Advertisement
ಜನಜಾಗೃತಿ ವೇದಿಕೆ ವತಿಯಿಂದ ಸೆ. 17ರಂದು ಬೆಳ್ತಂಗಡಿ ಎಸ್‌ಡಿಎಂ ಕಲಾಭವನದಲ್ಲಿ ನಡೆದ ಇಲಾಖಾ ಅಧಿಕಾರಿಗಳ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದರು. ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಮಾತನಾಡಿ, ಜಿಲ್ಲೆಯ ಪ್ರತಿ ಠಾಣೆಗಳಲ್ಲೂ ಮೂರು ತಿಂಗಳಿಗೊಮ್ಮೆ ಸಭೆ ನಡೆದಾಗ ಅಕ್ರಮಗಳ ನಿಯಂತ್ರಣ ಸಾಧ್ಯವಾಗಲಿದೆ. ಇಲಾಖೆಗಳು ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ನಿಖರತೆ ಮತ್ತು ಅಪರಾಧ ನಿಯಂತ್ರಣಕ್ಕೆ ತತ್‌ಕ್ಷಣ ಪ್ರತಿಕ್ರಿಯಿಸಿದರೆ ಅಪರಾಧ ತಡೆಗೆ ಸಹಕಾರಿಯಾಗಲಿದೆ ಎಂದರು.
Related Articles
Advertisement
ಧರ್ಮಸ್ಥಳ ಗ್ರಾಮ ಮದ್ಯಮುಕ್ತ ಗ್ರಾಮ ವಾಗಿದ್ದರೂ ಕೆಲವೆಡೆ ಅಕ್ರಮದ ಅನುಮಾನವಿದೆ. ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಶ್ರೀನಿವಾಸ ರಾವ್ ಕನ್ಯಾಡಿ ಆಗ್ರಹಿಸಿದರು.
ಮದ್ಯದಂಗಡಿಗಳು ಪೇಟೆಯಿಂದ ತೆರವಾಗಿ ಗ್ರಾಮಾಂತರ ಭಾಗಕ್ಕೆ ಹೋಗಿ ಇದೀಗ ಮತ್ತೆ ಪಟ್ಟಣಕ್ಕೇ ಮರಳುತ್ತಿದೆ. ಸ್ಥಳೀಯ ಸಂಸ್ಥೆಯಾಗಿ ಸುಪ್ರಿಂ ಅಧಿಕಾರ ಹೊಂದಿರುವ ಗ್ರಾ.ಪಂ.ಗಳ ಮಹತ್ವವೇ ಪ್ರಶ್ನಾರ್ಹವಾಗಿದೆ ಎಂದು ನಾಮದೇವ ರಾವ್ ಮುಂಡಾಜೆ ಆಕ್ಷೇಪಿಸಿದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಜೆ ಬಳಕೆ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆಜ್ಞೆ ತರುತ್ತಿದೆ. ಆದರೆ ಮನೆಯಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಗಳಲ್ಲಿ ಅನಿಯಮಿತ ಡಿಜೆ ಮತ್ತು ಮುಕ್ತ ಮದ್ಯಪಾನ ನಿಲ್ಲಿಸುವವರ್ಯಾರು ಎಂದು ಪ್ರಭಾಕರ ಗೌಡ ಪೊಸೊಂದೋಡಿ ಪ್ರಶ್ನಿಸಿದರು.
ಕೋಳಿ ಅಂಕಪುರಾತನ ದೇವಾಲಯಗಳಲ್ಲಿ ಧಾರ್ಮಿಕ ಪದ್ಧತಿ ಯಂತೆ ಕೋಳಿ ಅಂಕಗಳು ನಡೆಯುತ್ತಿತ್ತೇ ವಿನಾ ಇತರೆಡೆ ಇರಲಿಲ್ಲ. ಆದರೆ ಈಗ ಎಲ್ಲ ಕೇಂದ್ರಗಳಲ್ಲೂ ಇದು ಸಾಮಾನ್ಯವಾಗಿದೆ. ಇಲ್ಲೇ ಅತೀ ಹೆಚ್ಚು ಅಕ್ರಮ, ಮದ್ಯ ಮಾರಾಟ ನಡೆಯುತ್ತಿವೆ ಎಂದು ವೆಂಕಟ್ರಾಯ ಅಡೂರು ದೂರಿದರು. ಎಂ.ಎ. ಕಾಸಿಂ ಮಲ್ಲಿಗೆಮನೆ, ಪಿ.ಕೆ. ರಾಜು ಪೂಜಾರಿ, ಕಿಶೋರ್ ಹೆಗ್ಡೆ ಮತ್ತಿತರರು ಅಕ್ರಮ ಮದ್ಯ ನಿಯಂತ್ರಣ ವಿಚಾರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಾರದಾ ಆರ್. ರೈ., ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಗ್ರಾ. ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಶ್ನೆಗಳಿಗೆ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಕುಮಾರ್ ಪ್ರತಿಕ್ರಿಯಿಸಿ, ಯಾವುದೇ ರೀತಿಯ ಅಕ್ರಮಕ್ಕೆ ಇಲಾಖೆ ಆಸ್ಪದ ನೀಡುತ್ತಿಲ್ಲ. ಅಕ್ರಮ ಎಂದು ಕಂಡ ಕೂಡಲೇ ಕಾನೂನು ಚೌಕಟ್ಟಿನೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜನಜಾಗೃತಿ ಸಭೆ ಆಯೋಜಿಸಿ
ಪ್ರತೀ ಗ್ರಾಮಗಳಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ವತಿಯಿಂದ ಜನಜಾಗೃತಿ ಸಭೆಗಳು ಆಯೋಜನೆಯಾಗಲಿ. ಗ್ರಾಮಸಭೆಗಳು ಅಧಿಕಾರಿಗಳಿಂದಲೇ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದು, ಇಲ್ಲಾದರೂ ಈ ವಿಚಾರವಾಗಿ ಪ್ರಸ್ತಾವಗಳು ಆಗಲಿ ಎಂದು ಅಂಚೆ ಇಲಾಖೆ ನಿವೃತ್ತ ಸಿಬಂದಿ ಪ್ರಮೋದ್ ಕುಮಾರ್ ತಿಳಿಸಿದರು. ಸಭೆಗಳು ನಡೆಯಲಿ
ಮದ್ಯ ಅಕ್ರಮ ಮಾರಾಟ ಹಾಗೂ ಶಾಲಾ-ಕಾಲೇಜಿನ ಆವರಣದ ಸಮೀಪ ತಂಬಾಕು ಉತ್ಪನ್ನ ಮಾರಾಟ ಕುರಿತು ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿ¨ªಾರೆ. ಜೂಜು ಸಹಿತ ಕೋಳಿ ಅಂಕಗಳ ಕಡಿವಾಣಕ್ಕೆ ನನ್ನ ಬೆಂಬಲ ಇದೆ. ಇಂತಹ ಸಭೆಗಳು ನಡೆಯುತ್ತಿರಬೇಕು.
- ಹರೀಶ್ ಪೂಂಜ, ಶಾಸಕರು ನಿಯಂತ್ರಣ ಆಗಲಿ
ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕಗಳು ನಡೆದು ಅಲ್ಲಿ ಜೂಜು, ಮದ್ಯ ಅಕ್ರಮ ಮಾರಾಟ ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ. ಇದರ ನಿಯಂತ್ರಣ ಆಗಲೇಬೇಕು.
- ವಿವೇಕ್ ವಿನ್ಸೆಂಟ್ ಪಾಯಿಸ್
ಕಾರ್ಯದರ್ಶಿ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಜನಜಾಗೃತಿ
ಮದ್ಯ ನಿಷೇಧದ ಬಗ್ಗೆ ಜನಜಾಗೃತಿ ಮೂಡಿಸಬಹುದಾಗಿದ್ದು, ಅಕ್ರಮ ಮದ್ಯ ಮಾರಾಟದ ನಿಖರ ಮಾಹಿತಿಗಳು ಲಭಿಸಿದರೆ ದಂಡಾಧಿಕಾರಿಯಾಗಿ ಕ್ರಮ ಜರಗಿಸುತ್ತೇನೆ.
- ಗಣಪತಿ ಶಾಸ್ತ್ರಿ, ತಹಶೀಲ್ದಾರ್ ಸಿಬಂದಿ ಕೊರತೆ
ಮದ್ಯ ಮಾರಾಟ ಅಧಿಕೃತ ಕೇಂದ್ರಗಳಿಂದ ಮದ್ಯದ ಬಾಟಲ್‌ಗಳನ್ನು ಖರೀದಿಸಿ ಮಾರಾಟ ಮಾಡುವ ಕೆಲಸ ನಡೆಯುತ್ತಿದೆ. ಇಲಾಖೆ ದಾಳಿ ಮಾಡಿದಾಗ ಪ್ರಮಾಣಕ್ಕಿಂತ ಕಡಿಮೆ ಇದ್ದಾಗ ಕೇಸು ದಾಖಲಿಸಲು ಸಾಧ್ಯವಾಗುತ್ತಿಲ್ಲ. ಪ್ರಮಾಣಕ್ಕಿಂತ ಹೆಚ್ಚಿದ್ದಾಗ ಅಕ್ರಮವೆಂದು ದೃಢಪಟ್ಟಲ್ಲಿ ಕ್ರಮ ಕೈಗೊಂಡಿದ್ದೇವೆ. ಇಲಾಖೆಯಲ್ಲಿ ಸಿಬಂದಿ ಕೊರತೆ ಇದ್ದು ಗ್ರಾಮಸಭೆ, ಇತರ ವೇದಿಕೆ ಗಳಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿಲ್ಲ.
- ಸೌಮ್ಯಲತಾ, ಅಬಕಾರಿ ಇನ್ಸ್‌ಪೆಕ್ಟರ್, ಬೆಳ್ತಂಗಡಿ