Advertisement
ಮೋದಿಯವರ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗದುಕೊಂಡ ತೃಣಮೂಲ ಕಾಂಗ್ರೆಸ್ ನ ಸಂಸದೆ ಮಾಹುವಾ ಮೊಯಿತ್ರಾ, ಮೋದಿಯವರು ದಾರಿಹೋಕರಂತೆ ವರ್ತಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
Related Articles
Advertisement
ಪ್ರಧಾನಿ ನರೇಂದ್ರ ಮೋದಿಯವರು ಲಕ್ಷಾಂತರ ಮಂದಿ ಸೇರಿರುವ ದೊಡ್ಡ ಸಭೆಯಲ್ಲಿ ಹೀಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅಪಹಾಸ್ಯ ಮಾಡುತ್ತಾರೆ. ನೀವು ಅದನ್ನು ಹೇಳುತ್ತೀರಾ..? ಅವರು, ಅವರ ತಾಯಿಗೆ ಹೀಗೆ ಹೇಳುತ್ತಾರಾ..? ಅವರ ಸಹೋದರಿಯರಿಗೆ ಹೀಗೆ ಹೇಳುತ್ತಾರಾ..? ಅವರಿಂದ ಬೇರ್ಪಟ್ಟ ಅವರ ಹೆಂಡತಿಗೆ ಹೀಗೆ ಹೇಳುತ್ತಾರಾ..? ಅದು ಯಾರಿಗಾದರೂ ಹೇಳುವಂತದ್ದಾ..? ಹೇಗೆ ಇದು ಒಪ್ಪಿತವಾಗುತ್ತದೆ..? ಹೀಗೆ ಮಾತನಾಡುವ ಪ್ರಧಾನಿ ನಮಗೆ ಸಮಾಜದಲ್ಲಿ ಹೇಗಿರಬೇಕೆಂದು ಪಾಠ ಮಾಡುತ್ತಾರಾ..? ಒಬ್ಬ ಮುಖ್ಯಮಂತ್ರಿಯನ್ನು ಅತ್ಯಂತ ಕೆಳಮಟ್ಟದಲ್ಲಿ ನಿಂದಿಸುವ ಪ್ರಧಾನ ಮಂತ್ರಿಯವರ ಧೋರಣೆ ಇದು ಎಂದು ಅವರು ಹೇಳಿದ್ದಾರೆ.
ಓದಿ : ಮ್ಯಾನ್ಮಾರ್ ನಿರಾಶ್ರಿತರನ್ನು ವಾಪಸ್ ಕಳುಹಿಸಬೇಡಿ : ಕೇಂದ್ರಕ್ಕೆ ಝೊರಾಮ್ ತಂಗ
ಇನ್ನು, ಅಲ್ಬೇರಿಯಾದಲ್ಲಿ ಮಾತನಾಡಿದ್ದ ಪ್ರಧಾನಿ, ಮುಖ್ಯಮಂತ್ರಿ ಬ್ಯಾನರ್ಜಿ ಅವರು ‘ನಾವೆಲ್ಲರೂ ಒಂದಾಗಬೇಕು’ ಎಂದು ಸೋನಿಯಾ ಗಾಂಧಿ ಸೇರಿ ಇತರ ಪ್ರತಿ ಪಕ್ಷಗಳ ಪ್ರಮುಖ ನಾಯಕರಿಗೆ ಪತ್ರ ಬರೆದ ವಿಚಾರವನ್ನು ಉಲ್ಲೇಖಿಸಿ, ‘ದೀದಿ ಅವರು ಮೋದಲ ಹಂತದ ಚುನಾವಣೆ ಮುಗಿದ ನಂತರ ಹತಾಶರಾಗಿದ್ದಾರೆ. ಸೋಲುವ ಭಯ ಅವರನ್ನು ಕಾಡುತ್ತಿದೆ. ಅದಕ್ಕಾಗಿ ಪ್ರತಿಪಕ್ಷಗಳ ನಾಯಕರ ಬೆಂಬಲ ಯಾಚಿಸುತ್ತಿದ್ದಾರೆ. ದೀದಿ ನಿಮ್ಮ ನಡೆಗಳು ನಂದಿಗ್ರಾಮದಲ್ಲಿ ಸೋಲುವ ಭಯವನ್ನು ತೋರಿಸುತ್ತಿದೆ. “ದೀದಿ…ಓ…ದೀದಿ” …ನೀವು ಸೋಲುವ ಭಯದಿಂದ ಇನ್ನೊಂದು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತೀರಿ ಎಂಬ ಒಂದು ಸುದ್ದಿ ಹರಿದಾಡುತ್ತಿದೆ.. ಇದು ಸತ್ಯನಾ..?’ ಎಂದು ಕೇಳಿದ್ದರು.
ಮೋದಿಯವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಮಾಹುವಾ ತಮ್ಮ ವೈಯಕ್ತಿಕ ಟ್ವೀಟರ್ ಖಾತೆಯಲ್ಲಿ, ‘ಹೌದು ಮೋದಿಯವರೇ, ಅವರು ಸ್ಪರ್ಧಿಸುತ್ತಿದ್ದಾರೆ. ಅವರು ಸ್ಪರ್ಧಿಸುತ್ತಿರುವ ಕ್ಷೇತ್ರ ವಾರಣಾಸಿ. ಹಾಗಾಗಿ ನೀವು ನಿಮ್ಮ ರಕ್ಷಣಾ ಕವಚವನ್ನು ಪಡೆದುಕೊಳ್ಳಲು ತೆರಳಿ’ ಎಂದು ಬರೆದುಕೊಂಡಿದ್ದಾರೆ.