ಮಹಾನಗರ: ನಗರದ ಬೀದಿ ದೀಪಗಳನ್ನೆಲ್ಲಾ ಎಲ್‌ಇಡಿ ಬಲ್ಬುಗಳಿಗೆ ಬದ ಲಾಯಿಸ ಲಾಗುತ್ತಿದೆ. ಯೋಜಿತ ಲೆಕ್ಕಾಚಾರದಂತೆ ನಡೆದರೆ ಆರು ತಿಂಗಳೊಳಗೆ ಈ ಪರಿವರ್ತನೆ ಸಾಧ್ಯವಾಗ ಲಿದೆ. ಆಗ ಪಾಲಿಕೆಗೆ ಪ್ರತಿ ತಿಂಗಳಿಗೆ ಒಟ್ಟೂ ಸುಮಾರು 50 ಲಕ್ಷ ರೂ. ಉಳಿತಾಯವಾಗಲಿದೆ.
ನಗರದ 60 ವಾರ್ಡ್‌ಗಳ ಬೀದಿದೀಪಗಳ ಎಲ್ ಇ ಡಿ ಪರಿವರ್ತನೆಗೆ 60 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪಡೆದ ಸಂಸ್ಥೆ ಏಳು ವರ್ಷಗಳ ಕಾಲ ನಿರ್ವಹಿಸಬೇಕು. ಅದಕ್ಕೆಂದು 7 ವರ್ಷಗಳವರೆಗೆ ಪಾಲಿಕೆಯಿಂದ ತಿಂಗಳಿಗೆ ಸುಮಾರು 80 ಲಕ್ಷ ರೂ. ಇಎಂಐ ಸಂದಾ ಯವಾಗಲಿದೆ. ಸದ್ಯ ಬೀದಿ ದೀಪಗಳ ಬಾಬ್ತು ಪಾಲಿಕೆ ತಿಂಗಳಿಗೆ 40 ಲಕ್ಷ ರೂ. ನಿರ್ವಹಣ ವೆಚ್ಚ, 1.50 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತಿದೆ. ಈ ದೀಪಗಳೆಲ್ಲಾ ಎಲ್‌ಇಡಿಗೆ ಬದಲಾದರೆ ಸುಮಾರು 50ರಿಂದ 60 ಲಕ್ಷ ರೂ.ನಷ್ಟು ಬಿಲ್ ಬರಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ಝಗಮಗಿಸಬೇಕಿತ್ತು:
ಟೆಂಡರ್ ಪ್ರಕಾರ ಕಾಮಗಾರಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಪಣಂಬೂರು ಬೆಂಗ್ರೆ ಮತ್ತು ಬೆಂಗ್ರೆ ವಾರ್ಡ್‌ಗಳಲ್ಲಿ ಬಹುತೇಕ ಪೂರ್ಣಗೊಂಡಿದೆ. ಇನ್ನು ಸುಮಾರು 60,000ದಷ್ಟು ಎಲ್‌ಇಡಿ ಬಲ್ಬ್ ಅಳವಡಿಸಬೇಕಿದೆ.
ಆಗ ಬಿಲ್‌ನಲ್ಲಿ ಒಂದಿಷ್ಟು ಉಳಿತಾಯವಾಗಲಿದೆ. ನಿರ್ವಹಣೆಗೆ 80 ಲಕ್ಷ ರೂ. ಪಾವತಿಸಿದರೂ ವಿದ್ಯುತ್ ಬಿಲ್‌ನ ಉಳಿತಾಯ ಹೆಚ್ಚುವರಿ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲಿದೆ. ಒಟ್ಟು ಈ ಪರಿವರ್ತನೆಯಿಂದ ಸುಮಾರು 50 ರಿಂದ 60 ಲಕ್ಷ ರೂ. ನಷ್ಟು ತಿಂಗಳಿಗೆ ಉಳಿತಾಯ ನಿರೀಕ್ಷಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ 60 ವಾರ್ಡ್‌ಗಳಲ್ಲಿ ಒಟ್ಟು 67,000 ಪೈಕಿ ಆಯ್ದ ವಾರ್ಡ್‌ಗಳಲ್ಲಿ ಸುಮಾರು 7,000 ಎಲ್‌ಇಡಿ ಬೀದಿ ದೀಪ ಅಳವಡಿಸಲಾಗಿದೆ. ಆದರೆ ಕೆಲವು ಉಪಕರಣಗಳ ಕೊರತೆಯಿಂದ ಕಾಮಗಾರಿ ಕೊಂಚ ವಿಳಂಬವಾಗಿತ್ತು. ಈ ಸಂಬಂಧ ಟೆಂಡರ್ ವಹಿಸಿದ ಸಂಸ್ಥೆಗೆ ವಿವರಣೆ ಕೋರಿ ಪಾಲಿಕೆ ನೋಟಿಸ್ ಕೂಡ ನೀಡಿತ್ತು. ಟೆಂಡರ್ ಪಡೆದ ಸಂಸ್ಥೆಯ ಪ್ರಮುಖರ ಜತೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಹಲವು ಸಭೆ ನಡೆಸಿ, ಕಾಮಗಾರಿ ಚುರುಕುಗೊಳಿಸುವಂತೆ ಆದೇಶಿಸಲಾಗಿದೆ. ಎಲ್‌ಇಡಿ ಬೀದಿ ದೀಪಗಳುಳ್ಳ ವಿದ್ಯುತ್ ಕಂಬ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಚಿಂತನೆ ನಡೆಯುತ್ತಿದೆ. ಇದರಿಂದ ನಿರ್ವಹಣೆ ಸುಲಭ. ಈ ಕುರಿತು ಸ್ಮಾರ್ಟ್‌ಸಿಟಿ, ಸ್ಥಳೀಯಾಡಳಿತದಿಂದ ಮೆಸ್ಕಾಂನ ಅನುಮತಿ ಪಡೆಯಲಾಗುತ್ತಿದೆ.
ಅಭಿವೃದ್ಧಿ ಕಾಮಗಾರಿಗೆ ಬಳಕೆ:
ನಗರದ ಬೀದಿ ದೀಪಗಳನ್ನು ಎಲ್‌ಇಡಿ ಬಲ್ಬ್ ಆಗಿ ಪರಿವರ್ತಿಸುವ ಕಾಮಗಾರಿ ಆರಂಭವಾಗಿದೆ. ಇದರಿಂದ ಪಾಲಿಕೆಗೆ ತಿಂಗಳಿಗೆ 50 ಲಕ್ಷ ರೂ.ಗೂ ಹೆಚ್ಚು ಹಣ ಉಳಿತಾಯವಾಗಲಿದೆ. ಈ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬಹುದು. ಕಾಮಗಾರಿಗೆ ಮತ್ತಷ್ಟು ವೇಗ ನೀಡುವಂತೆ ಟೆಂಡರ್ ಮತ್ತು ಉಪ ಟೆಂಡರ್ ವಹಿಸಿದ ಸಂಸ್ಥೆಯವರಿಗೆ ಸೂಚಿಸಲಾಗಿದೆ.
– ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್
-ನವೀನ್ ಭಟ್ ಇಳಂತಿಲ