Advertisement

ಗುರಿ ಸಾಧನೆಗೆ ಕಠಿಣ ಪರಿಶ್ರಮ ವಹಿಸಿ: ಅರಸಿಕೇರಿ

10:40 AM Feb 17, 2019 | |

ಸುರಪುರ: ಗರಿ ಸಾಧಿಸಲು ಇದು ಅತ್ಯಂತ ಅಮೂಲ್ಯವಾದ ಸಮಯ ಇದನ್ನು ವ್ಯರ್ಥವಾಗಿ ಕಳೆಯದೇ ಸದ್ಬಳಕೆ ಮಾಡಿಕೊಳ್ಳಬೇಕು. ಶ್ರದ್ಧೆಯೊಂದಿಗೆ ಕಠಿಣ ಪರಿಶ್ರಮಪಟ್ಟು ಓದಿದರೆ ಯಶಸ್ಸು ಖಂಡಿತ ಸಾಧ್ಯ ಎಂದು ತಳವಾರಗೇರಿ ಚನ್ನವೀರ ಪ್ರೌಢಶಾಲೆ ಪ್ರಧಾನ ಶಿಕ್ಷಕ ವಾಸದೇವ ಅರಸಿಕೇರಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

Advertisement

ರಂಗಂಪೇಟೆ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನಡೆದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಗಾಟಿಸಿ ಅವರು ಮಾತನಾಡಿದರು. ಈ ಸಮಯ ನಿಮ್ಮ ಬದುಕು ಬದಲಿಸುವ ಪ್ರಮುಖ ಘಟ್ಟ. ಆದ್ದರಿಂದ ವಿದ್ಯಾರ್ಥಿಗಳು ವಾಟ್ಸ್‌ ಆ್ಯಫ್‌, ಫೇಸ್‌ಬುಕ್‌ ರೋಗದಿಂದ ಹೊರಬರಬೇಕು. ಪುಸ್ತಕ ಓದುವ ಹವ್ಯಾಸ
ಬೆಳೆಸಿಕೊಳ್ಳಬೇಕು. ದಿನಪತ್ರಿಕೆ, ಪಠ್ಯ ಪುಸ್ತಕ ಓದುವಲ್ಲಿ ನಿರತರಾಗಬೇಕು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಕಲಿತ ಕಾಲೇಜಿಗೂ ತಂದೆ ತಾಯಿಗೂ ಗೌರವ ತರಬೇಕು ಎಂದು ಸಲಹೆ ನೀಡಿದರು.

ವನದುರ್ಗ ಶಾಲೆ ಪ್ರಧಾನ ಶಿಕ್ಷಕ ಮುಕಂದರಾವ ಕುಲಕರ್ಣಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಆಸಕ್ತಿಯಿಂದ ಅಭ್ಯಾಸ ಮಾಡಿದರೆ ಪ್ರತಿಫಲ ತಾನಾಗಿಯೇ ಸಿಗುತ್ತದೆ ಮತ್ತು ನಿಮ್ಮ ಗುರಿ ತಲುಪಲು ಇದು ಅನುಕೂಲವಾಗುತ್ತದೆ. ಕನಸಿನ ಬೆನ್ನು ಹತ್ತಿ ನಿರಂತರ ಅಧ್ಯಯನದಿಂದ ಕಾಲೇಜಿಗೆ ಕೀರ್ತಿ ತರುವಂತೆ ಅಭ್ಯಾಸ ಮಾಡಬೇಕು ಎಂದು ಹೇಳಿದರು.

ಪ್ರೌಢಶಾಲೆ ಪ್ರಧಾನ ಶಿಕ್ಷಕ ಶಿವಕುಮಾರ ಮಸ್ಕಿ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ. ಅದನ್ನು ಸಂಪಾದಿಸಲು ದೃಢ ಸಂಕಲ್ಪ ಮಾಡಬೇಕು. ವಿದ್ಯಾರ್ಥಿಗಳು ತಾಳ್ಮೆ ಮತ್ತು ಸಂಯಮದಿಂದ ನಡೆದು ಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸುನ್ನು ಕಾಣಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಸೋಮಶೇಖರ ಶಾಬಾದಿ ಮಾತನಾಡಿ, ವಿದ್ಯಾರ್ಥಿಗಳು ವಾಟ್ಸ್ಯಾಆ್ಯಫ್‌, ಫೇಸ್‌ಬುಕ್‌ ವೀಕ್ಷಣೆಯಲ್ಲಿಯೇ ಕಾಲಹರಣ ಮಡುತ್ತಿದ್ದಾರೆ. ಇದು ಒಳ್ಳೆ ಬೆಳವಣಿಗೆ ಅಲ್ಲ. ಇದರಿಂದ ಓದಿನಲ್ಲಿ ಆಸಕ್ತಿ ಮೂಡುವುದಿಲ್ಲ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಪಾಲಕರು ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

Advertisement

ಓದುವ ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಟ್ಟು ಅವರನ್ನು ನೀವೇ ಹಾಳು ಮಾಡುತ್ತಿದ್ದೀರಿ. ಇದು ಒಳ್ಳೆಯದಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಕೇವಲ ಶಿಕ್ಷಕರ ಕರ್ತವ್ಯ ಅಲ್ಲ. ಇದರಲ್ಲಿ ಪಾಲಕರ ಕರ್ತವ್ಯವೂ ಇದೆ. ಇದನ್ನು ಅರಿತು ಪಾಲಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು. 

ಕಾಲೇಜಿನ ಪ್ರಾಂಶುಪಾಲ ಘನಶ್ಯಾಮ ಪಾಣಿಬಾತೆ ಮಾತನಾಡಿದರು. ಶಿಕ್ಷಕರಾದ ಗುರುಬಾಯಿ ಜ್ಯೋತಿ ಕಲಾಲ, ಸ್ನೇಹಾ ಶಾಬಾದಿ, ಅನುಪಮ ಕುಂಬಾರ, ಶಿವಶಂಕರ, ಶಂಕ್ರಪ್ಪ ಕರಡ್ಡಿ, ಕ್ಷೀರಲಿಂಗಯ್ಯ ಹಿರೇಮಠ, ಸುರೇಶ ಕುಂಬಾರ ಇದ್ದರು. ಅಯ್ಯಮ್ಮ ಸ್ವಾಗತಿಸಿದರು. ಸಾಕ್ಷಿ ಶಾಬಾದಿ ಮತ್ತು ಅಂಬಿಕಾ ನಿರೂಪಿಸಿದರು. ಸಹಾನಾ ವಂದಿಸಿದರು. ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆದವು. 

Advertisement

Udayavani is now on Telegram. Click here to join our channel and stay updated with the latest news.

Next