Advertisement
ಕುಂದಾಪುರದ ಅಮಾಸೆಬೈಲಿನ ಕೆಲಾ ಪರಿಸರದ ಜನ ಹಾಲಿನ ಡೈರಿಗೆ ಹೋಗಿ ಬರಲು ಒಟ್ಟಾರೆ 8 ಕಿ.ಮೀ. ನಡೆಯಬೇಕಾಗಿದೆ. ಇನ್ನು ಪಡಿತರ ತರಬೇಕಾದರೆ 16-18 ಕಿ.ಮೀ. ದೂರ ಕ್ರಮಿಸಬೇಕು. ಇಷ್ಟು ದೂರ ಬೆಳಗ್ಗೆ 6ರಿಂದ 10ರೊಳಗೆ ನಡೆದುಕೊಂಡು ಹೋಗಿ, 20-25 ಕೆ.ಜಿ. ಅಕ್ಕಿ, ಸಕ್ಕರೆ ತರಲು ಸಾಧ್ಯವೇ ಎನ್ನುವುದು ಜನರ ಪ್ರಶ್ನೆಯಾಗಿದೆ.
ಸರಕಾರ, ಜಿಲ್ಲಾಡಳಿತಗಳು ಲಾಕ್‌ಡೌನ್ ಮಾರ್ಗಸೂಚಿ ಮಾಡುವಾಗ ಗ್ರಾಮೀಣ ಭಾಗದ ಜನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಿ. ನಮ್ಮಲ್ಲಿ ದಿನಸಿ ತರಬೇಕೆಂದ್ರೆ 10 ಕಿ.ಮೀ. ನಡೆದೇ ಹೋಗಬೇಕು. ಇನ್ನು ಮೆಡಿಕಲ್‌ಗೆ ಹೋಗಬೇಕು ಅಂದ್ರೆ 20 ಕಿ.ಮೀ ಕ್ರಮಿಸಬೇಕು. ಹೀಗಿರುವಾಗ ನಡೆದುಕೊಂಡೇ ಹೋಗಬೇಕು ಅಂತ ನಿಯಮ ರೂಪಿಸಿದ್ರೆ ಈ ಕಾಡಿನ ಮಧ್ಯೆ ಜನರು ಹೇಗೆ ಹೋಗಬೇಕು..? ಮೊದಲೇ ಮೂಲ ಸೌಕರ್ಯಗಳಿಲ್ಲದೆ ಒದ್ದಾಡುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆಯಬೇಡಿ.ಸರಕಾರ ಮತ್ತು ಜಿಲ್ಲಾಡಳಿತ ದಯವಿಟ್ಟು ಹಳ್ಳಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅವರಿಗೆ ದಿನಸಿ, ಪಡಿತರ, ಔಷಧಿಯಂತಹ ಅಗತ್ಯ ವಸ್ತುಗಳನ್ನು ತರುವುದಕ್ಕೆ ವಾಹನದ ಬಳಕೆಗೆ ಅವಕಾಶ ನೀಡಲಿ ಎನ್ನುವುದು ಗ್ರಾಮೀಣ ಪ್ರದೇಶದ ಜನರ ಒತ್ತಾಯವಾಗಿದೆ.
Related Articles
ಗ್ರಾಮೀಣ ಭಾಗದಲ್ಲಿ ಪಡಿತರ ತರಲು ಸಾಕಷ್ಟು ದೂರವಿರುವುದರಿಂದ, ಪಡಿತರಕ್ಕೆ ಬಾಡಿಗೆ ವಾಹನ ಮಾಡಿಕೊಂಡು ಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಹೈನುಗಾರಿಕೆ, ಕೃಷಿ ಸಂಬಂಧಿ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ.
– ಜಿ. ಜಗದೀಶ್, ಉಡುಪಿ
Advertisement