Advertisement

ಅಪರಾಧಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ರಮಾನಾಥ ರೈ 

03:45 AM Jul 14, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ಘರ್ಷಣೆಗಳು ನಿಯೋಜಿತ ಸಂಘಟಿತ ಕೃತ್ಯಗಳಾಗಿದ್ದು ಇದನ್ನು ಹತ್ತಿಕ್ಕಲು ಜಿಲ್ಲಾಡಳಿತ ಹಾಗೂ ಪೊಲೀಸ್‌ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾ ಯಿತ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಭಾಗವಹಿಸುವಿಕೆ ಯೊಂದಿಗೆ ಗುರುವಾರ ಆಯೋಜಿಸಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು “ಜಿಲ್ಲೆಯಲ್ಲಿ ಶೇ. 95ರಷ್ಟು ಮಂದಿ ಶಾಂತಿ ಸಾಮರಸ್ಯದ ಪರವಾಗಿದ್ದಾರೆ. ಪ್ರಚೋದನಕಾರಿ ಭಾಷಣಗಳ ಮೂಲಕ ಶಾಂತಿ ಸೌಹಾರ್ದ ಕದಡುವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಕೊಲೆ, ಹಲ್ಲೆಗಳ ಹಿಂದಿರುವ ಪಿತೂರಿದಾರರನ್ನು ಪತ್ತೆ ಹಚ್ಚಿ ಬಂಧಿಸುವ ಕೆಲಸವಾಗಬೇಕು. ನಾವು ಯಾರೂ ಕೂಡ ಅಧಿಕಾರಿಗಳ ಕಾರ್ಯ ದಲ್ಲಿ ಹಸ್ತಕ್ಷೇಪ ಮಾಡುವು ದಿಲ್ಲ’ ಎಂದು ಹೇಳಿದರು.

ಸಚಿವ ಯು.ಟಿ. ಖಾದರ್‌ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯಮೂಡಿಸುವ ನಿಟ್ಟಿನಲ್ಲಿ ಶಾಂತಿಸಭೆ ಆಯೋಜಿಸಲಾಗಿದೆ. ಯಾರು ಕೂಡ ಗೊಂದಲಕ್ಕೊಳಗಾಗುವ ಆವಶ್ಯಕತೆ ಇಲ್ಲ. ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದರು.

ಮಂಗಳೂರು ಬಿಷಪರ ಅಪ್ತಕಾರ್ಯ ದರ್ಶಿ ಮೊ| ಡೆನ್ನಿಸ್‌ ಮೋರಾಸ್‌ ಪ್ರಭು ಮೊದಲಾದವರು ಮಾತನಾಡಿ ಶಾಂತಿ ಕಾಪಾಡಲು ಮನವಿ ಮಾಡಿದರು. 

ಅಭಯಚಂದ್ರ ಜೈನ್‌, ಶಕುಂತಳಾ ಶೆಟ್ಟಿ, ಮೊದಿನ್‌ ಬಾವಾ, ಮೇಯರ್‌ ಕವಿತಾ ಸನಿಲ್‌, ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್‌, ಎಡಿಸಿ ಕುಮಾರ್‌, ಐಜಿಪಿ ಹರಿಶೇಖರನ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿಲ್ಲಾ ಎಸ್‌ಪಿ ಸುಧೀರ್‌ ರೆಡ್ಡಿ, ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ ಅವರು ಉಪಸ್ಥಿತರಿದ್ದರು.

Advertisement

ಬಿಜೆಪಿ ಬಹಿಷ್ಕಾರ, ಜೆಡಿಎಸ್‌ ಸಭಾತ್ಯಾಗ
ಶರತ್‌ ಕೊಲೆ ಅರೋಪಿಗಳನ್ನು ಪೊಲೀಸರಿಗೆ ಇನ್ನೂ ಪತ್ತೆಹಚ್ಚಲು ಆಗಿಲ್ಲ ಹಾಗೂ ಪೊಲೀಸ್‌ ಇಲಾಖೆಯ ನಿಷ್ಕ್ರಿಯತೆಯಿಂದ ಹಿಂದೂ ಸಮಾಜದ ಮುಖಂಡರ ಮೇಲೆ ಹಲ್ಲೆಗಳಾಗುತ್ತಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಇದು ಹಿಂದೂ ಸಮಾಜಕ್ಕೆ ನೋವು ತಂದಿದೆ ಎಂದು ಹೇಳಿ ಬಿಜೆಪಿ ಶಾಂತಿಸಭೆಯನ್ನು ಬಹಿಷ್ಕರಿಸಿತು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ನಡೆಸಲುದ್ದೇಶಿಸಿರುವ ಶಾಂತಿ ಜಾಥಾಕ್ಕೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದೆ. ಇದನ್ನು ಪ್ರತಿಭಟಿಸಿ ಸಭೆಯನ್ನು ಜೆಡಿಎಸ್‌ ಬಹಿಷ್ಕರಿಸುತ್ತದೆ ಎಂದು ಪಕ್ಷದ ಮುಖಂಡರಾದ ವಸಂತ ಪೂಜಾರಿ ಹಾಗೂ ಅಬ್ದುಲ್‌ ಅಜೀಜ್‌ ಅವರು ಸಭೆಯಿಂದ ಹೊರನಡೆದರು.

Advertisement

Udayavani is now on Telegram. Click here to join our channel and stay updated with the latest news.

Next