ಉಡುಪಿ: ಸಂಘಟನ ಶಕ್ತಿಯಿಂದ ಎಂತಹ ಕಠಿನವಾದ ಸಮಸ್ಯೆಯನ್ನೂ ಲೀಲಾಜಾಲವಾಗಿ ಬಗೆಹರಿಸಲು ಸಾಧ್ಯವಿದೆ ಎನ್ನುವುದಕ್ಕೆ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಒಂದು ಉದಾ ಹರಣೆ. ಅಯ್ಯಪ್ಪ ಕ್ಷೇತ್ರಕ್ಕೆ ಬಂದೊದ ಗಿದ ಸಮಸ್ಯೆಯನ್ನು ಪರಿಹರಿಸಲು ಪಣತೊಟ್ಟ ಈ ಸಂಘಟನೆಯು ನ್ಯಾಯಾಲಯವನ್ನೇ ನಡುಗಿಸಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾ ಧೀಶತೀರ್ಥ ಶ್ರೀಪಾದರು ನುಡಿದರು.
ಉಡುಪಿ ಜಿಲ್ಲಾ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ವತಿಯಿಂದ ರಥಬೀದಿಯಲ್ಲಿ ರವಿವಾರ ನಡೆದ ಶ್ರೀ ಅಯ್ಯಪ್ಪ ಭಕ್ತರ ಬೃಹತ್ ಸಂಕೀರ್ತನ ಶೋಭಾಯಾತ್ರೆಯ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಶ್ರೀಪಾದರು ಆಶೀರ್ವಚನ ನೀಡಿದರು.
ಸ್ವಾಗತ ಸಮಿತಿ ಜಿಲ್ಲಾ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್ ಮಲ್ಪೆ ಅಧ್ಯಕ್ಷತೆ ವಹಿಸಿದ್ದರು. ಎಬಿವಿಪಿ ಮಂಗಳೂರು ವಿಭಾಗದ ಪ್ರಮುಖ ಕೇಶವ ಬಂಗೇರ, ರಾಜ್ಯಾಧ್ಯಕ್ಷ ವಿ. ಕೃಷ್ಣಪ್ಪ ಬೆಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಕೃಷ್ಣಯ್ಯ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಹರೀಶ್‌ರಾಮ್ ಬನ್ನಂಜೆ, ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಗುರುಸ್ವಾಮಿ ಕಾರ್ಕಳ, ಕಾರ್ಯಾಧ್ಯಕ್ಷ ಬಾಲಕೃಷ್ಣ ಗುರುಸ್ವಾಮಿ ಮಲ್ಪೆ, ಜತೆಕಾರ್ಯದರ್ಶಿ ಕೃಷ್ಣ ಆಚಾರ್ ಮೂಡುಬೆಳ್ಳೆ, ಸಂಘಟನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಗಣೇಶ್ ಕೋಟ, ಉದ್ಯಮಿ ಆನಂದ ಪಿ. ಸುವರ್ಣ, ವಲಯಾಧ್ಯಕ್ಷರಾದ ಧನಂಜಯ ಮಲ್ಪೆ, ಹರೀಶ್ ಶೆಟ್ಟಿ ಕಲ್ಯಾ, ಬಾಬು ಶೆಟ್ಟಿ, ಗೋಪಾಲ ಗುರುಸ್ವಾಮಿ, ಭೋಜರಾಜ ಕಿದಿಯೂರು ಉಪಸ್ಥಿತರಿದ್ದರು.
ಅಧ್ಯಕ್ಷ ರಾಧಾಕೃಷ್ಣ ಮೆಂಡನ್ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ ಹಾವಂಜೆ ಅವರು ವಂದಿಸಿದರು.
8 ಕಡೆ ಅನ್ನದಾನದ ವ್ಯವಸ್ಥೆ
ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ್ ಮಾತನಾಡಿ, ಧರ್ಮ ಮತ್ತು ಆಚಾರ, ವಿಚಾರಗಳಲ್ಲಿ ವ್ಯತ್ಯಾಸ ವಾಗುವ ಸಂದರ್ಭ ಮತ್ತು ವ್ರತಧಾರಿ ಗಳಿಗೆ ಅವಶ್ಯವಿರುವ ಸವಲತ್ತುಗಳನ್ನು ಸರಕಾರದಿಂದ ಪಡೆಯಲು ಹೋರಾಟ ನಡೆಸಲು ಸಂಘಟನೆ ಕೆಲಸ ನಿರ್ವಹಿಸುತ್ತದೆ. ವ್ರತಧಾರಿಗಳಿಗೆ ಯಾವುದೇ ಸಮಸ್ಯೆಯಾದರೂ ಅಲ್ಲಲ್ಲಿ ಕಚೇರಿಗಳನ್ನು ತೆರೆಯಲಾಗಿದೆ. ಶಬರಿ ಮಲೆಯಲ್ಲಿ ಎಂಟು ಕಡೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ ಎಂದರು.
17 ರಾಜ್ಯಗಳಲ್ಲಿದೆ ಸೇವಾ ಸಮಾಜಂ
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಪ್ರಸ್ತಾವನೆ ಗೈದು, ದೇಶದ 17 ರಾಜ್ಯಗಳಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಕಾರ್ಯನಿರ್ವಹಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ 450ಕ್ಕೂ ಅಧಿಕ ಅಯ್ಯಪ್ಪಶಿಬಿರಗಳಿವೆ ಎಂದರು. ಅಯ್ಯಪ್ಪ ಶಿಬಿರಗಳು ಮುಂದಿನ ದಿನಗಳಲ್ಲಿ ಧರ್ಮ ಜಾಗೃತಿ, ಗೋ ರಕ್ಷಣೆ, ಸೇವಾ ಕಾರ್ಯ, ಸ್ವತ್ಛತೆ ಮೊದಲಾದವು ಗಳಲ್ಲಿಯೂ ತೊಡಗಿಕೊಳ್ಳುವ ಆಶಯ ವ್ಯಕ್ತಪಡಿಸಿದರು.