Advertisement
ಫೆ. 28ರ ಒಳಗೆ ಬೇಡಿಕೆ ಈಡೇರಿಸದೆ ಇದ್ದರೆ ಮಾ. 1ರಿಂದ ಸರಕಾರಿ ನೌಕರರು ರಾಜ್ಯ ವ್ಯಾಪಿಯಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಎಚ್ಚರಿಸಿದ್ದಾರೆ.
Related Articles
Advertisement
ಹೋರಾಟದ ವೇಳೆ ಸರಕಾರ ನೌಕರರ ವಿರುದ್ಧ ಎಸ್ಮಾ ಜಾರಿಗೆ ಮುಂದಾಗಬಹುದು. ಇಲ್ಲವೇ ಕೆಲವರಿಗೆ ಬೆದರಿಸಲು ಮುಂದಾಗಬಹುದು. ಆದರೆ ಇದ್ಯಾವುದಕ್ಕೂ ಅಂಜದೇ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.
ಚುನಾವಣೆ ಬಹಿಷ್ಕಾರದ ಎಚ್ಚರಿಕೆಸಂಘದ ಮಾಜಿ ಅಧ್ಯಕ್ಷ ಭೈರಪ್ಪ ಮಾತನಾಡಿ, ರಾಜ್ಯ ನಿವೃತ್ತ ಸರಕಾರಿ ನೌಕರರು ಕೂಡ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ. ಯಾವುದೇ ಕಾರಣಕ್ಕೂ ನೌಕರರು ಹಿಂದೆ ಸರಿಯಬಾರದು. ಒಂದು ವೇಳೆ ಸರಕಾರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.