Advertisement
ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಕಾಲೇಜಿನ ಅಮೃತ ಮಹೋತ್ಸವದ ಉದ್ಘಾಟನ ಸಮಾರಂ ಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿದ್ದರು.
Related Articles
Advertisement
ಲಾಂಛನ ಅನಾವರಣಉಪನ್ಯಾಸಕ ಮನೋಷ್ ವಿನ್ಯಾಸ ಗೊಳಿಸಿದ ಲಾಂಛನವನ್ನು ಅನಾವರಣ ಗೊಳಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿ, ಮಾಲತಿ ದೇವಿ ವಂದಿಸಿದರು. ಐಕ್ಯೂಎಸಿ ಸಂಚಾಲಕ ಪ್ರೊ| ಅರುಣ್ ಕುಮಾರ್ ಅತಿಥಿಗಳನ್ನು ಪರಿಚಯಿಸಿ ದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ ಉಪಸ್ಥಿತರಿದ್ದರು. ಮನೆ ಅಡವಿಟ್ಟು ಶುಲ್ಕ ಪಾವತಿ!
ಮದ್ರಾಸ್ ವಿ.ವಿ.ಯಲ್ಲಿ ಕಾಲೇಜು ಸಂಯೋಜನೆ ಶುಲ್ಕ 3 ಲ.ರೂ. ಪಾವತಿಸಲು ಡಾ| ಟಿ.ಎಂ.ಎ. ಪೈಯವರು ಮನೆಯನ್ನು ಅಡವಿಟ್ಟರು. 1949ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮದ್ರಾಸ್ ಸರಕಾರದಿಂದಲೇ ಆಕ್ಷೇಪಣೆ ಬಂದಿತ್ತು. ಇದನ್ನು ಎದುರಿಸಲು ವಿದ್ಯಾರ್ಥಿನಿಯೊಬ್ಬಳು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಹೋಗ
ಬೇಕಾಯಿತು. ಈಗ ನಾವು ಶೇ. 33 ಮಹಿಳಾ ಮೀಸಲಾತಿ ಮಸೂದೆಯ ಕಾಲದಲ್ಲಿದ್ದೇವೆ ಎಂದು ಡಾ| ಪೈ ಅವರ ಪುತ್ರ, ಎಂಜಿಎಂ ಕಾಲೇಜು ಟ್ರಸ್ಟ್‌ನ ಟ್ರಸ್ಟಿ ಟಿ. ಅಶೋಕ್ ಪೈ ಅವರು ಬೆಟ್ಟು ಮಾಡಿದರು. ಆಗ ವಿರೋಧ-ಕ್ರಮೇಣ ಅರ್ಥ
ಸಂಪಾದನೆಯಲ್ಲಿ ಉಳಿತಾಯ ಮಾಡಲು ಡಾ| ಟಿಎಂಎ ಪೈಯವರು ಪ್ರಚೋದಿಸಿದ್ದರು. ಆರೋಗ್ಯಕ್ಕಾಗಿ ಯೋಜನೆಯನ್ನು ಜಾರಿಗೊಳಿಸಿದರು. ಆಗ ನಾವೆಲ್ಲ ಇದಕ್ಕೆ ವಿರೋಧಿಸಿದ್ದೆವು. “ಹಾಗಲ್ಲ ಮಾಸ್ಟ್ರೆ’ ಎಂದು ಡಾ| ಪೈಯವರು ಹಿತವಚನ ಹೇಳಿದ್ದರು. ಆದರೆ ವಯಸ್ಸಾದ ಬಳಿಕ ಈಗ ಅದರ ಮೌಲ್ಯ ಅರ್ಥವಾಗುತ್ತಿದೆ ಎಂದು ವಿಶ್ರಾಂತ ಪ್ರಾಂಶುಪಾಲರಲ್ಲಿ ಹಿರಿಯರಾದ ಪ್ರೊ| ಶ್ರೀಶ ಆಚಾರ್ಯ ಹೇಳಿದರು.