Advertisement

ಬೀದಿ ನಾಟಕ ಪ್ರದರ್ಶನ

12:07 PM Feb 04, 2020 | Suhan S |

ಹೊನ್ನಾಳಿ: ನಮ್ಮ ಮನೆಯ ಕಸವನ್ನು ಇನ್ನೊಬ್ಬರ ಅಂಗಳದಲ್ಲಿ, ಖಾಲಿ ನಿವೇಶನದಲ್ಲಿ ಹಾಕಬಾರದು. ಪ್ಲಾಸ್ಟಿಕ್‌ ಬಳಸಬಾರದು. ಮಾರ್ಕೆಟ್‌ ಗೆ ತೆರಳುವಾಗ ಕೈಚೀಲ ಒಯ್ಯಬೇಕು, ಸಿದ್ಧ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಮನೆಗೆ ತರಬಾರದು ಎಂಬ ಮೊದಲಾದ ಉಪಯುಕ್ತ ಮಾಹಿತಿ ತಿಳಿಸುವ ಸ್ವಚ್ಛ ಗ್ರಾಮ ಎಂಬ ಬೀದಿ ನಾಟಕವನ್ನು ಅಭಿವ್ಯಕ್ತಿ ಕಲಾ ತಂಡದವರು ಪಟ್ಟಣದ ಎಸ್ಸಿ, ಎಸ್ಟಿ ಕಾಲೋನಿಯಲ್ಲಿ ಸೋಮವಾರ ಪ್ರದರ್ಶಿಸಿದರು.

Advertisement

ಇದಲ್ಲದೇ ಸೋಮವಾರ ಪಟ್ಟಣದ ತುಂಗಭದ್ರಾ ಬಡಾವಣೆ, ಮೇದಾರಕೇರಿ ಹಾಗೂ ಬಸ್‌ ಸ್ಟ್ಯಾಂಡ್‌ ವಾರ್ಡ್‌ಗಳಲ್ಲಿ ಕೂಡ ಕಲಾವಿದರು ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯತ್ನಿಸಿದರು. ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ವಾರ್ಡ್‌ಗಳಲ್ಲಿ ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಲಾಗುವುದು ಎಂದು ಪ.ಪಂ ಮುಖ್ಯಾಧಿಕಾರಿ ಎಸ್‌. ಆರ್‌.ವೀರಭದ್ರಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next