ಮುಂಗಟ್ಟುಗಳ ಮಾಲೀಕರಿಗೂ ತಿಳಿವಳಿಕೆ ಕೊಡಿ, ನಿಯಮ ಪಾಲಿಸದಿದ್ದಲ್ಲಿ ಕ್ರಮ ಕೈಗೊಳ್ಳಿ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟರು. ನಗರದ ಜಿಲ್ಲಾ ಕಚೇರಿಗಳ ಸಂಕಿರ್ಣದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
Advertisement
ಕೋವಿಡ್ 19 ಸೋಂಕು ಯಾವ ಸಮಯದಲ್ಲಿ ಹೆಚ್ಚಾಗುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಸಾರ್ವಜನಿಕರು ಕೋವಿಡ್ ನಿಯಮಗಳನ್ನುಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮಕೈಗೊಳ್ಳಿ ಎಂದರು. ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 1800 ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ನಿತ್ಯ ಸರಾಸರಿ 4ರಿಂದ 5 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಂಪರ್ಕಿತರನ್ನು ಪತ್ತೆ ಹಚ್ಚಿ,ಕನಿಷ್ಠ 15-20 ಸಂಪರ್ಕಿತರ ಪರೀಕ್ಷೆ ಮಾಡಿ ಎಂದು ಸಲಹೆಕೊಟ್ಟರು. ಇದನ್ನೂ ಓದಿ:ಸುಪ್ರೀಂ ಕೋರ್ಟ್ ನಲ್ಲಿನ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ
Related Articles
Advertisement
ನ್ಯಾಯಾಲಯದ ಅದೇಶದ ಬಗ್ಗೆ ಗಮನವಿರಲಿ:ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಕ್ಟೋಬರ್‌ನಲ್ಲಿ ವರದಿ ನೀಡುವಂತೆ ನ್ಯಾಯಾಲಯದ ತಿಳಿಸಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ನ್ಯಾಯಾಲಯದಲ್ಲಿ ತಿಳಿಸಿರುವ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಿ ವರದಿ ಕೊಡುವಂತೆ ಸೂಚಿಸಿದ ಅವರು, ಮೂಲಭುತ ವ್ಯವಸ್ಥೆ ಕಲ್ಪಿಸಲು ಬೇಕಾಗುವ ಅನುದಾನವನ್ನು ಒದಗಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿಗದಿಪಡಿಸಿರುವ ವೈಯಕ್ತಿಕ ಶೌಚಾಲಯ ಹಾಗೂ 4 ಸಮುದಾಯಶೌಚಾಲಯ ದ ಕೆಲಸಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 127 ಘಟಕಗಳ ಗುರಿ ನಿಗದಿಯಾಗಿದ್ದು, ಘಟಕಗಳ ನಿರ್ವಹಣೆಗೆ ಕನಿಷ್ಠ 10-15 ಕುಂಟೆ ಸ್ಥಳವನ್ನು ಗುರುತಿಸಿ ಕೊಡಿ. ಬೂದು ನೀರು ಹಾಗೂ ಕಪ್ಪು ನೀರು ನಿರ್ವಹಣೆ ಗಾಗಿ ಗುರಿ ನಿಗದಿಯಾಗಿದ್ದು, ಸೋಕ್ ಪಿಟ್ ನಿರ್ಮಾಣಗಳ ಕೆಲಸಗಳನ್ನು ಅಕ್ಟೋಬರ್ ಅಂತ್ಯದೊಳಗೆ ತಾಲೂಕುವಾರು ಗುರಿ ನಿಗದಿ ಪಡಿಸಿಕೊಂಡು ಪೂರ್ಣಗೊಳಿಸಿ ಎಂದರು. ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್.ಕೆ, ಎಡೀಸಿ ಜವರೇಗೌಡ ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್,ಜಿಲ್ಲಾಪಂಚಾಯತಿಉ±ಕಾ ರ್ಯದರ್ಶಿ ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜ ನಾಧಿಕಾರಿ ಚಿಕ್ಕ ಸುಬ್ಬಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಎಲ್ಲಾ ತಾಲೂಕುಗಳ ತಹಶೀಲ್ದಾರ್ ಗಳು ಹಾಗೂ ಇತರೆ ಅಧಿಕಾರಿಗಳು ಇದ್ದರು.