Advertisement

ರಾಜ್ಯದ ಪೊಲೀಸ್‌ ಠಾಣೆಗಳ ಬಲವರ್ಧನೆ

05:21 AM Jun 20, 2020 | Lakshmi GovindaRaj |

ಮಂಡ್ಯ: ಆರ್ಥಿಕ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗೆ ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳನ್ನು ಬಲವರ್ಧನೆಗೊಳಿಸಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ,  ಆರ್ಥಿಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ.

Advertisement

ತಾಂತ್ರಿಕತೆ ಬಳಸಿ ಸುಲಭವಾಗಿ ಜನರನ್ನು ವಂಚಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಬ್ಯಾಂಕುಗಳೂ ಜಾಗೃತವಾಗಬೇಕಿದೆ. ಅವರ ನಿರ್ಲಕ್ಷ್ಯವೂ ಆರ್ಥಿಕ ಅಪರಾ ಧಗಳಿಗೆ ಪ್ರಮುಖ  ಕಾರಣವಾಗಿದೆ. ಆರ್ಥಿಕ ಅಪರಾಧಗಳಲ್ಲಿ ಪೊಲೀಸರ ತನಿಖೆಗೆ ಅತ್ಯಾಧುನಿಕ ಸಲಕರಣೆ ಒದಗಿಸಲಾ ಗುವುದು. ಐಟಿ ಕ್ಷೇತ್ರದ ತಜ್ಞರನ್ನು ಇದಕ್ಕೆ ಜೋಡಣೆ ಮಾಡುವ ಯೋಚನೆ ಇದೆ ಎಂದರು.

ಲ್ಯಾಬ್‌ ಸ್ಥಾಪನೆ: ಎಲ್ಲಾ ಜಿಲ್ಲೆಗಳಲ್ಲೂ ಎಫ್ಎಸ್‌ಎಲ್‌ ಪರೀಕ್ಷಾಲಯ ತೆರೆಯಲಾಗುವುದು. ಇದರಿಂದ ವರದಿ ವರದಿ ವಿಳಂಬವಾಗದಂತೆ ತನಿಖೆಗೆ ಶಕ್ತಿ ತುಂಬಲಾಗುವು ದು. ಜಿಲ್ಲೆಯಲ್ಲಿ ಪೊಲೀಸರ ವಸತಿ ಗೃಹ ನಿರ್ಮಾಣ ಅರ್ಧಕ್ಕೆ  ನಿಂತಿದೆ. ಈ ಕೆಲಸವನ್ನು ಶೀಘ್ರ ಪ್ರಾರಂಭಿಸದಿದ್ದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದರು.

ಮನೆಗಳ ನಿರ್ಮಾಣ: ಸರ್ಕಾರ ನಿವೇಶನದ ಅಳತೆ ಪರಿಷ್ಕರಿಸಿ, ಮುಂದಿನ 5 ವರ್ಷದೊಳಗೆ 10 ಸಾವಿರ ಪೊಲೀಸ್‌  ವಸತಿ  ಗೃಹ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿ ದರು. ದಕ್ಷಿಣ ವಲಯ ಐಜಿಪಿ ವಿಪುಲ್‌ಕುಮಾರ್‌, ಡೀಸಿ ಡಾ.ಎಂ.ವಿ.ವೆಂಕಟೇಶ್‌, ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ.ಪರಶುರಾಮ ಇದ್ದರು.

ವರದಿ ನಿರೀಕ್ಷೆಯಲ್ಲಿದ್ದೇವೆ: ಕೆಆರ್‌ಎಸ್‌ ಜಲಾಶಯದ ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದ್ದು, ಈ ಬಗ್ಗೆ ವರದಿ ನಿರೀಕ್ಷೆಯಲ್ಲಿದ್ದೇವೆ. ವರದಿ ಬಂದ ಕೂಡಲೇ ನಿಷೇಧ ಜಾರಿಗೊಳಿಸುವುದಾಗಿ  ಬಸವ ರಾಜ ಬೊಮ್ಮಾಯಿ ಭರವಸೆ ನೀಡಿದರು. ಜಿಲ್ಲಾಡಳಿತ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಬೇಬಿಬೆಟ್ಟದಲ್ಲಿ ಗಣಿಗಾರಿಕೆ ಮೇಲೆ ನಿಷೇಧ ಹೇರಿದೆ.

Advertisement

ಜಿಲ್ಲಾಡಳಿತದ ಕ್ರಮದ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಾವೂ ಗಣಿ ಮತ್ತು ಭೂ ವಿಜ್ಞಾನ, ಜಲಸಂಪನ್ಮೂಲ ಹಾಗೂ ಪರಿಸರ ಇಲಾಖೆಯಿಂದ ಸರ್ವೆ ನಡೆಸಿ ವರದಿ ತರಿಸಿಕೊಳ್ಳುತ್ತಿದ್ದೇವೆ. ವರದಿ ಸರ್ಕಾರದ ಕೈಸೇರಿದ ಗಣಿಗಾರಿಕೆ ಮೇಲೆ ನಿಷೇಧ  ಜಾರಿಗೊಳಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next