Advertisement

ಮನೆಯಲ್ಲೇ  ತಯಾರಿಸಿ ಸ್ಟ್ರೀಟ್ ಫ‌ುಡ್‌ನ‌ ಸವಿರುಚಿ

09:28 AM Jan 05, 2019 | |

ಪಾನಿಪುರಿ
ಬೇಕಾಗುವ ಸಾಮಗ್ರಿ:
ಚಿರೋಟಿ ರವೆ: 2 ಕಪ್‌
ಬೇಕಿಂಗ್‌ ಸೋಡಾ: ಚಿಟಿಕೆ
ಉಪ್ಪು : ರುಚಿಗೆ ತಕ್ಕಷ್ಟು
ಮೈದಾ: 2 ಟೇಬಲ್‌ ಸ್ಪೂನ್‌
ಬೇಯಿಸಿದ ಆಲೂಗಡ್ಡೆ: 1 ಕಪ್‌
ಬೇಯಿಸಿದ ಬಟಾಣಿ: 1 ಕಪ್‌
ಗರಂ ಮಸಾಲ: 1/2 ಟೇಬಲ್‌ ಸ್ಪೂನ್‌
ಚಾಟ್ಮಸಾಲ: 1 ಟೇಬಲ್‌ ಸ್ಪೂನ್‌
ಪಾನಿಪುರಿ ಮಸಾಲ: 1 ಟೇಬಲ್‌ಸ್ಪೂನ್‌
ಸೇವ್‌: 1 ಕಪ್‌ ಸಣ್ಣದಾಗಿ ಕತ್ತರಿಸಿದ ಈರುಳ್ಳಿ
ಪುದೀನ ಎಲೆಗಳು: ಸ್ವಲ್ಪ

Advertisement

ಮಾಡುವ ವಿಧಾನ:
ಪೂರಿ:
ಚಿರೋಟಿರವೆ, ಮೈದಾ, ಬೇಕಿಂಗ್‌ ಸೋಡಾ, ಉಪ್ಪು ಮತ್ತು ನೀರು ಹಾಕಿ ಚೆನ್ನಾಗಿ ಕಲಸಿ ಹಿಟ್ಟು ತಯಾರಿಸಿ 5 ನಿಮಿಷ ಇಡಬೇಕು. ಅನಂತರ ಅದನ್ನು ದೊಡ್ಡ ಚಪಾತಿ ಆಕಾರದಲ್ಲಿ ಲಟ್ಟಿಸಿ ಕಟ್ಟರ್‌ ಅಥವಾ ಮುಚ್ಚಳದ ಸಹಾಯದಿಂದ ಉರುಟುರುಟಾಗಿ ಪೂರಿಯ ಆಕಾರಕ್ಕೆ ಕತ್ತರಿಸಿ ಬಿಸಿಯಾದ ಎಣ್ಣೆಗೆ ಹಾಕಿ ಕರಿಯಬೇಕು. ಹದವಾದ ಉರಿಯಲ್ಲಿ ಪೂರಿ ಕಾದು ಕೆಂಪಾದ ಮೇಲೆ ತೆಗೆಯಿರಿ.

ಪಾನಿ:
ಮಿಕ್ಸಿ ಜಾರಿಗೆ ಪುದೀನ, ಕೊತ್ತಂಬರಿ ಸೊಪ್ಪು , ಹಸಿಮೆಣಸು ಉಪ್ಪು ಹಾಕಿ ಚಟ್ನಿ ತಯಾರಿಸಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರುತೆಗೆದುಕೊಂಡು ಒಂದು ಟೇಬಲ್‌ ಸ್ಪೂನ್‌ ಚಟ್ನಿ, ಉಪ್ಪು ಪಾನಿಪುರಿ ಮಸಾಲ, ಚಾಟ್ಮಸಾಲ, ಹುಣಸೆ ಹಣ್ಣಿನ ರಸ ಕೊತ್ತಂಬರಿ ಸೊಪ್ಪು, ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಗೊಳಿಸಿ ಗರಂ ಮಸಾಲೆ ಸೇರಿಸಬೇಕು. ಬೇಯಿಸಿದ ಆಲೂಗಡ್ಡೆ ಮತ್ತು ಬಟಾಣಿ ಕಾಳುಗಳನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಗ್ರೀನ್‌ ಚಟ್ನಿ, ಉಪ್ಪು, ಗರಂ ಮಸಾಲೆ ಪಾನಿಪುರಿ ಮಸಾಲೆ ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಬೇಕು. ತಯಾರಿಸಿದ ಪೂರಿಗೆ ಈ ಮಿಶ್ರಣವನ್ನು ಹಾಕಿ ಅದರ ಮೇಲೆ ಈರುಳ್ಳಿ ಹಾಕಿ ಅದಕ್ಕೆ ಮಸಾಲೆಭರಿತ ನೀರು ಹಾಕಿದರೆ ಪಾನಿಪುರಿ ಸವಿಯಲು ಸಿದ್ಧ.

ಕಚೋರಿ
ಬೇಕಾಗುವ ಸಾಮಗ್ರಿ
ಮೈದಾ: 200 ಗ್ರಾಂ
ಹೆಸರು ಬೇಳೆ: 100 ಗ್ರಾಂ
ತುಪ್ಪ : 40 ಗ್ರಾಂ
ದನಿಯಾಪುಡಿ: 1 ಚಮಚ
ಜೀರಿಗೆ: 1ಚಮಚ
ಉಪ್ಪು: 1ಚಮಚ
ಸಕ್ಕರೆ: 1 ಚಮಚ
ಬೇಕಿಂಗ್‌ ಸೋಡಾ: 1/4 ಚಮಚ
ಮೆಣಸಿನ ಹುಡಿ, ಚಾಟ್ಮಸಾಲ, ಗರಂ ಮಸಾಲ : 1 ಚಮಚ
ಅಮ್ಚೂರ್‌: 1/2 ಚಮಚ

ಮಾಡುವ ವಿಧಾನ:
ಮೈದಾಹಿಟ್ಟಿಗೆ ತುಪ್ಪ, ನೀರು, ಬೇಕಿಂಗ್‌ ಸೋಡಾ ಹಾಕಿ ಹಿಟ್ಟು ತಯಾರಿಸಿ 20 ನಿಮಿಷ ಬಿಡಬೇಕು. ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಕೆಂಪಾಗಾಗುವವರೆಗೆ ಹುರಿಯಬೇಕು. ಅದಕ್ಕೆ ಜೀರಿಗೆ, ದನಿಯಾ, ಸೋಂಪು ಸೇರಿಸಬೇಕು. ಈ ಮಿಶ್ರಣದ ಜತೆ ಗರಂ ಮಸಾಲ, ಅಮ್ಚೂರ್‌ ಹುಡಿ, ಮೆಣಸಿನ ಹುಡಿ, ಚಾಟ್ ಮಸಾಲ ಸಕ್ಕರೆ, ಉಪ್ಪು ಹಾಕಿ ನೀರು ಹಾಕದೆ ರುಬ್ಬಬೇಕು. ಅನಂತರ ಈ ಹುಡಿಗೆ ಸ್ವಲ್ಪ ನೀರು ಹಾಕಿ ಉದುರುದುರಾಗಿ ಮಾಡಬೇಕು. ಹಿಟ್ಟನ್ನು ಪೂರಿ ಆಕಾರಕ್ಕೆ ಲಟ್ಟಿಸಿ ಹುಡಿ ಮಾಡಿದ ಹೆಸರುಬೇಳೆ ಮಿಶ್ರಣವನ್ನು ಅದಕ್ಕೆ ಹಾಕಿ ಉಂಡೆ ಮಾಡಿ ಮತ್ತೂಮ್ಮೆ ಲಟ್ಟಿಸಬೇಕು. ಎಣ್ಣೆ ಬಿಸಿ ಮಾಡಿ ಹದವಾದ ಉರಿಯಲ್ಲಿ ಬೇಯಿಸಿದರೆ ಕಚೋರಿ ಸಿದ್ಧವಾಗುತ್ತದೆ.

Advertisement

ಎಗ್‌ರೋಲ್‌
ಬೇಕಾಗುವ ಸಾಮಗ್ರಿ:
ಮೈದಾ ಹಿಟ್ಟು: ಮುಕ್ಕಾಲು ಕಪ್‌
ಉಪ್ಪು: ಸ್ವಲ್ಪ
ಮೊಟ್ಟೆ: 2
ಟೊಮೆಟೊ ಸಾಸ್‌
ಮೆಣಸಿನ ಹುಡಿ: ಸ್ವಲ್ಪ
ಈರುಳ್ಳಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಕ್ಯಾಬೇಜ್‌

ಮಾಡುವ ವಿಧಾನ:
ಮೈದಾವನ್ನು ಹಿಟ್ಟು ಮಾಡಿ 20 ನಿಮಿಷ ಬಿಡಬೇಕು. 2 ಮೊಟ್ಟೆಯನ್ನು ಒಂದು ಪಾತ್ರೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಹುಡಿ ಹಾಕಿ ಚೆನ್ನಾಗಿ ಮಿಶ್ರಗೊಳಿಸಬೇಕು. ಮೈದಾ ಹಿಟ್ಟನ್ನು ಸ್ವಲ್ಪ ತೆಗೆದು ತೆಳುವಾಗಿ ಲಟ್ಟಿಸಿ ಕಾವಲಿಯಲ್ಲಿ ಹಾಕಿ ಬೇಯಿಸಬೇಕು. ಅನಂತರ ಕಾವಲಿಗೆ ಮೊಟ್ಟೆಯ ಮಿಶ್ರಣ ಹಾಕಿ 2 ನಿಮಿಷ ಬೇಯಿಸಿ ಅದರೆ ಮೇಲೆ ಬೇಯಿಸಿದ ಚಪಾತಿ ಹಾಗೂ ಸ್ವಲ್ಪ ಎಣ್ಣೆಯನ್ನು ಹಾಕಬೇಕು ಎರಡೂ ಬದಿಯನ್ನು ಬೇಯಿಸಿ ಅದರ ಮೇಲೆ ಈರುಳ್ಳಿ, ಕ್ಯಾಬೇಜ್‌, ಕೊತ್ತಂಬರಿ ಸೊಪ್ಪು, ಸೌತೆಕಾಯಿ ಹಾಕಿ ಉಪ್ಪು ಹಾಗೂ ಮೆಣಸಿನ ಹುಡಿ ದರೆ ಮೇಲೆ ಟೊಮೆಟೊ ಸಾಸ್‌ ಹಾಕಿ ರೋಲ್‌ ಮಾಡಿದರೆ ಎಗ್‌ ರೋಲ್‌ ಸವಿಯಲು ಸಿದ್ಧ.

ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next