Advertisement

ಕಠಿನ ನಿಯಮ ಹೇರಿಕೆ: ಆಟೋ ಸಂಘಟನೆಗಳಿಂದ ತೀವ್ರ ಪ್ರತಿರೋಧ

12:04 AM Jul 13, 2019 | mahesh |

ನಗರ: ಶಾಲಾ ಮಕ್ಕಳನ್ನು ಕರೆದೊಯ್ಯುವ ಮತ್ತು ಬಾಡಿಗೆ ನಡೆಸುವ ರಿಕ್ಷಾಗಳ ಮೇಲೆ ಪೊಲೀಸ್‌ ಇಲಾಖೆ ಕಠಿನ ನಿಯಮಗಳನ್ನು ಹೇರಿ ಉಂಟಾಗಿರುವ ಸಮಸ್ಯೆಗಳ ವಿರುದ್ಧ ಪುತ್ತೂರಿನಲ್ಲಿ ರಿಕ್ಷಾ ಚಾಲಕ-ಮಾಲಕರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ.

Advertisement

ಜು. 17: ಪ್ರತಿಭಟನೆ
ಕಾನೂನು ಪಾಲನೆ, ಕಾನೂನು ರಕ್ಷಣೆ ಹೆಸರಿನಲ್ಲಿ ಪೊಲೀಸರು ಶಾಲಾ ಮಕ್ಕಳನ್ನು ಹಾಗೂ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ರಿಕ್ಷಾ ಚಾಲಕರ ಮೇಲೆ ಪ್ರಕರಣ ದಾಖಲಿಸು ವುದನ್ನು ಖಂಡಿಸಿ ಪುತ್ತೂರು ತಾಲೂಕು ಆಟೋ ರಿಕ್ಷಾ ಚಾಲಕ -ಮಾಲಕರ ಸಂಯುಕ್ತ ಹೋರಾಟ ಸಮಿತಿಯು ಜು. 17ರಂದು ಪ್ರತಿಭಟನೆ ನಡೆಸಿ ಬಳಿಕ ಪುತ್ತೂರು ಸಹಾಯಕ ಕಮಿಷನರ್‌ಗೆ ಮನವಿಯನ್ನು ನೀಡಲು ನಿರ್ಧರಿಸಲಾಗಿದೆ.

ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ ಎಸ್‌.ಡಿ.ಟಿ.ಯು., ಸ್ನೇಹ ಸಂಗಮ ಹಾಗೂ ಕೆ.ಆರ್‌.ಎಸ್‌. ಆಟೋ ರಿಕ್ಷಾ ಚಾಲಕರ -ಮಾಲಕರ ಸಂಘದ ಸದಸ್ಯರು ಪದಾಧಿಕಾರಿಗಳು ಈ ನಿರ್ಣಯ ಕೈಗೊಂಡರು.

ರಿಕ್ಷಾಗಳ ಮೇಲೆ ಮಾತ್ರ ಹೇರಿಕೆ
ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ್‌ ಕುಲಾಲ್‌ ಮಾತನಾಡಿ, ಸಂಚಾರಿ ನಿಯಮವನ್ನು ಹೆಚ್ಚಾಗಿ ಆಟೋ ರಿಕ್ಷಾಗಳಿಗೆ ಮಾತ್ರ ಹೇರುತ್ತಿದ್ದಾರೆ. ಎಲ್ಲರಿಗೂ ಒಂದೇ ತರಹದ ಕಾನೂನು ಮಾಡಬೇಕು. ಆಟೋ ರಿಕ್ಷಾದವರಿಗೆ ಬೇರೆ ಕಾನೂನು ಹಾಗೂ ಇನ್ನಿತರ ವಾಹನಗಳಿಗೆ ಬೇರೆ ಕಾನೂನು ಮಾಡುವುದನ್ನು ನಾವು ಖಂಡಿಸುತ್ತೇವೆ. ಖಾಸಗಿ ವಾಹನಗಳಲ್ಲಿ ಅತಿ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಳೆ ನಿಯಮವಿರಲಿ
ಪುತ್ತೂರು ಪೊಲೀಸ್‌ ಠಾಣೆಗೆ ಹೊಸ ದಾಗಿ ಆಗಮಿಸುವ ಠಾಣಾ ಧಿಕಾರಿಗಳು ಸಂಚಾರಿ ನಿಯಮ ಗಳನ್ನು ಹೊಸದಾಗಿ ಏಕಾ ಏಕಿಯಾಗಿ ಜಾರಿಗೊಳಿ ಸುವುದ ರಿಂದ ತೊಂದರೆ ಯಾಗುತ್ತಿದೆ. ಹೊಸ ನಿಯಮಗಳನ್ನು ಕೇವಲ ಆಟೋ ರಿಕ್ಷಾ ದವರಿಗೆ ಮಾತ್ರ ಮಾಡಲಾಗಿದೆ. ಅದನ್ನು ಹಿಂಪಡೆದು ಹಳೆ ನಿಯಮವನ್ನು ಪುನಃ ಜಾರಿಗೊಳಿಸುವಂತೆ ಆಗ್ರಹಿ ಸಲು ಸಮಿತಿಯು ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಿತು.

Advertisement

ಎಸ್‌ಡಿಟಿಯುನ ಆಟೋ ಚಾಲಕ- ಮಾಲಕ ಸಂಘದ ಅಧ್ಯಕ್ಷ ಬಾತೀಶ್‌ ಬಡಕೋಡಿ, ಕಾರ್ಯದರ್ಶಿ ಆಸೀಫ್‌, ಕೆ.ಆರ್‌.ಎಸ್‌.ನ ಸಂಘದ ಅಧ್ಯಕ್ಷ ನಾಸಿರ್‌ ಇಡಬೆಟ್ಟು, ಸಂಯುಕ್ತ ಹೋರಾಟ ಸಮಿತಿಯ ಕಾರ್ಯದರ್ಶಿ ಇಸ್ಮಾಯಿಲ್‌, ಸ್ನೇಹ ಸಂಗಮದ ಅಧ್ಯಕ್ಷ ಸಿಲ್ವಸ್ಟರ್‌, ಕೋಶಾಧಿಕಾರಿ ಶಮೀರ್‌ ನಾಜೂಕ್‌ ಉಪಸ್ಥಿತರಿದ್ದರು.

ಸ್ನೇಹ ಸಂಗಮದ ಕಾರ್ಯದರ್ಶಿ ಚನಿಯಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು.

ಸಹಾಯಕ ಆಯುಕ್ತರಿಗೆ ಬಿಎಂಎಸ್‌ನಿಂದ ಮನವಿ
ನಗರ ಜು. 12: ರಿಕ್ಷಾ ಚಾಲಕರ ಮೇಲೆ ಬಾಡಿಗೆ ಮಾಡುವಾಗ ಹೊಸ ನಿಯಮಗಳನ್ನು ಜಾರಿ ಮಾಡಿರುವುದನ್ನು ಖಂಡಿಸಿ ಪುತ್ತೂರು ಬಿ.ಎಂ.ಎಸ್‌. ಆಟೋ ರಿಕ್ಷಾ ಚಾಲಕ-ಮಾಲಕರ ಸಂಘವು ಪುತ್ತೂರು ಸಹಾಯಕ ಕಮಿಷನರ್‌ಗೆ ಶುಕ್ರವಾರ ಮನವಿ ನೀಡಿತು.

ಬಿ.ಎಂ.ಎಸ್‌. ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಭಾಸ್ಕರ್‌ ನಾಯ್ಕ ಮಾತನಾಡಿ, ಕಳೆದ ಕೆಲವು ದಿನಗಳಿಂದ ಆಟೋ ರಿಕ್ಷಾದ ಚಾಲಕರ ಮೇಲೆ ವಿವಿಧ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ಎಲ್ಲರಿಗೂ ತೊಂದರೆಗಳಾಗುತ್ತಿದೆ. ನಾವು ಗ್ರಾಮಾಂತರ ಪ್ರದೇಶಗಳಿಂದ ಜನರನ್ನು ರಿಯಾಯಿತಿ ದರದಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ ಹಾಗೂ ಬಡ ಮಕ್ಕಳನ್ನು ರಿಯಾಯಿತಿ ದರದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೆವು. ಆದರೆ ಇದೀಗ ಪೊಲೀಸರು ಅನಗತ್ಯ ನಿಯಮಗಳನ್ನು ಹೇರಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದರು.

ಶಾಸಕರಿಗೂ ಮನವಿ
ಬಿ.ಎಂ.ಎಸ್‌. ಆಟೋ ರಿಕ್ಷಾ ಚಾಲಕ-ಮಾಲಕರ ಸಂಘವು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ, ಪುತ್ತೂರು ಶಾಸಕರಿಗೆ, ಪುತ್ತೂರು ಡಿವೈಎಸ್ಪಿ, ಪುತ್ತೂರು ಆರ್‌ಟಿಒಗೆ, ಪುತ್ತೂರು ಎಸ್‌ಐಗೆ ಹಾಗೂ ಸಂಚಾರ ಎಸ್‌ಐಗೆ ಮನವಿಯನ್ನು ನೀಡಿದರು.

ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ ಮಾತನಾಡಿ, ಈ ವಿಷಯವನ್ನು ಮುಂದಿನ ಸಭೆಯಲ್ಲಿ ವಿಚಾರಣೆ ಮಾಡುತ್ತೇನೆ ಎಂದು ಸಂಘಟನೆಯವರಿಗೆ ಭರವಸೆ ನೀಡಿದರು.

ಸಂಘದ ಕಾರ್ಯದರ್ಶಿ ಮಹೇಶ್‌ ಪ್ರಭು, ಕೋಶಾಧಿಕಾರಿ ವಿಕ್ರಮ್‌ ಪರ್ಲಡ್ಕ, ಮಾಜಿ ಅಧ್ಯಕ್ಷ ರಂಜನ್‌, ಗೌರವಾಧ್ಯಕ್ಷ ಬಿ.ಕೆ. ದೇವಪ್ಪ ಗೌಡ ಹಾಗೂ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next