Advertisement

ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಚುನಾವಣೆ

12:07 PM Dec 22, 2019 | Team Udayavani |

ರಾಮದುರ್ಗ: ರಾಮದುರ್ಗ ಪುರಸಭೆ ಬೀದಿ ಬದಿ ವ್ಯಾಪಾರಿ ಸಮಿತಿಯ ಪ್ರತಿನಿಧಿಗಳ 10 ಸ್ಥಾನಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ 6 ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇನ್ನೂ ನಾಲ್ಕು ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು.

Advertisement

ಸಾಮಾನ್ಯ ಕ್ಷೇತ್ರದಿಂದ ದಾದಾಪೀರ್‌ ಮುಗುಟಸಾಬ ಕಲೆಗಾರ (267), ಇಬ್ರಾಹಿಂ ಸುರಕೋಡ(183) ಆಯ್ಕೆಗೊಂಡರು. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಫಕ್ಕೀರವ್ವ ಮಹಾದೇವ ಭಜಂತ್ರಿ (112), ಅಲ್ಪಸಂಖ್ಯಾತರು ಕ್ಷೇತ್ರದಿಂದ ಹುಸೇನಸಾಬ್‌ ಅಲ್ಲಾಭಕ್ಷ ಮಹಮ್ಮದಲಿ (55) ಮತಗಳನ್ನು ಆಯ್ಕೆಯಾದರು.

ಇನ್ನು ಮಹಿಳಾ ಕ್ಷೇತ್ರದಿಂದ ಮಹಾದೇವಿ ಮೇಗುಂಡಪ್ಪ ವರ್ಗಮಾರಿ, ರೇಣುಕಾ ಬಸವರಾಜ ಬಾಳಿಕಾಯಿ, ಸಾವಿತ್ರಿ ಚಂದ್ರಶೇಖರ ಬನ್ನಿಗಿಡದ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಫಕೀರಪ್ಪ ಪರಶುರಾಮ ಮೇದಾರ, ಹಿಂದುಳಿದ ವರ್ಗ ಕ್ಷೇತ್ರದಿಂದ ಅಪ್ಪಣ್ಣ ಭೀಮಪ್ಪ ಬಾಡಗಾರ ಹಾಗೂ ವಿಕಲಚೇತನರ ಕ್ಷೇತ್ರದಿಂದ ಅಸ್ಲಮ ಕಾಶೀಮಸಾಬ ಮಹಾತ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ ಕಾರಿ ಗಿರೀಶ ಯಾವಗಲ್ಲ ತಿಳಿಸಿದ್ದಾರೆ. ಸಹಾಯಕ ಚುನಾವಣಾ ಧಿಕಾರಿಯಗಿ ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟ ಕಾರ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next