Advertisement

ತಿಂಗಳಿಗೆ ಲಕ್ಷ ಖರ್ಚು ಬರೆದರೂ ಬೆಳಕಿಲ್ಲ

04:14 PM Dec 28, 2020 | Suhan S |

ವಾಡಿ: ಪಟ್ಟಣದ ಪುರಸಭೆಯ ಕಾಂಗ್ರೆಸ್‌ ಆಡಳಿತ ಕಳೆದ ಒಂದು ತಿಂಗಳಿಂದ ಬೀದಿ ದೀಪಗಳ ನಿರ್ವಹಣೆ ಕೈಬಿಟ್ಟಿದೆ. ಪರಿಣಾಮ ರಾತ್ರಿ ವೇಳೆ ನಗರದ ಬೀದಿಗಳಲ್ಲಿ ಕಗ್ಗತ್ತಲು ಆವರಿಸಿಕೊಳ್ಳುತ್ತಿದ್ದು, ಬಡಾವಣೆಗಳ ಜನರಿಗೆ ಬೆಳಕಿನ ಭಾಗ್ಯವೇ ಇಲ್ಲದಂತಾಗಿದೆ.

Advertisement

ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ನಗರದಲ್ಲಿ ಒಟ್ಟು 23 ವಾರ್ಡ್ ìಗಳಿವೆ. ಪುರಸಭೆ ಕಾಂಗ್ರೆಸ್‌ ತೆಕ್ಕೆಯಲ್ಲಿದೆ. ಕಸ ಸ್ವಚ್ಛತೆ, ಚರಂಡಿ-ಶೌಚಾಲಯಗಳ ಶುಚಿತ್ವ, ಬೀದಿ ದೀಪಗಳ ನಿರ್ವಹಣೆ,ನಿತ್ಯ ಕುಡಿಯುವ ನೀರು ಪೂರೈಕೆ ಪುರಸಭೆ ಆಡಳಿತ ನಿಭಾಯಿಸಬೇಕಾದ ಪ್ರಮುಖ ಕರ್ತವ್ಯಗಳು.

ಹಲವು ಬಡಾವಣೆಗಳಲ್ಲಿ ಬೀದಿ ದೀಪಗಳು ಕೆಟ್ಟಿವೆ. ರಾತ್ರಿ ರಸ್ತೆಗಳಲ್ಲಿ ಸಂಚರಿಸಲುಪಾದಚಾರಿಗಳು ಭಯ ಪಡುತ್ತಿದ್ದಾರೆ. ವಾಹನಗಳ ಓಡಾಟ ಒಂದೆಡೆಯಾದರೆ, ನಾಯಿ, ಹಂದಿಗಳ ಕಿರಿಕಿರಿ ಇನ್ನೊಂದೆಡೆ. ಲಾರಿ, ಜೀಪು, ಬೈಕ್‌ಗಳನ್ನು ಬೀದಿಗಳಲ್ಲೇಪಾರ್ಕಿಂಗ್‌ ಮಾಡಲಾಗುತ್ತಿದೆ. ಹೀಗಾಗಿಜನಸಂಚಾರಕ್ಕೆ ತೊಂದರೆಯಾಗುತ್ತಿದೆ.ಕಲಬುರಗಿ ಮೂಲದ ಗುತ್ತಿಗೆದಾರನಿಗೆನೀಡಲಾದ ಬೀದಿ ದೀಪ ನಿರ್ವಹಣೆ ಅವಧಿಪೂರ್ಣಗೊಂಡಿದೆ. ಹೀಗಾಗಿ ಕಳೆದ ಒಂದುತಿಂಗಳಿಂದ ನಿರ್ವಹಣೆ ಸ್ಥಗಿತವಾಗಿದೆ. ಪುರಸಭೆ ಆಡಳಿತ ಒಂದು ವರ್ಷದ ಬೀದಿದೀಪ ನಿರ್ವಹಣೆ ವೆಚ್ಚ ಪಾವತಿಸಿಲ್ಲಎನ್ನುವ ಕಾರಣಕ್ಕೆ ಬೇಸರಗೊಂಡ ಗುತ್ತಿಗೆದಾರ ದೀಪಗಳ ರಿಪೇರಿಗೆ ಮುಂದಾಗುತ್ತಿಲ್ಲ ಎನ್ನುವ ಆರೋಪಕೇಳಿಬರುತ್ತಿದೆ. ಇನ್ನೊಂದೆಡೆ ದೀಪಗಳ ನಿರ್ವಹಣೆ ಹೆಸರಿನಲ್ಲಿ ಗುತ್ತಿಗೆದಾರ ಪುಕ್ಕಟೆ ಬಿಲ್‌ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಇವೆ.

ಬೀದಿ ದೀಪಗಳ ನಿರ್ವಹಣೆಗಾಗಿ ಪುರಸಭೆ ಪ್ರತಿ ತಿಂಗಳು ಒಂದು ಲಕ್ಷ ರೂ. ವರೆಗೂ ಖರ್ಚು ಮಾಡುತ್ತಿದೆ. ದೀಪಗಳ ನಿರ್ವಹಣೆ ಮಾಡದೇ ಕೊಟ್ಟಿ ಬಿಲ್ಲು ಬರೆಯಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪುರಸಭೆ ಆಡಳಿತ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಗೆ ನಗರ ರಾತ್ರಿ ವೇಳೆ ಕತ್ತಲಲ್ಲಿ ಮುಳುಗಿದೆ.

ಕಾಂಗ್ರೆಸ್‌ ಆಡಳಿತಕ್ಕೆ ಸ್ಥಳೀಯರಿಗೆ ಕುಡಿಯಲು ಶುದ್ಧ ನೀರು ಕೊಡಲಾಗುತ್ತಿಲ್ಲ.ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದ್ದರೂ ಸಮರ್ಪಕವಾಗಿ ಬೀದಿ ದೀಪಗಳ ನಿರ್ವಹಣೆ ಮಾಡಲಾಗದೆ ಇಡೀ ನಗರವನ್ನು ಕತ್ತಲಿಗೆ ನೂಕಿದ್ದಾರೆ. ಅಧಿಕಾರಿಗಳು, ಕಾಂಗ್ರೆಸ್‌ ಆಡಳಿತ ಸದಸ್ಯರು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಆಡಳಿತದಿಂದ ಜನತೆ ಬೇಸತ್ತಿದ್ದಾರೆ. -ಭೀಮಶಾ ಜಿರೊಳ್ಳಿ, ಪುರಸಭೆ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ

Advertisement

ಬೀದಿ ದೀಪಗಳ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರನ ಅವಧಿ ಪೂರ್ಣವಾಗಿದೆ. ಹೊಸಟೆಂಡರ್‌ ಕರೆಯಲಾಗಿದ್ದು, ಹತ್ತಾರು ದಿನಗಳಲ್ಲಿ ಮತ್ತೂಬ್ಬ ಗುತ್ತಿಗೆದಾರಕರ್ತವ್ಯಕ್ಕೆ ಹಾಜರಾಗುತ್ತಾರೆ. ಹೊಸ ಗುತ್ತಿಗೆದಾರ ಬರುವವರೆಗೂ ದೀಪಗಳ ನಿರ್ವಹಣೆ ಮಾಡುವಂತೆ ಹಳೆಯ ಗುತ್ತಿಗೆದಾರನಿಗೆ ಸೂಚಿಸಿದರೂ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಜನರಿಗೆ ತುಸು ತೊಂದರೆಯಾಗುತ್ತಿದೆ.  -ವಿಠ್ಠಲ ಹಾದಿಮನಿ, ಮುಖ್ಯಾಧಿಕಾರಿ ಪುರಸಭೆ

 

 

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next