Advertisement

ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ

03:00 PM Dec 17, 2019 | Team Udayavani |

ಚಿತ್ರದುರ್ಗ: ವಾರ್ತಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಹೊಳಲ್ಕೆರೆ ತಾಲೂಕು ಎನ್‌.ಜಿ. ಹಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಆರ್‌. ಗೊಲ್ಲರಹಳ್ಳಿ, ಕಡ್ಲಪ್ಪನಟ್ಟಿ, ಉಪ್ಪಾರಹಟ್ಟಿ ಹೊಸಹಟ್ಟಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ  ಬೀದಿನಾಟಕವನ್ನು ಪ್ರದರ್ಶಿಸಲಾಯಿತು.

Advertisement

ಹಿರಿಯೂರಿನ ಪಾಲನಾ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೆ.ಎಚ್‌. ಮೋಹನ್‌ ಮತ್ತು ಸಂಗಡಿಗರು ಬೀದಿನಾಟಕ ಪ್ರದರ್ಶಿಸಿದರು. ಮಾರುತಿ ಸಾಂಸ್ಕೃತಿಕ ಕಲಾ ಸಂಘ ಆಯಿತೋಳಿನ ಜಿ.ಎನ್‌. ವಿರೂಪಾಕ್ಷಪ್ಪ ಮತ್ತು ಸಂಗಡಿಗರು ಪ್ರಚಾರ ಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಬೀದಿನಾಟಕದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಸರ್ಕಾರ ನೀಡುವ ಸಹಾಯಧನ, ನೇಕಾರರ ಸಾಲ ಮನ್ನಾ, ಮೀನುಗಾರರ ಸಾಲ ಮನ್ನಾ ಯೋಜನೆ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‌ ವಿತರಣೆ ಹಾಗೂ ಆಯುಷ್ಮಾನ್‌ ಕಾರ್ಡ್‌ ಹೊಂದಿರುವವರಿಗೆ ಇರುವ ಸೌಲಭ್ಯಗಳ ಮಾಹಿತಿಯನ್ನು ಬೀದಿ ನಾಟಕದ ಮೂಲಕ ಪ್ರಚುರ ಪಡಿಸಲಾಯಿತು.

ಸಿನಿ ಚಾಲಕ ತಿಪ್ಪಯ್ಯ, ವಾಹನ ಚಾಲಕ ಚಂದ್ರಶೇಖರ್‌ ಎಸ್‌. ಗುಡದಪ್ಪ, ಧರಣೇಶಪ್ಪ, ಆರ್‌. ರಾಮಪ್ಪ, ಟಿ. ಚಂದ್ರಪ್ಪ, ಬಿ. ಮಂಜಪ್ಪ, ಎಚ್‌. ಬೈರಪ್ಪ, ಸವಿತಾ, ಜಯಮ್ಮ, ರತ್ನಮ್ಮ, ಪರಪ್ಪ, ಜಯಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next