Advertisement

ಡ್ರಗ್ ಮಾಫಿಯಾ ಮಟ್ಟಹಾಕಲು ಕಾನೂನು ಇನ್ನಷ್ಟು ಬಿಗಿಗೊಳಿಸಲು ಕ್ರಮ: ಬಸವರಾಜ್ ಬೊಮ್ಮಾಯಿ

01:31 PM Sep 10, 2020 | keerthan |

ಬೆಂಗಳೂರು: ರಾಜ್ಯದ ಡ್ರಗ್ ಪ್ರಕರಣವನ್ನು ಸಿಸಿಬಿ ಪೊಲೀಸರು ಬಹಳ ವೃತ್ತಿಪರವಾಗಿ, ಕ್ರಮಬದ್ಧವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆ ಜಾಡು ಹಿಡಿದು ಎಷ್ಟೇ ದೊಡ್ಡವರಿರಲಿ ವಿಚಾರಣೆ ಮಾಡುವುದು ಶತ ಸಿದ್ಧ. ಕಾನೂನಿನ ಅನ್ವಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ವ್ಯವಸ್ಥಿತವಾಗಿ ಸಾಕ್ಷಿಗಳ ಆಧಾರಗಳ ಮೇಲೆ ಕ್ರಮ ಬದ್ಧವಾಗಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಅನುಕೂಲ ಮಾಡಿಕೊಡಿ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ ನಮ್ಮ ಕಾನೂನು ತಜ್ಞರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಕಾನೂನು ಇನ್ಮಷ್ಟು ಬಿಗಿಗೊಳಿಸಲು ಕಾನೂನು ಸಚಿವರ ಜೊತೆಗೂ ಚರ್ಚೆ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಹೊನ್ನಾವರದಲ್ಲಿ ಬೋಟ್ ದುರಂತ: ಅಲೆಗಳ ಅಬ್ಬರಕ್ಕೆ ಅಳಿವೆಯಲ್ಲಿ ಮುಳುಗಿದ ಬೋಟ್

ರಾಷ್ಟ್ರೀಯ ಕಾನೂನು ಶಾಲೆ ಮುಖ್ಯಸ್ಥರ ಜೊತೆ ಮಾತನಾಡಿದ್ದು, ಅಲ್ಲಿನ ಪ್ರಾಧ್ಯಾಪಕರ ಜೊತೆ ಚರ್ಚೆ ಮಾಡಿ ಕಾನೂನು ಬಿಗಿಗೊಳಿಸುವ ಕುರಿತು ನಿರ್ಧಾರ ಮಾಡುವುದಾಗಿ ಗೃಹ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next