Advertisement

Fishing: ಬುಲ್‌ಟ್ರಾಲ್‌ ನಿಷೇಧ ಕಟ್ಟುನಿಟ್ಟು ಮಾಡಿ: ಸಚಿವರಿಗೆ ಮನವಿ

10:59 PM Sep 27, 2024 | Team Udayavani |

ಕುಂದಾಪುರ: ಯಾಂತ್ರೀಕೃತ ಬೋಟ್‌ಗಳು ಸಮುದ್ರ ತೀರ ಪ್ರದೇಶದಲ್ಲಿ ಬುಲ್‌ಟ್ರಾಲ್‌ ಮೀನುಗಾರಿಕೆ ಮಾಡುತ್ತಿದ್ದು, ಇವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೀನುಗಾರಿಕೆ ಸಚಿವ ಎಸ್‌. ಮಂಕಾಳ ವೈದ್ಯ ಅವರಿಗೆ ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟ ಉಪ್ಪುಂದ ವತಿಯಿಂದ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.

Advertisement

ಬಳಿಕ ಸಚಿವರ ನಿವಾಸದಲ್ಲಿಯೇ ಮೀನುಗಾರರೊಂದಿಗೆ ಸಭೆ ನಡೆಸಿದ್ದು, ಬುಲ್‌ಟ್ರಾಲ್‌ ಮೀನುಗಾರಿಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ಇನ್ನು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಾಂತ್ರೀಕೃತ ಬೋಟುಗಳ ಮೀನುಗಾರರೊಂದಿಗೂ ಪ್ರತ್ಯೇಕ ಸಭೆ ಕರೆದು, ಮನವರಿಕೆ ಮಾಡಲಾಗುವುದು. ಈ ಬಗ್ಗೆ ಮೀನುಗಾರರ ನಡುವಿನ ಗೊಂದಲ ಸರಿಪಡಿಸಲು ಪ್ರಯತ್ನಿಸಲಾಗುವುದು. ಮೀನಿನ ಸಂತಾನೋತ್ಪತ್ತಿ ಹೆಚ್ಚಿಸುವ, ಸಂತತಿ ಉಳಿಸುವ ಕಾರ್ಯ ನಮ್ಮಿಂದ ಆಗಬೇಕಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಮೀನು ಮರಿ ಸಂತತಿ ನಾಶವಾಗುವಂತಹ ಅವೈಜ್ಞಾನಿಕ ಬುಲ್‌ ಟ್ರಾಲ್‌ ಮೀನುಗಾರಿಕೆ ಮತ್ತು ಬೆಳಕು ಮೀನುಗಾರಿಕೆ (ಲೈಟ್‌ ಫಿಶಿಂಗ್‌) ನಿಷೇಧವಿದ್ದು, ಇದರ ಕಟ್ಟುನಿಟ್ಟಿನ ಜಾರಿಗೆ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರರು ಇದೇ ವೇಳೆ ಸಚಿವರಿಗೆ ಆಗ್ರಹಿಸಿದರು.

ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ, ಪ್ರಧಾನ ಕಾರ್ಯದರ್ಶಿ ಯಶವಂತ ಗಂಗೊಳ್ಳಿ, ಗೌರವ ಸಲಹೆಗಾರರಾದ ಎಸ್‌. ಮದನ್‌ ಕುಮಾರ್‌ ಉಪ್ಪುಂದ, ನವೀನ್‌ಚಂದ್ರ ಉಪ್ಪುಂದ, ಚಂದ್ರಶೇಖರ ಶ್ರೀಯಾನ್‌ ಮಂಗಳೂರು, ಸುಧೀರ್‌ ಶ್ರೀಯಾನ್‌ ಮಂಗಳೂರು, ಮಂಜುನಾಥ ಜಿ. ಖಾರ್ವಿ ಉಪ್ಪುಂದ, ಕೃಷ್ಣ ಮುಡೇìಶ್ವರ, ಸದಸ್ಯರಾದ ವೆಂಕಟರಮಣ ಖಾರ್ವಿ ಉಪ್ಪುಂದ, ಸುರೇಶ ಖಾರ್ವಿ ಮರವಂತೆ, ಚಂದ್ರ ಡಿ. ಖಾರ್ವಿ ಕೊಡೇರಿ, ನಾಗರಾಜ ಹರಿಕಾಂತ ಕುಮಟ, ತಿಮ್ಮಪ್ಪ ಖಾರ್ವಿ ಉಪ್ಪುಂದ, ವಾಸುದೇವ ಖಾರ್ವಿ ಮರವಂತೆ, ಮಹೇಶ ಖಾರ್ವಿ ನಾವುಂದ, ಪ್ರವೀಣ ಹರಿಕಾಂತ ಕುಮಟ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next