Advertisement

ಒತ್ತಡ ಜೀವನಕ್ಕೆ ಸಂಗೀತ ಔಷಧ

07:02 AM Jan 01, 2019 | Team Udayavani |

ಬೀದರ: ಸಂಗೀತ ಕೇಳುವುದು ಕೇವಲ ಅದರ ರಸಾಸ್ವಾದನೆಗಷ್ಟೇ ಅಲ್ಲ. ಸಂಗೀತಕ್ಕೆ ಮನಸು ಹಾಗೂ ದೇಹದ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಇದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು. ನಗರದ ರಂಗಮಂದಿರದಲ್ಲಿ ಪ್ರಗತಿ ಸಂಗೀತ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂಗೀತ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಂಗೀತ ಕಲೆ ದೇವರು ಕೊಟ್ಟ ವರ. ಎಲ್ಲರಿಗೂ ಆ ಭಾಗ್ಯ ಸಿಗದು. ಅದು ದೈವಾನುಗ್ರಹದಿಂದ ಬಂದಿದ್ದರೂ ಪರಿಣತಿ ಹೊಂದಲು ಶ್ರಮ ವಹಿಸಲೇಬೇಕು. ಒತ್ತಡದ ಜೀವನಕ್ಕೆ ಸಂಗೀತ ಔಷಧಿಯಾಗಿದೆ. ಭಾರತ ಸಂಗೀತ ಹಿನ್ನೆಲೆಯ ಇತಿಹಾಸ ಹೊಂದಿದೆ. ದೇಶದ ವಿವಿಧೆಡೆ ಅನೇಕ ಸಾಧಕರು ಸಂಗೀತ ಕಲೆಯಲ್ಲಿ ಹಿರಿಮೆ ಪಡೆದುಕೊಂಡಿದ್ದಾರೆ. ಭವಿಷ್ಯದ ಮಕ್ಕಳಿಗೂ ಕೂಡ ಸಂಗೀತದ ಇತಿಹಾಸ ತಿಳಿಸುವ ಕಾರ್ಯಗಳು ನಡೆಯಬೇಕು. ಮಕ್ಕಳು ಕೂಡ ಶಿಕ್ಷಣದ ಜತೆಗೆ ಸಂಗೀತದ ಕಡೆಗೂ ಗಮನ ಹರಿಸುವಂತಾಗಬೇಕು ಎಂದರು. 

ಪ್ರಗತಿ ಸಂಗೀತ ಸಂಸ್ಥೆ ಕೂಡ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಮನಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು. ಇದೇ ವೇಳೇ ಪುಟ್ಟ ಮಕ್ಕಳು ಶಾಸ್ತ್ರೀಯ ಸಂಗೀತ, ವಚನಗಾಯನ ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ, ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿದರು. ಸೌರಭ ನಾಯಕ (ಪುಣೆ) ಇವರು ರಾಗ (ಪುರಿಯಾಧನಶ್ರೀ) ಹಾಡಿದರು. 

ಲಕ್ಷ್ಮೀಬಾಯಿ, ರಮೇಶ ಕೋಳಾರ, ಕಲಾವಿದರಾದ ಪಂ| ದೀಪಕ ಸಹಾಯಿ, ರುಕ್ಮಿಣಿ ಸಹಾಯಿ, ಈಶ್ವರಸಿಂಗ್‌ ಠಾಕೂರ, ಶಂಭುಲಿಂಗ ವಾಲದೊಡ್ಡಿ, ಡಾ| ಮಲ್ಲಿಕಾರ್ಜುನ ಚಟ್ಟನಳ್ಳಿ, ಫರ್ನಾಡಿಸ್‌ ಹಿಪ್ಪಳಗಾಂವ, ರವಿಸ್ವಾಮಿ, ಸಿದ್ರಾಮಯ್ನಾ ಸ್ವಾಮಿ, ರಾಜಶೇಖರ ವಟಗೆ, ಸವಿತಾ ಬುಕ್ಕಾ ಸೇರಿದಂತೆ ಅನೇಕರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next