Advertisement

ಮುಕ್ತ -ನ್ಯಾಯಸಮ್ಮತ ಚುನಾವಣೆಗೆ ಶ್ರಮಿಸಿ

06:59 PM Apr 07, 2021 | Team Udayavani |

ಬೀದರ: ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ನಿಯಮಾನುಸಾರ ನಡೆಸಬೇಕು. ಚುನಾವಣೆಗೆ ಸಂಬಂಧಿ ಸಿದ ಕಾಯ್ದೆ, ನಿಯಮ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಸಲಹೆ ನೀಡಿದರು.

Advertisement

ನಗರದ ರಂಗ ಮಂದಿರದಲ್ಲಿ ಮಂಗಳವಾರ ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ನೇಮಕವಾಗಿರುವ 400 ಮತಗಟ್ಟೆ ಅಧಿಕಾರಿಗಳು ಮತ್ತು 400 ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗೆ ಮೊದಲನೇ ಹಂತದ ಪೂರ್ವಭಾವಿ ತರಬೇತಿ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.

ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಎರಡನೇ ಮತ್ತು ಮೂರನೇ ಮತಗಟ್ಟೆ ಅಧಿಕಾರಿಗಳು ನಿಗದಿಪಡಿಸಿದ ಮಸ್ಟರಿಂಗ್ ಕೇಂದ್ರದಲ್ಲಿ ಏ.16ರಂದು ಬೆಳಗ್ಗೆ 8ಕ್ಕೆ ಹಾಜರಾಗಿ ಮತಗಟ್ಟೆ ಕೌಂಟರ್‌ಗೆ ಎಲ್ಲ ಸಿಬ್ಬಂದಿಯೊಂದಿಗೆ ಹೋಗಿ ಮತಯಂತ್ರ ಮತ್ತು ಇತರೆ ಚುನಾವಣಾ ಸಾಮಗ್ರಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಂಟ್ರೋಲ್‌ ಯುನಿಟ್‌, ಬ್ಯಾಲೆಟ್ ಯುನಿಟ್‌ ಮತ್ತು ವಿವಿ ಪ್ಯಾಟ್‌ ಯುನಿಟ್ ಗಳನ್ನು ತಮ್ಮ ಮತಗಟ್ಟೆಗೆ ಸಂಬಂಧಿ ಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅಳಿಸಲಾಗದ ಶಾಯಿ, ಸ್ಟಾÂಂಪ್‌ ಪ್ಯಾಡ್‌, ಮತದಾರರ ಪಟ್ಟಿ, ಸ್ಪರ್ಧಾ ಕಣದಲ್ಲಿರುವ ಉಮೇದುವಾರರ, ಚುನಾವಣಾ ಏಜೆಂಟರುಗಳ ಮಾದರಿ ಸಹಿಯ ಪ್ರತಿಗಳು ಪಡೆದಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದರು. ಮತಗಟ್ಟೆ ಕೊಠಡಿ ಪರಿಶೀಲಿಸಿ ಯಾವುದೇ ಧರ್ಮದ ಮತ್ತು ಇತರ ಚಿತ್ರಗಳು ಚಿಹ್ನೆಗಳಿದ್ದಲ್ಲಿ
ಅದನ್ನು ತೆಗೆಸಬೇಕು. ಮತಗಟ್ಟೆ ಒಳಗಡೆ ಮೊಬೈಲ್‌ ಬಳಕೆ ನಿಷೇಧಿ ಸಲಾಗಿದೆ. ಮತ ಚಲಾಯಿಸುವ ಕಂಪಾರ್ಟ್‌ಮೆಂಟ್‌ ಸಿದ್ಧಪಡಿಸಿಕೊಳ್ಳಬೇಕು.
ಮತದಾರರು ಓಡಾಡುವ ಸ್ಥಳದಲ್ಲಿ ಬರದ ಹಾಗೆ ಸಿಯು ಮತ್ತು ಬಿಯು ಸೇರಿಸುವ ಕೇಬಲ್‌ ಸಮರ್ಪಕವಾಗಿ ಅಳವಡಿಸಬೇಕು. ಮತದಾನ ಏಜೆಂಟರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಸಬೇಕು ಎಂದು ತಿಳಿಸಿದರು.

ಚುನಾವಣಾ ಮಾಸ್ಟರ್‌ ಟ್ರೇನರ್‌ ಗೌತಮ ಅರಳಿ ಮಾತನಾಡಿ, 17ಎ ರಜಿಸ್ಟರ್‌ನಲ್ಲಿ ಪ್ರತಿಯೊಬ್ಬ ಮತದಾರನ ಸಹಿ ಅಥವಾ ಹೆಬ್ಬೆಟ್ಟಿನ  ಗುರುತು ತೆಗೆದುಕೊಳ್ಳಬೇಕು. ಎಡಗೈ ತೋರು ಬೆರಳಿನ ಉಗುರಿನ ತುದಿಯಿಂದ ಮೊದಲನೇ ಖಂಡಿಕೆಯವರೆಗೆ ಅಳಿಸಲಾಗದ ಶಾಹಿ ಹಾಕಬೇಕು ಎಂದರು. ವಿಶೇಷ ಲಕೋಟೆಗಳು, ಶಾಸನಬದ್ಧ ಲಕೋಟೆಗಳು, ಶಾಸನಬದ್ಧವಲ್ಲದ ಲಕೋಟೆಗಳು, ಇತರೆ ಲಕೋಟೆಗಳು, ಡಿಮಸ್ಟರಿಂಗ್‌ ವಿಧಾನ ಮತ್ತು ಇತರ ಮಾಹಿತಿ ನೀಡಿದರು. ಡಿಮಸ್ಟರಿಂಗ್‌ ಕೇಂದ್ರ ಬಿಡುವ ಮುನ್ನ ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡು ಹೋಗತಕ್ಕದ್ದು ಎಂದು ಮಾಹಿತಿ ನೀಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ತಹಶೀಲ್ದಾರ್‌ ಗಂಗಾದೇವಿ ಸಿ.ಎಚ್‌., ಚುನಾವಣಾ ವಿಭಾಗದ ಇತರ ಸಿಬ್ಬಂದಿ ಇದ್ದರು.

Advertisement

ಮತದಾನ; ಕೆಲವು ಸೂಚನೆ
ಏ.17ರಂದು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮತದಾನ ನಡೆಯಲಿದೆ. ಬೆಳಗ್ಗೆ 6ಕ್ಕೆ ಎಲ್ಲ ಸಿಬ್ಬಂದಿ ಸಿದ್ಧರಿರಬೇಕು. ಬೆಳಗ್ಗೆ 6.30ರೊಳಗೆ ಕನಿಷ್ಟ 50 ಮತಗಳಿಂದ ಅಣಕು ಮತದಾನ ಮುಗಿಸಬೇಕು. ಬೆಳಗ್ಗೆ 7ಕ್ಕೆ ಮತದಾನ ಪ್ರಾರಂಭಿಸಿ ಪ್ರತಿ 2 ಗಂಟೆಗೊಮ್ಮೆ ಎಷ್ಟು ಮತದಾನ ಆಗಿದೆ ಎಂಬ ಮಾಹಿತಿ ಪ್ರಿಸೈಡಿಂಗ್‌ ಅಧಿಕಾರಿಗಳು ಡೈರಿಯಲ್ಲಿ ನಮೂದಿಸಬೇಕು. ಸಂಜೆ 7ಕ್ಕೆ ಮತದಾನ ಮುಕ್ತಾಯಗೊಳಿಸಬೇಕು. ಮತದಾರರು ಇನ್ನೂ ಬಾಕಿ ಇದ್ದಲ್ಲಿ ಸಾಲಿನಲ್ಲಿರುವವರಿಗೆ ಕೊನೆಯಿಂದ ಕ್ರಮ ಸಂಖ್ಯೆ ಚೀಟಿ ನೀಡಿ ಮತದಾನಕ್ಕೆ ಅವಕಾಶ ನೀಡಬೇಕು ಎನ್ನುವ ನಿಯಮ ಪಾಲಿಸಬೇಕು. ಮತದಾನ ಮುಕ್ತಾಯವಾದ ಬಳಿಕ, ದಾಖಲಿಸಿದ ಮತ ಪತ್ರಗಳ ಮಾಹಿತಿ ಪ್ರಪತ್ರ 17 ಸಿ ನಮೂನೆಯಲ್ಲಿ ತಯಾರಿಸತಕ್ಕದ್ದು. ಪೊಲಿಂಗ್‌ ಏಜೆಂಟರುಗಳ ಸಹಿ ಪಡೆದು ಮತಯಂತ್ರ ಸೀಲ್‌ ಮಾಡತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next