Advertisement

ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲು ಕಟ್ಟುನಿಟ್ಟಿನ ಆಗ್ರಹ

07:50 PM Jun 10, 2019 | Sriram |

ಉಡುಪಿ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ 2012ರಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಲಾಗಿದೆ. ಆದರೆ ಪ್ಲಾಸ್ಟಿಕ್‌ ಮಾರಾಟ, ಬಳಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ರಸ್ತೆ ಬದಿ ಪ್ಲಾಸ್ಟಿಕ್‌ ತ್ಯಾಜ್ಯಗಳು ರಾಶಿ ಬೀಳುವಂತಾಗಿದೆ ಎಂದು ಪರಿಸರ ಪರ ಹೋರಾಟಗಾರ ರಾಯನ್‌ ಫೆರ್ನಾಂಡಿಸ್‌ ಬೇಸರ ವ್ಯಕ್ತಪಡಿಸಿದರು.

Advertisement

ಬೀಡಿನಗುಡ್ಡೆಯ ಶ್ರೀ ಮುಖ್ಯಪ್ರಾಣದಲ್ಲಿ ನಡೆದ “ಜನಪರ ಚಿಂತನ ವೇದಿಕೆ’ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್‌ ಮತ್ತು ಪರಿಸರದ ಕುರಿತ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮುಂಬೈ ನಂತಹ ಬೃಹತ್‌ ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧವನ್ನು ಕಟ್ಟುನಿಟ್ಟಿನಲ್ಲಿ ಜಾರಿಗೆ ತರಲಾಗಿದೆ. ಆದರೆ ಉಡುಪಿಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ ಜಾರಿಗೆ ತರುವಲ್ಲಿ ಅಧಿಕಾರಿ ವರ್ಗ ಸೋತು ಹೋಗಿದ್ದಾರೆ ಎಂದರು.

ವಿಷಕಾರಿ ರಾಸಾಯನಿಕದಿಂದ ತಯಾರಿಸಲಾಗುವ ಪ್ಲಾಸ್ಟಿಕ್‌ ವೇಗವಾಗಿ ಭೂಮಿ, ನೀರು ಮತ್ತು ಗಾಳಿಯನ್ನು ಮಾಲಿನ್ಯ ಮಾಡುತ್ತಿದೆ. ಸುಟ್ಟರೂ ಸುಡದ, ಭೂಮಿಯೊಳಗೆ ಹೂತರೂ ಕರಗದ ಪ್ಲಾಸ್ಟಿಕ್‌ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುತ್ತಿದೆ. 2050ರ ಹೊತ್ತಿಗೆ ಸಮುದ್ರದಲ್ಲಿ ಮೀನಿಗಿಂತ ಪ್ಲಾಸ್ಟಿಕ್‌ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.

ಸಂವಾದ ಕಾರ್ಯಕ್ರಮ ನಡೆಯಿತು. ಭಾರತಿ ಎಸ್‌. ಕೊಡಂಕೂರು, ವಿಶ್ವನಾಥ ಪೂಜಾರಿ ಬೀಡಿನಗುಡ್ಡೆ, ಗಣೇಶ ರಾವ್‌ ಕೊರಂಗ್ರಪಾಡಿ, ಯೋಗೀಶ್‌ ಪೂಜಾರಿ ಕಾಡಬೆಟ್ಟು, ಜ್ಯೋತಿ ಅಂಬಲಪಾಡಿ, ಅಕ್ಷತಾ ವಿಶ್ವನಾಥ್‌ ಚಿಟಾ³ಡಿ ಸಂವಾದದಲ್ಲಿ ಭಾಗವಹಿಸಿದ್ದರು. ಪ್ರಕಾಶ ಪೂಜಾರಿ ಬೀಡಿನಗುಡ್ಡೆ ಸ್ವಾಗತಿಸಿ, ಸುಮಾ ಜಿ. ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next