೆ. ಸಮಾಜ ಯಾವ ಮಾರ್ಗದಲ್ಲಿದೆ ಎಂದು ಪತ್ರಿಕಾ ಮಾಧ್ಯಮ ತಿಳಿಸುತ್ತದೆ ಎಂದು ಅವರು ನುಡಿದರು.

ಶರಣಬಸವೇಶ್ವರ ವಿಜ್ಞಾನ ಪದವಿ ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ರಾಮಕೃಷ್ಣ ರೆಡ್ಡಿ ಅಧ್ಯಕ್ಷತೆ ವಹಿಸಿ, ಜಮ್ಮು ಕಾಶ್ಮಿರದಲ್ಲಿ ಶಾಂತಿ ನೆಲೆಸಲು ವಿಜ್ಞಾನ ತಂತ್ರಜ್ಞಾನಕ್ಕಿಂತಲೂ ಮೌಲ್ಯಶಿಕ್ಷಣ ಅವಶ್ಯಕವಾಗಿದೆ ಎಂದು ಹೇಳಿದರು. 

Advertisement

ಇದೇ ಸಂದರ್ಭದಲ್ಲಿ ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಪೂಜಾ ಮತ್ತು ಸಂಗಡಿಗರ ಪ್ರಾರ್ಥನಾ ಗೀತೆ ಹಾಡಿದರು. ವೈಷ್ಣವಿ ಎಸ್‌.ಪಿ. ಸ್ವಾಗತಿಸಿದರು. ಮೇಘನಾ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next