Advertisement

ರಾಹುಲ್‌ ಗಾಂಧಿ ಕೈ ಬಲಪಡಿಸಿ

11:03 AM Jan 29, 2019 | |

ವಿಜಯಪುರ: ವಿಧಾನಸಭೆ ಚುನಾವಣೆ ಫ‌ಲಿತಾಂಶದಿಂದ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಕಾರಣ ಜಾತ್ಯತೀತ ನಿಲುವನ್ನು ಉಳಿಸಲು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್‌ ಪಕ್ಷದೊಂದಿಗೆ ಸೇರಿ ಸಮ್ಮಿಶ್ರ ಸರಕಾರ ರಚಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

Advertisement

ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಕಾರಣ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದಿಂದ ಈವರೆಗೆ ದೇಶ ಕಟ್ಟುವಲ್ಲಿ ಕಾಂಗ್ರೆಸ್‌ ಪಕ್ಷದ ಕೊಡುಗೆ ಅಪಾರ. ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು ನೀತಿಯೊಂದಿಗೆ ದೇಶದ ಸರ್ವ ಜನರ ಸುಖ ಬಯಸುವ ಏಕೈಕ ಪಕ್ಷ ಕಾಂಗ್ರೆಸ್‌. ಹೀಗಾಗಿ ನಾವೆಲ್ಲ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಪಕ್ಷ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡಬೇಕಿದೆ ಎಂದರು.

ಸದರಿ ಸಮ್ಮಿಶ್ರ ಸರಕಾರದಲ್ಲಿ ವಿಜಯಪುರ ಜಿಲ್ಲೆಯಿಂದ ಅಯ್ಕೆಯಾಗಿದ್ದ ಮೂವರು ಶಾಸಕರಲ್ಲಿ ಎಂ.ಬಿ. ಪಾಟೀಲ ಅವರಿಗೆ ಗೃಹ ಖಾತೆ ಹಾಗೂ ಶಿವಾನಂದ ಪಾಟೀಲ ಅವರಿಗೆ ಆರೋಗ್ಯ ಖಾತೆಯ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿದೆ. ಇದೀಗ ನನಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮದ ಅಧ್ಯಕ್ಷನನ್ನಾಗಿ ನೇಮಿಸಿದ್ದು, ಪಕ್ಷ ನಮಗೆ ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಬೇಕು. ಈ ಅಧಿಕಾರ ಕಾಂಗ್ರೆಸ್‌ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಸರ್ವಾಧಿಕಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನೆಗೆ ಕಳುಹಿಸುವ ತನಕ ನಾವುಗಳೆಲ್ಲ ನಿಟ್ಟುಸಿರು ಬಿಡುವಂತಿಲ್ಲ. ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಪ್ರತಿರೂಪವಾಗಿರುವ ಪ್ರಿಯಾಂಕಾ ಗಾಂಧಿ ಅವರ ಪದಾರ್ಪಣೆಯಿಂದ ಕಾಂಗ್ರೆಸ್‌ ಪಕ್ಷದ ಬಲ ಅತ್ಯಂತ ಹೆಚ್ಚಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

Advertisement

ವಿಜಯಪುರ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್‌ ವಶ ಮಾಡಿಕೊಳ್ಳ ಬೇಕು. ಅಭ್ಯರ್ಥಿ ಯಾರೇ ಆದರೂ ಪಕ್ಷದ ಸ್ಪರ್ಧಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕೈ ಬಲ ಪಡಿಸಬೇಕು. ಅ ಮೂಲಕ ಪಕ್ಷದ ಋಣ ತೀರಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಪ್ರಸಕ್ತ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಆನೆ ಬಲ ಬಂದಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್‌ ದೇಶದಲ್ಲಿ ನಿರೀಕ್ಷೆ ಮೀರಿ ಪ್ರಬಲ ಸಂಘಟನೆಯಾಗಿ ಹೊರ ಹೊಮ್ಮಲಿದ್ದು 2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.

ಮಾಜಿ ಶಾಸಕ ವಿಠuಲ ಕಟಕದೊಂಡ, ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಜಮೀರ ಅಹ್ಮದ್‌ ಭಕ್ಷಿ, ಇಲಿಯಾಸ್‌ ಬೋರಾಮಣಿ, ಆರತಿ ಶಹಾಪುರ, ಸುಭಾಷ್‌ ಛಾಯಾಗೋಳ, ಡಾ| ಗಂಗಾಧರ ಸಮ್ಮಣ್ಣಿ, ಡಿ.ಎಚ್. ಕಲಾಲ್‌, ಸಾಹೇಬಗೌಡ ಬಿರಾದರ, ಆರ್‌.ಕೆ. ಜವನರ್‌, ಎಂ.ಆರ್‌. ಪಾಟೀಲ, ಶರಣಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐ.ಎಂ. ಇಂಡೀಕರ, ಎಸ್‌.ಎಂ. ಪಟೇಲ್‌ ಗಣಿಯಾರ, ಶಬ್ಬೀರ್‌ ಜಹಾಗೀರದಾರ, ಪರವೇಜ್‌ ಚಟ್ಟರಕಿ, ಸುನೀಲ ಉಕ್ಕಲಿ, ಚನ್ನಬಸಪ್ಪ ನಂದರಗಿ, ಬಿ.ಎಸ್‌. ಬ್ಯಾಳಿ, ಹಾಜಿಲಾಲ್‌ ದಳವಾಯಿ, ಅಕ್ಬರ್‌ ನಾಯಕ, ಶರಣಪ್ಪ ಎಕ್ಕುಂಡಿ, ಮಲ್ಲು ತೊರವಿ, ಬಲರಾಮ ನಾಯಕ, ಇದ್ರೂಸ್‌ ಭಕ್ಷಿ, ಜಮೀರ್‌ಅಹ್ಮದ್‌ ಬಾಂಗಿ, ಸಂತೋಷ ಬಾಲಗಾಂವಿ, ರಾಜಶ್ರೀ ಚೊಳಕೆ, ಭಾರತಿ ನಾವಿ, ಲಕ್ಷ್ಮೀ ಕ್ಷೀರಸಾಗರ, ಫೀರೋಜ್‌ ಶೇಖ, ತಾಜುದ್ದಿನ್‌ ಖಲೀಪಾ, ಜಗನ್ನಾಥ ಪತ್ತಾರ, ಬಾಬು ಯಾಳವಾರ, ಸುರೇಂದ್ರ ಭಾವಿಮನಿ, ಅಲ್ಲಾಭಕ್ಷ ಬಾಗಲಕೋಟೆ, ಲಕ್ಷ್ಮಣ ಇಲಕಲ್‌, ಪ್ರಶಾಂತ ಪೂಜಾರಿ, ಮಹಾದೇವ ಜಾಧವ, ಗುಡುಸಾಬ ತೋರಗಲ, ಅಮಿತ ಚವ್ಹಾಣ, ನಿಂಗಪ್ಪ ಸಂಗಾಪುರ, ಅರವಿಂದ ಹಿರೋಳ್ಳಿ, ಗುರನಗೌಡ ಪಾಟೀಲ, ಸುರೇಶ ತಳವಾರ, ಮುಕ್ತಿಯಾರ ನದಾಫ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next