Advertisement
ತೀವ್ರ ಅನಾರೋಗ್ಯದಿಂದ ಕುಂದಾಪುರದ ರಸ್ತೆಯ ಬದಿಯಲ್ಲಿ ತೀವ್ರಅನಾರೋಗ್ಯದಿಂದ ನರಳುತಿದ್ದ ಹಾಡುಗಾರ ವೈಕುಂಠನನ್ನು ಆತನ ಅಭಿಮಾನಿ ಕುಂದಾಪುರದ ರಂಜಿತ್ ಹಂಗಳೂರು ಅವರು 108 ಅಂಬುಲೆನ್ಸ್‌ನಲ್ಲಿ ನ.13ರ ಅಪರಾಹ್ನ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು.
ನಿರ್ಲಕ್ಷ್ಯ ನಡೆದಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ನ.13ರ ಘಟನೆ ಹಾಗೂ ವೈಕುಂಠ ಸಾವಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಡಾ| ನಾಗೇಶ್, ಸರಕಾರಿ ಆಸ್ಪತ್ರೆ ಇರುವುದೇ ಬಡವರಿ ಗಾಗಿ. ವೈಕುಂಠ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಸಿಟಿಸ್ಕ್ಯಾನ್ ಸಹಿತ ಸಾಧ್ಯವಿರುವ ಎಲ್ಲ ಚಿಕಿತ್ಸೆಗಳನ್ನೂ ನೀಡಿದ್ದೇವೆ. ಪ್ರಯತ್ನದ ಹೊರತಾಗಿಯೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನ್ನಪ್ಪಿದ್ದಾರೆ. ಎಂದು ತಿಳಿಸಿದ್ದಾರೆ.
Related Articles
ಹಲವರು ಆತನಿಗೆ ಮದ್ಯದ ಆಮಿಷ ತೋರಿಸಿ ಆತನಿಂದ ಹಾಡನ್ನು ಹಾಡಿಸಿ ಅದನ್ನು ಯೂಟ್ಯೂಬ್‌ಗ ಹಾಕಿ ವೈರಲ್ ಮಾಡುತಿದ್ದರು. ಆತನ ಆರೋಗ್ಯಕೈಕೊಟ್ಟು, ಚಿಕಿತ್ಸೆಯಿಂದಲೂ ಆತ ಬದುಕುಳಿಯಲಿಲ್ಲ. ಆತನಿಗೆ ಚಿಕಿತ್ಸೆ ನೀಡಿದ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತನ ಹಿತೈಷಿಗಳು, ಅಭಿಮಾನಿಗಳು ಮಂಗಳವಾರ ಆಸ್ಪತ್ರೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು.
Advertisement