Advertisement
ಹೇಗಿದೆ ಹೊಸ ದರ?ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದರೆ ದಂಡದ ಮೊತ್ತ 1 ಸಾವಿರ ರೂ.ಗೆ ಏರಿಸಲಾಗಿದೆ. ಅನಂತರದಲ್ಲಿ ಎಷ್ಟೇ ಬಾರಿ ಸಿಕ್ಕಿ ಬಿದ್ದರೂ 2 ಸಾವಿರ ರೂ. ಕಕ್ಕಬೇಕು. ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದರೆ ಮತ್ತು ನಿಗದಿತ ವೇಗಮಿತಿ ಮೀರಿದರೆ ವಿಧಿಸುವ ದಂಡವನ್ನು 1,000 ರೂ.ಗೆ ಹೆಚ್ಚಿಸಲಾಗಿದೆ. ವಿಮೆ ರಹಿತ ವಾಹನ ಚಾಲನೆಗೂ ದಂಡ 1 ಸಾವಿರ ರೂ. ನೋಂದಣಿಯಾಗದ ವಾಹನ ಚಾಲನೆಗೆ ಮೊದಲ ಬಾರಿ 5 ಸಾವಿರ ರೂ. ಮತ್ತು ಅನಂತರದಲ್ಲಿ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಫಿಟೆ°ಸ್ ಪ್ರಮಾಣಪತ್ರ ಇಲ್ಲದ ವಾಹನಗಳಿಗೆ ಮೊದಲ ಬಾರಿ 2 ಸಾವಿರ ರೂ. ಮತ್ತು ಅನಂತರದಲ್ಲಿ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಹೊಸದರ ಅನುಷ್ಠಾನಗೊಳಿಸುವಂತೆ ಈಗಾಗಲೇ ಆದೇಶ ಬಂದಿದೆ. ಆದರೆ ಎಲೆಕ್ಟ್ರಾನಿಕ್ ಡಿವೈಸ್‌ಗೆ ಹೊಸದರ ಅಪ್‌ಡೇಟ್ ಆಗಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. – ನಿಶಾ ಜೇಮ್ಸ್
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬೆಂಗಳೂರಿನಲ್ಲಿ ಮಾತ್ರ ಡಿವೈಸ್ ಅಪ್‌ಡೇಟ್
ಹೊಸ ದರವನ್ನು ಟ್ರಾಫಿಕ್ ಪೊಲೀಸರ ಡಿವೈಸ್ ಸಾಫ್ಟ್ ವೇರ್‌ಗೆ ಅಪ್‌ಡೇಟ್ ಬೆಂಗಳೂರಿನಲ್ಲಿ ಮಾತ್ರ ಮಾಡಲಾಗುತ್ತಿದೆ. ಎಲ್ಲ ಜಿಲ್ಲೆಯ ಡಿವೈಸ್‌ಗಳಿಗೆ ಇದನ್ನು ಅಳವಡಿಸಲು ಸಾಕಷ್ಟು ಸಮಯಾವಕಾಶ ಬೇಕು. ಉಭಯ ಜಿಲ್ಲೆಯಲ್ಲಿ ನೋಂದಾಯಿತ ಡಿವೈಸ್ ಅಪ್‌ಡೇಟ್ ಮಾಡುವ ಸೆಂಟರ್‌ಗಳನ್ನು ಗುರುತಿಸುವ ಕೆಲಸವೂ ನಡೆಯುತ್ತಿದೆ.
ಸರಕಾರದ ಅಧಿಸೂಚನೆ ತತ್‌ಕ್ಷಣದಿಂದ ಜಾರಿಗೊಳಿಸುವ ನಿಟ್ಟಿನಲ್ಲಿ ಬಂದ ಮಾಹಿತಿಯಂತೆ ಈಗಾಗಲೇ ಪೊಲೀಸ್ ಠಾಣೆಗಳಿಗೆ ಒದಗಿಸಿರುವ ಪಿಡಿಎ ಉಪಕರಣಗಳಲ್ಲಿ ಪರಿಷ್ಕೃತ ದರವನ್ನು ಅಡಕಗೊಳಿ ಸಲು ಸಂಬಂಧಪಟ್ಟ ಠಾಣಾಧಿ ಕಾರಿಗಳು ಕ್ರಮ ಕೈಗೊಳ್ಳುವಂತೆ ಮತ್ತು ಪಿಡಿಎ ಉಪಕರಣಗಳಲ್ಲಿ ಪರಿಷ್ಕೃತ ದರವನ್ನು ಅಡಕಗೊಳಿಸುವ ತನಕ ಹಳೆಯ ವಿಧಾನದ ಪ್ರಕಾರ ದಂಡ ವಸೂಲಾತಿ ಪುಸ್ತಕದಲ್ಲಿಯೇ ಪರಿಷ್ಕೃತ ದರದಲ್ಲಿಯೇ ಪ್ರಕರಣಗಳನ್ನು ಕಡ್ಡಾಯವಾಗಿ ದಾಖಲಿಸಲು ಸೂಚಿಸಲಾಗಿದೆ.
Related Articles
Advertisement