Advertisement

ಒಗ್ಗಟ್ಟಿನಿಂದ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಶ್ರಮಿಸಿ

12:09 PM Jul 12, 2017 | Team Udayavani |

ಎಚ್‌.ಡಿ.ಕೋಟೆ: ಕ್ಷೇತ್ರವು ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿದ್ದು, ಪಕ್ಷದ ಜನಪ್ರತಿನಿಧಿಗಳು ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಂಸದ ಆರ್‌.ಧೃವನಾರಾಯಣ್‌ ಹೇಳಿದರು.

Advertisement

ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದ ವಿಭಾಗಿಯ ಮಟ್ಟದ ಎಚ್‌.ಡಿ.ಕೋಟೆ ಬ್ಲಾಕ್‌ ಸಮಿತಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷ ಪೂರೈಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ, ಚುನಾವಣಾ ಪೂರ್ವ ನೀಡಿದ್ದ 165 ಭರವಸೆಗಳಲ್ಲಿ 155 ಭರವಸೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಭ್ರಷ್ಟಚಾರ ರಹಿತ ಆಡಳಿತ ನೀಡುವ ಮೂಲಕ ಎಲ್ಲ ವರ್ಗದ ಜನರಿಗೆ ಅನುಕೂಲಕರವಾದ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದು, ಮುಂದಿನ ಚುನಾವಣೆಯಲ್ಲಿ ಜನರ ಮುಂದೆ ಸರ್ಕಾರದ ಸಾಧನೆ ಹೇಳಲು ಸಾಕಷ್ಟು ವಿಷಯಗಳಿವೆ ಎಂದರು.

ಎಐಸಿಸಿ ಮೈಸೂರು ವಿಭಾಗೀಯ ಉಸ್ತುವಾರಿ ವಿಷ್ಣು  ಮಾತನಾಡಿ, ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಯಾರು ಕಚೇರಿಯಲ್ಲಿ ಕೂರದೆ ಜನರ ಬಳಿ ಹೋಗಿ ಸರ್ಕಾರದ ಸಾಧನೆಗಳನ್ನು ತಿಳಿಸಿ ಎಂದು ಸೂಚಿಸಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ದೃಷ್ಟಿಯಿಂದ ಬ್ಲಾಕ್‌ ಮಟ್ಟದ ಸಮಿತಿಗೆ 12 ಜನರನ್ನು ನೇಮಕ ಮಾಡಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಎಐಸಿಸಿ ಉಸ್ತುವಾರಿಗಳ ಸಮ್ಮಖದಲ್ಲಿ ವಿಭಾಗೀಯ ಸಭೆಗಳನ್ನು ನಡೆಸಲಾಗಿದ್ದು, ಪಕ್ಷವನ್ನು ತಳ ಮಟ್ಟದಿಂದ ಸದೃಢಗೊಳಿಸುವ ನಿಟ್ಟಿನಲ್ಲಿ ಈಗ ಬ್ಲಾಕ್‌ ಮಟ್ಟದ ಸಭೆಗಳಿಗೆ ಎಚ್‌.ಡಿ.ಕೋಟೆಯಿಂದಲೇ ಚಾಲನೆ ನೀಡುತ್ತಿದ್ದೇವೆ ಎಂದರು.

Advertisement

ಇಲ್ಲಿಂದ ಪ್ರಾರಂಭವಾಗಿ ಮುಂದಿನ ಎರಡು ತಿಂಗಳ ಕಾಲ ರಾಜಾದ್ಯಂತ ಎಲ್ಲಾ ಕಡೆ ಬ್ಲಾಕ್‌ ಮಟ್ಟದ ಸಭೆಗಳನ್ನು ನಡೆಸುವ ಮೂಲಕ ಇನ್ನು ಇರುವ ಒಂದು ವರ್ಷವನ್ನು ಚುನಾವಣಾ ವರ್ಷವಾಗಿ ಸ್ವೀಕರಿಸಿದ್ದು, ನಾವು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಾದರೆ ಬೂತ್‌ ಮಟ್ಟದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿಗಳಾದ ಗುರಪ್ಪನಾಯ್ಡು, ಪ್ರಕಾಶ್‌ ಕುಮಾರ್‌, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಾರದಗೌಡ, ಜಿಲ್ಲಾಧ್ಯಕ್ಷೆ ನಂದಿನಿ ಚಂದ್ರಶೇಖರ್‌, ಬೋವಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಮ್‌, ಜಿಪಂ ಸದಸ್ಯ ಶ್ರೀಕೃಷ್ಣ, ಜಿಪಂ ಮಾಜಿ ಸದಸ್ಯರಾದ ಹೆಚ್‌.ಸಿ.ಲಕ್ಷ್ಮಣ್‌, ಹೆಚ್‌.ಸಿ.ಮಂಜುನಾಥ್‌, ಹೆಚ್‌.ಸಿ.ಶಿವಣ್ಣ, ಎಪಿಎಂಸಿ ಅಧ್ಯಕ್ಷ ಸಿದ್ದರಾಜು, ಹಿರಿಯ ಮುಖಂಡರಾದ ಸುಂದರದಾಸ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಸದಸ್ಯರಾದ ಸೋಮೇಶ್‌,

-ಪರಶಿವಮೂರ್ತಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಂ.ಕೆ.ಕೃಷ್ಣ, ಎಚ್‌.ಡಿ.ಕೋಟೆ ಬ್ಲಾಕ್‌ ಸಮಿತಿ ಅಧ್ಯಕ್ಷ ಏಜಾಜ್‌ಪಾಷ, ಸರಗೂರು ಬ್ಲಾಕ್‌ ಸಮಿತಿ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ತಾಪಂ ಸದಸ್ಯ ಅಂಕನಾಯ್ಕ, ಮುಖಂಡರಾದ ತಮ್ಮಣ್ಣೇಗೌಡ, ಬಾಲಯ್ಯ, ಬುದನೂರು ಬಸವರಾಜಪ್ಪ, ಅಸ್ಸಾರ್‌ಅಹಮದ್‌, ಪುರದಕಟ್ಟೆ ಬಸವರಾಜು, ಯತೀಶ್‌, ಶಂಭುಲಿಂಗನಾಯ್ಕ, ನಂಜುಂಡಸ್ವಾಮಿ, ಮಲ್ಲೇಶ್‌, ಸಿದ್ದರಾಮು, ಆನಗಟ್ಟಿ ರಾಜು ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next