Advertisement

ಬೆಂಗಳೂರು ಭೂಕಬಳಿಕೆ ನಿಯಂತ್ರಣಕ್ಕೆ ಕಠಿಣ ಕಾನೂನು : ಆರ್‌. ಅಶೋಕ್‌

09:30 PM Mar 17, 2021 | Team Udayavani |

ವಿಧಾನಸಭೆ: ಬೆಂಗಳೂರಿನಲ್ಲಿ ಭೂ ಕಬಳಿಕೆದಾರರನ್ನು ನಿಯಂತ್ರಿಸಲು ಕಠಿಣ ಕಾನೂನು ತರಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

Advertisement

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಜೆಡಿಎಸ್‌ ಸದಸ್ಯ ಎ.ಟಿ. ರಾಮಸ್ವಾಮಿ, ಬೆಂಗಳೂರಿನ ಬಿಎಂಆರ್‌ಡಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಬಜೆಟ್‌ ಗಾತ್ರದ ಎರಡು ಪಟ್ಟು ದರದ ಭೂ ಕಬಳಿಕೆಯಾಗಿದೆ. ಅದನ್ನು ಪ್ರಶ್ನಿಸಲು ಯಾರಿಗೂ ಆಗುತ್ತಿಲ್ಲ.

ಇದೆಲ್ಲವನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾದರೆ, ಸದನಕ್ಕೆ ಬರಬೇಕೆ ಎಂದು ಪ್ರಶ್ನಿಸಿದರು. ಸುಳ್ಳು ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡು ಸುಮಾರು 5 ಸಾವಿರ ಅಕ್ರಮ ಲೇಔಟ್‌ಗಳು ಹುಟ್ಟಿಕೊಂಡಿವೆ. ಇದು ಸುಮಾರು 50 ಸಾವಿರ ಕೋಟಿ ರೂ. ಅವ್ಯವಹಾರ, ಬಿಡಿಎ ಕೇವಲ ಅಭಿವೃದ್ಧಿ ಮಾಡುವುದಲ್ಲ. ಅಕ್ರಮಗಳನ್ನು ತಡೆಯುವ ಕೆಲಸ ಮಾಡಬೇಕು ಎಂದರು.
ಅವರಿಗೆ ಧ್ವನಿಗೂಡಿಸಿದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಬೆಂಗಳೂರು ಸುತ್ತ ಮುತ್ತ ನೈಸ್‌ ಕಂಪನಿ ಜಮೀನು ವಾಪಸ್‌ ಪಡೆದರೆ. ಎರಡು ಬಜೆಟ್‌ ಅನುದಾನ ಬರಲಿದೆ ಎಂದರು.

ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್‌. ಅಶೋಕ್‌, ಇದು ಈಗ ಆರಂಭವಾಗಿರುವ ಖಾಯಿಲೆ ಅಲ್ಲ. ಈಗ ಬೃಹದಾಕಾರವಾಗಿ ಬೆಳೆದು ನಿಂತಿ¨ªಾರೆ. ನಾನು ಬಂದ ಮೇಲೆ ಖಾಸಗಿ ಲೇಔಟ್‌ಗಳಿಗೆ ಅನುಮತಿ ನೀಡುತ್ತಿಲ್ಲ . ಎಂಟು ತಹಸೀಲ್ದಾರ್‌ಗಳನ್ನು ಅಮಾನತು ಮಾಡಿದ್ದೇನೆ ಎಂದರು.

ಇದನ್ನೂ ಓದಿ :ನವದೆಹಲಿ ಜಗತ್ತಿನ ನಂ.1 ಕಲುಷಿತ ರಾಜಧಾನಿ! ಸತತ 3ನೇ ಬಾರಿಗೆ ಈ ಅಪಖ್ಯಾತಿ

Advertisement

ನಮಗೆ ನೈಸ್‌ ರಸ್ತೆಯ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಬೆಂಗಳೂರು ಮೈಸೂರು ರಸ್ತೆಗೆ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ನೈಸ್‌ ರಸ್ತೆ ಅಗತ್ಯವಿಲ್ಲ. ನೈಸ್‌ ನಿಂದ 400. ಎಕರೆ ಜಮೀನು ವಾಪಸ್‌ ಬರಲಿದೆ. ಸುಪ್ರೀಂ ಕೋರ್ಟ್‌ ಕೂಡ ಜಮೀನು ವಾಪಸ್‌ ಪಡೆಯುವಂತೆ ಹೇಳಿದೆ. ಆದರೆ, ವಾಪಸ್‌ ಪಡೆಯಲು ಆಗಿಲ್ಲ. ಇದನ್ನು ತಡೆಯಲು ಕಠಿಣ ಕಾನೂನು ತರಲು.ನಾನು ಸಿದ್ದ ಇದ್ದೇನೆ. ಭೂಗಳ್ಳರು ಎಲ್ಲಿಯೂ ಜಾಮೀನು ಪಡೆಯಲು ಸಾಧ್ಯವಾಗದಂತೆ ಕಾನೂನು ಬಿಗಿಗೊಳಿಸಲು ನಾನು ಸಿದ್ದನಿದ್ದೇನೆ. ಅದಕ್ಕೆ ಪೂರಕವಾದ ಸಲಹೆ ನೀಡುವಂತೆ ಮನವಿ ಮಾಡಿದರು.

ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಿವಲಿಂಗೇಗೌಡ ಸಚಿವರು ಅಸಹಾಯಕತೆ ತೋರಿಸುವುದಾರೆ ನಾವು ಅಧಿವೇಶನಕ್ಕೆ ಬಂದು ಪ್ರಯೋಜನ ಏನು ? ತಡೆಯಾಜ್ಞೆ ನೀಡುವ ಭೂ ನ್ಯಾಯಮಂಡಳಿಯನ್ನು ರದ್ದುಮಾಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ, ಕಂದಾಯ ಇಲಾಖೆಯ ಸೆಕ್ಸನ್‌ 192 ಕಾಯ್ದೆಗೆ ತಿದ್ದುಪಡಿ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಸಣ್ಣ.ಪುಟ್ಟ. ಒತ್ತುವರಿ ಮಾಡಿದವರ ಮೇಲೆಕೇಸ್‌ .ಹಾಕಿ ಅವರನ್ನು ಬೆಂಗಳೂರಿಗೆ ಅಲೆದಾಡುವಂತೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಒಂದು ಪ್ರಕರಣವೂ ದಾಖಲಾಗಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಂದಾಯ ಸಚಿವ ಆರ್‌. ಅಶೋಕ್‌ ಮಾತನಾಡಿ, ಭೂ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ. ಬೊಪಯ್ಯ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಆ ಸಮಿತಿ ಅಂತಿಮ ವರದಿ ನೀಡಿದರೆ ಕಠಿಣ ಕಾನೂನು ಜಾರಿಗೆ ಸಿದ್ದರಿದ್ದೇವೆ ಎಂದು ಹೇಳಿದರು.
ಆದರೆ, ಕೆ.ಜಿ ಭೋಪಯ್ಯ ನಾವು ಮಾಡುವ ಶಿಫಾರಸ್ಸು ಸರ್ಕಾರದ ಮಟ್ಟದಲ್ಲಿ ಜಾರಿಗೆ ಬರುತ್ತಿಲ್ಲ. ಸರ್ಕಾರ ನಮ್ಮ ಶಿಫಾರಸ್ಸು ಜಾರಿಗೆ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ :ಯುದ್ಧ ತರಬೇತಿ ಹಾರಾಟದ ವೇಳೆ ಮಿಗ್‌ ಪತನ : ಪೈಲಟ್‌ ಸಾವು

ಎ.ಟಿ. ರಾಮಸ್ವಾಮಿ ಮಾತು ಮುಂದುವರೆಸಿ, ಸರ್ಕಾರ ನೇಮಿಸುವ ವಕೀಲರನ್ನು ಭೂಗಳ್ಳಲು ಬುಕ್‌ ಮಾಡಿಕೊಂಡು ತಮ್ಮ ಪರವಾಗಿ ಬಲವಾಗಿ ವಾದ ಮಾಡುವ ವಕೀಲರನ್ನು ನೇಮಿಸಿಕೊಳ್ಳುತ್ತಾರೆ ಎಂದರು.

ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ಬಸನಗೌಡ ಪಾಟೀಲ… ಯತ್ನಾಳ್‌, ನ್ಯಾಯಾಂಗದಲ್ಲಿಯೂ ಅಕ್ರಮ ನಡೆಯುತ್ತದೆ. ಕೇವಲ ವಕೀಲರು ಮಾತ್ರವಲ್ಲ ನ್ಯಾಯಮುಯರ್ತಿಗಳು ನಿವೃತ್ತಿ ಸಮಯದಲ್ಲಿ ಗಂಟು ಬರುತ್ತದೆ ಎಂದರೆ ತೆಗೆದುಕೊಂಡು ಜಾತ್ರೆ ಮಾಡುತ್ತಾರೆ. ನೈಸ್‌ ಬಗ್ಗೆ ಎಲ್ಲರೂ ಮಾತನಾಡುತ್ತಿರಿ ಇಲ್ಲಿದ್ದವರು ಎಷ್ಟು ಜನ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದೀರಿ ಅದನ್ನು ವಾಪಸ್‌ ನೀಡಿ. ಆ ಮೇಲೆ ಬೇರೆಯವರ ಒತ್ತುವರಿ ತೆರವು ಮಾಡಿ, ಕಳ್ಳರು ಎಲ್ಲಿದ್ದಾರೆ ಅಂತ ಹುಡುಕಿದರೆ ಎಲ್ಲರೂ ಇಲ್ಲೇ ಇದ್ದಾರೆ ಎಂದು ಛೇಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next