Advertisement
ಪಟ್ಟಣದ ತಾಪಂ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ 5ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Related Articles
Advertisement
ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ ಮಾತನಾಡಿ, ಪಟ್ಟಣದ ಪಕ್ಕದಲ್ಲಿಯೇ ಮುಲ್ಲಾಮಾರಿ ನದಿ ವರ್ಷವಿಡಿ ಹರಿಯುತ್ತಿದೆ. ಅನೇಕ ವಾರ್ಡ್‌ಗಳಿಗೆ ಜನರಿಗೆ ನೀರು ಪೂರೈಕೆ ಆಗುತ್ತಿಲ್ಲ. ಮಹಿಳೆಯರು ನಮ್ಮ ಮನೆ ಮುಂದೆ ಖಾಲಿ ಕೊಡಗಳೊಂದಿಗೆ ಬರುತ್ತಾರೆ. ನೀರು ಸರಬರಾಜು ಮಂಡಳಿ ಅವರು ಕೆಲಸ ಸಂಪೂರ್ಣವಾಗಿ ಪೂರ್ಣಗೊಳಿಸಿಲ್ಲ. ಯಾಕೆ ನಮಗೆ ಮಹಿಳೆಯರು ಬೈಯುತ್ತಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅವರು ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಪುರಸಭೆ ಕಂದಾಯ ಅಧಿಕಾರಿ ನಿಂಗಮ್ಮ ಬಿರಾದಾರ ಮಾತನಾಡಿ, ಸರಕಾರಿ ವಸತಿ ಗೃಹಗಳ ಮತ್ತು ಸರಕಾರಿ ಇಲಾಖೆಗಳಿಂದ ಒಟ್ಟು 59.55 ಲಕ್ಷ ರೂ. ತೆರಿಗೆ ಬರಬೇಕಾಗಿದೆ. ಆದರೆ ಇಲ್ಲಿಯವರೆಗೆ ಒಟ್ಟು 34ಲಕ್ಷರೂ ತೆರಿಗೆ ವಸೂಲಿ ಮಾಡಲಾಗಿದೆ. ಸಕ್ಕರೆ ಕಾರ್ಖಾನೆ ತೆರಿಗೆ 4.00 ಕೋಟಿ ರೂ. ಬಾಕಿ ಇರುವುದರಿಂದ ಅದರ ತೆರಿಗೆ ವಸೂಲಿ ಮಾಡಬೇಕಾಗಿದೆ ಎಂದರು.
ಪುರಸಭೆ ಸದಸ್ಯೆದಾರ ರೂಪಕಲಾ ಕಟ್ಟಿಮನಿ ಮತ್ತು ಸುಲೋಚನಾ ಕಟ್ಟಿ ಮಾತನಾಡಿ, ಹರಿಜನವಾಡದಲ್ಲಿ ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಇದೆ. ನೀರು ಮತ್ತು ವಿದ್ಯುತ್ ದೀಪಗಳಿಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಶಾಸಕರಿಗೆ ತಿಳಿಸಿದರು.
ಪುರಸಭೆ ವ್ಯಾಪ್ತಿಯ ಹರಿಜನವಾಡ, ಸುಂದರ ನಗರ, ಬೆಳ್ಳಿ ಬೆಳಕು ಮತ್ತು ಆಶ್ರಯ ಕಾಲೋನಿಗಳಲ್ಲಿ ಚರಂಡಿ, ರಸ್ತೆ, ಶೌಚಾಲಯಗಳು ಇಲ್ಲ ಅನೇಕ ಸಲ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸದಸ್ಯರಾದ ಬಸವರಾಜ ಸಿರಸಿ, ನಾಗೇಂದ್ರಪ್ಪ ಗುರಂಪಳ್ಳಿ, ಸುಶೀಲಕುಮಾರ ಬೊಮ್ಮನಳ್ಳಿ ಶಾಸಕರ ಗಮನ ಸೆಳೆದರು.
ಸಭೆಯಲ್ಲಿ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ವೆಂಕಟೇಶ, ಪ್ರೊಬೆಶನರಿ ಅಧಿಕಾರಿ ಶೀಲಾ, ಸದಸ್ಯರಾದ ಭೀಮರಾವ್ ರಾಠೊಡ, ಕವಿತಾ ಕಡಬೂರ, ಶೇಷಾದ್ರಿ ಕಳಸ್ಕರ, ಶಿವಕುಮಾರ ಪೋಚಾಲಿ, ಸಂತೋಷ ಹುಲಿ, ಲಕ್ಷ್ಮೀಕಾಂತ ಜಾಬಶೆಟ್ಟಿ, ರಾಧಾಬಾಯಿ ವಲಗಿರಿ, ಎಇಇ ಮಹಮ್ಮದ್ ಅಹೆಮದ ಹುಸೇನ್, ಜೆಇ ಗಿರಿರಾಜ ಸಜ್ಜನಶೆಟ್ಟಿ, ಜೆಇ ರೇವಣಸಿದ್ದಪ್ಪ, ಬಿ.ಸಿ. ರಾಠೊಡ ಇನ್ನಿತರಿದ್ದರು. ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸ್ವಾಗತಿಸಿದರು. ನಿಂಗಮ್ಮ ಬಿರಾದಾರ ವಂದಿಸಿದರು.