Advertisement

Doctors ಮೇಲಿನ ಹಲ್ಲೆ ತಡೆಗೆ ಕಠಿನ ಕಾನೂನು ಅತ್ಯಗತ್ಯ: ಡಾ| ಶ್ರೀನಿವಾಸ್‌

10:22 PM Oct 28, 2023 | Team Udayavani |

ಬೀದರ್‌: ವೈದ್ಯರ ಮೇಲೆ ಹಲ್ಲೆ ಮತ್ತು ಆಸ್ಪತ್ರೆಗಳ ಧ್ವಂಸದಂತಹ ಘಟನೆಗಳನ್ನು ನಿಯಂತ್ರಿಸಲು ಬಲಿಷ್ಠ ಮತ್ತು ಶಕ್ತಿಶಾಲಿ ಕಾನೂನು ಜಾರಿ ಹಾಗೂ ಶಿಕ್ಷೆಯ ಅವಧಿಯನ್ನು ಹೆಚ್ಚಿಸಲು ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ರಾಜ್ಯಾಧ್ಯಕ್ಷ ಡಾ| ಎಸ್‌. ಶ್ರೀನಿವಾಸ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರು ಮತ್ತು ಆಸ್ಪತ್ರೆಗಳ ಮೇ ಲಿನ ದಾಳಿ ಗಳು ದಿನೇದಿನೆ ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಿಸಲು 2009ರಲ್ಲಿ ಕಾನೂನು ಜಾರಿಗೆ ತರಲಾಗಿತ್ತಾದರೂ ಅದು ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಹಲ್ಲೆ ಮಾಡಿದ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಎಂದಿದ್ದು, ಜಾಮೀನು ತೆಗೆದುಕೊಳ್ಳಲು ಈ ಕಾನೂನಿನಲ್ಲಿ ಅವಕಾಶ ಇರುವುದರಿಂದ ಈ ಕಾನೂನು ಹಲ್ಲು ಕಿತ್ತ ಹಾವಾಗಿದೆ. ಹಾಗಾಗಿ ಶಿಕ್ಷೆಯ ಅವ ಧಿಯನ್ನು ಏಳು ವರ್ಷಕ್ಕೆ ಹೆಚ್ಚಿಸಲು ಒತ್ತಾಯಿಸಲಾಗುವುದು. ಶಿಕ್ಷೆಯ ಪ್ರಮಾಣ ಹೆಚ್ಚಾದರೆ ಜಾಮೀನು ಪಡೆಯಲು ಅವಕಾಶ ಇರುವುದಿಲ್ಲ ಎಂದರು.

ನಕಲಿ ವೈದ್ಯರು ಹೆಚ್ಚಳ
ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದ್ದು, ಅಂದಾಜಿನ ಪ್ರಕಾರ, ಅವರ ಸಂಖ್ಯೆ 1.2 ಲಕ್ಷಕ್ಕೂ ಅಧಿ ಕವಿದೆ. ಈ ಬಗ್ಗೆ ಸರಕಾರದ ಜತೆ ಚರ್ಚಿಸಲಾಗುವುದು. ಜತೆಗೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.

ತಾಯಿ- ಮಗುವಿನ ಸಾವಿನ ಪ್ರಮಾಣ ಇಳಿಕೆ
ಭಾರತ ಇಂದು ವಿಶ್ವದಲ್ಲೇ ವೈದ್ಯಕೀಯ ಟೂರಿಸಂ ಕೇಂದ್ರವಾಗಿದೆ. ತಾಯಿ-ಮಗುವಿನ ಸಾವಿನ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. 1947ರಲ್ಲಿ ಹಸುಕೂಸುಗಳ ಸಾವಿನ ಪ್ರಮಾಣ 195ರಷ್ಟಿತ್ತು. ಈಗ 26ಕ್ಕೆ ಇಳಿದಿದೆ. ತಾಯಂದಿರ ಮರಣದ ಪ್ರಮಾಣ 2001ರಲ್ಲಿ 301ರಷ್ಟಿತ್ತು. ಈಗ ಅದು ಗಣ ನೀ ಯ ವಾ ಗಿ ಕುಸಿದಿದೆ. ಈ ಮೊದಲು ಸಂಕೀರ್ಣ ಶಸ್ತ್ರಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗುತ್ತಿದ್ದರು. ಈಗ ನಮ್ಮಲ್ಲಿ ಆಗಿರುವ ವೈದ್ಯಕೀಯ ಬೆಳವಣಿಗೆಯ ಕ್ರಾಂತಿಯಿಂದ ವಿದೇಶಿಗರೇ ಭಾರತದತ್ತ ಹರಿದು ಬರುತ್ತಿದ್ದಾರೆ ಎಂದರು. ಡಾ| ಶಿವಕುಮಾರ ಲಕ್ಕೋಳ್‌, ಡಾ| ಜಗತಾಪ, ಡಾ| ಚಂದ್ರಕಾಂತ ಗುದಗೆ, ಡಾ| ಮದನಾ ವೈಜಿನಾಥ, ಡಾ| ವಿಜಯಶ್ರೀ ಬಶೆಟ್ಟಿ ಉಪಸ್ಥಿತರಿದ್ದರು.

ಸಾರ್ವಜನಿಕ ಸೇವಾ ಪ್ರಶಸ್ತಿ
ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಮಹನೀಯರಿಗೆ ಐಎಂಎ ವತಿಯಿಂದ ಪ್ರತಿ ವರ್ಷ ರಾಜ್ಯ ಸಮಾವೇಶದಲ್ಲಿ ಸಾರ್ವಜನಿಕ ಸೇವಾ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಮೊದಲ ವರ್ಷ ಬೀದರ್‌ ಜಿಲ್ಲೆಯ ಹುಮನಾಬಾದ್‌ನ ಸಾಮಾಜಿಕ ಹೋರಾಟಗಾರ್ತಿ ಅಮ್ಮುಬಾಯಿ ಮಾಳಗೆ, ಬಳ್ಳಾರಿಯ ಪತ್ರಕರ್ತ ಮಂಜುನಾಥ ಕೆ.ಎಂ. ಹಾಗೂ ಬೆಂಗಳೂರಿನ ನಿವೃತ್ತ ಐಪಿಎಸ್‌ ಅಧಿ ಕಾರಿ ಎಸ್‌. ಮರಿಸ್ವಾಮಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಡಾ| ಎಸ್‌. ಶ್ರೀನಿವಾಸ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next