Advertisement

ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಿ

05:44 PM Aug 16, 2018 | Team Udayavani |

ಹಾನಗಲ್ಲ: ಬಲಿಷ್ಠ ಭಾರತ ನಿರ್ಮಾಣವಾಗಬೇಕಾದರೆ ಈ ದೇಶಕ್ಕೆ ಸ್ವಾತಂತ್ರ್ಯ  ತಂದುಕೊಟ್ಟ ದೇಶ ಭಕ್ತರ ತ್ಯಾಗ ಬಲಿದಾನ ಅರಿತು ನಡೆಯಬೇಕಿದೆ. ಸಿಕ್ಕ ಸ್ವಾತಂತ್ರ್ಯ ಸ್ವೇಚ್ಛಾಚಾರದಿಂದ ಬಳಸಬಾರದು ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

Advertisement

ಬುಧವಾರ ಹಾನಗಲ್ಲಿನ ಕ್ರೀಡಾಂಗಣದಲ್ಲಿ ನಡೆದ 72ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಾರತ ಇಂದು ವಿಶ್ವದ ಎಲ್ಲ ರಾಷ್ಟ್ರಗಳಿಂದ ಮೆಚ್ಚುಗೆ ಪಡೆದಿದೆ. ಬದ್ಧತೆ ಇರುವ ವ್ಯಕ್ತಿ ಈ ದೇಶದ ಪ್ರಧಾನಿಯಾದರೆ ಎಲ್ಲವೂ ಸಾಧ್ಯ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ. ಭ್ರಷ್ಟಾಚಾರ ಮುಕ್ತ, ಭಯಮುಕ್ತ, ಆತಂಕವಾದ ಮುಕ್ತ ಭಾರತ ನಿರ್ಮಾಣದಿಂದ ಹತ್ತು ಹಲವು ದಿಟ್ಟ ನಿರ್ಧಾರ ಕೈಗೊಂಡ ಫಲ ಇಂದು ಭಾರತ ಜಾಗತಿಕ ಮಟ್ಟದಲ್ಲಿ ಮೇಲೇರಲು ಸಾಧ್ಯವಾಗಿದೆ ಎಂದರು.

ಸ್ವಾತಂತ್ರ್ಯ ಪೂರ್ವ ಆರ್ಥಿಕವಾಗಿ ದುರ್ಬಲಗೊಂಡಿದ್ದರೂ ನೈತಿಕವಾಗಿ ಶ್ರೀಮಂತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ಆರ್ಥಿಕವಾಗಿ ಶ್ರೀಮಂತವಾಗಿದ್ದರೂ ನೈತಿಕವಾಗಿ ದುರ್ಬಲರಾಗುತ್ತಿರುವುದು ವಿಷಾದದ ಸಂಗತಿ. ಹಣ ಮತ್ತು ಅಧಿಕಾರ ಎರಡು ಇದ್ದರೆ ಏನೆಲ್ಲ ಮಾಡಬಹುದು ಎನ್ನುವ ಮನೋಭಾವ ಹೋಗಬೇಕಾಗಿದೆ ಎಂದು ತಿಳಿಸಿದರು. ತಾಲೂಕು ತಹಶೀಲ್ದಾರ್‌ ಶಕುಂತಲಾ ಚೌಗಲಾ ಮಾತನಾಡಿದರು. ತಾಲೂಕು ಪಂಚಾಯತ್‌ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಪುರಸಭೆ ಅಧ್ಯಕ್ಷ ಎ. ಹಸಿನಾಬಿ ನಾಯ್ಕನವರ, ಮಾಜಿ ಅಧ್ಯಕ್ಷೆ ಯಲ್ಲವ್ವ ಕಂಚಿಗೊಲ್ಲರ, ಸದಸ್ಯ ರವಿರಾಜ ಕಲಾಲ, ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next