Advertisement

22ರಂದು ಬ್ಯಾಂಕ್‌ ನೌಕರರ ರಾಷ್ಟ್ರವ್ಯಾಪಿ ಮುಷ್ಕರ

07:50 AM Aug 08, 2017 | Team Udayavani |

ಚೆನ್ನೈ: ಬ್ಯಾಂಕಿಂಗ್‌ ವಲಯದಲ್ಲಿನ ಸುಧಾರಣೆ ಮತ್ತು ಇತರ ವಿಚಾರಗಳ ನ್ನೆತ್ತಿ ಇದೇ ತಿಂಗಳ 22ರಂದು ದೇಶಾದ್ಯಂತ ಮುಷ್ಕರ ನಡೆಸಲು ಬ್ಯಾಂಕ್‌ ನೌಕರರು ನಿರ್ಧರಿಸಿದ್ದಾರೆ.

Advertisement

ರಾಷ್ಟ್ರವ್ಯಾಪಿ ಬ್ಯಾಂಕಿಂಗ್‌ ವಲಯವು ಆ ದಿನ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಬ್ಯಾಂಕ್‌ ಒಕ್ಕೂಟಗಳ ಸಂಯುಕ್ತ ವೇದಿಕೆ ಹೇಳಿದೆ. ಇದೇ ವೇಳೆ, ನೌಕರರ ವೇತನ ಪರಿಷ್ಕರಣೆಯ ಬೇಡಿಕೆ ಯನ್ನೂ ಮುಂದಿಡಲಾಗುವುದು ಎಂದು ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್‌. ವೆಂಕಟಾಚಲಂ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next