ಅರಸೀಕೆರೆ: ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿರುವ ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ಮಾರುತಿನಗರದ ವಾಸಿ ಭಾಗ್ಯಮ್ಮ ಎಂದಿನಂತೆ ಮುಂಜಾನೆ ತಮ್ಮ ಮನೆಯ ಗೇಟ್ ತೆರೆಯುತ್ತಿದ್ದಂತೆ ದಿಢೀರನೆ ಮೇಲೆರಗಿದ ಬೀದಿನಾಯಿ ಭಾಗ್ಯಮ್ಮರವರ ಬಲ ತೋಳಿನ ಮಾಂಸ ಖಂಡವನ್ನ ಕಿತ್ತಿದೆ. ಅದೇ ರೀತಿ ಕರಿಯಮ್ಮ ದೇವಾಲಯದ ಸಮೀಪ ಶ್ರೀನಿವಾಸ್ ಎಂಬುವರ ಮೇಲೆ ಹಾಗೂ ಮುಜಾವರ್ ಮೊಹಲ್ಲಾದಲ್ಲಿ ಮತ್ತೂಬ್ಬರ ಮೇಲೆ ದಾಳಿ ಮಾಡಿದ್ದು, ಈ ಮೂವರು ಗಾಯಾಳುಗಳು ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮಕ್ಕಳನ್ನು ಹೊರಗೆ ಕಳುಹಿಸಲು ಭಯ: ಹಿಂಡು ಹಿಂಡಾಗಿರುವ ಬೀದಿನಾಯಿಗಳ ಹಾವಳಿ ನಗರಾ ದ್ಯಂತ ಇದ್ದು ಸಾವಿರಾರು ಬೀದಿನಾಯಿಗಳ ಹಾವಳಿ ಯಿಂದಾಗಿ ನಗರದ ರಸ್ತೆಗಳಲ್ಲಿ ತಮ್ಮ ಮಕ್ಕಳನ್ನು ಆಟವಾಡಲು ಪೋಷಕರು ಬಿಡಲು ಭಯಪಡು ತ್ತಿದ್ದಾರೆ. ಕೆಲವು ಬಡಾವಣೆಗಳಲ್ಲಂತೂ ದೊಡ್ಡವರೂ ಓಡಾಡಲು ಭಯ ಪಡುವಂತಾಗಿದೆ. ಯಾವಾಗ ಎಲ್ಲಿ ಬಿದಿನಾಯಿಗಳು ದಾಳಿ ಮಾಡುತ್ತವೋ ಎಂಬ ಅಂಜಿಕೆಯಲ್ಲೇ ನಗರದ ಜನತೆ ದಿನದೂಡುತ್ತಿದ್ದಾರೆ.
50ಕ್ಕೂ ಹೆಚ್ಚು ಜನರಿಗೆ ಗಾಯ: ಬೀದಿನಾಯಿಗಳ ದಾಳಿಯಿಂದಾಗಿ ಕಳೆದ ಒಂದು ವರ್ಷದ ಈಚೆಗೆ 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ದಿನದಿಂದ ದಿನಕ್ಕೆ ಶ್ವಾನಗಳ ಹಾವಳಿ ಮುಂದುವರಿದಿದ್ದರೂ ಕ್ರಮಕೈಗೊಳ್ಳಬೇಕಾದ ನಗರಸಭೆ ಕಣ್ಣುಮುಚ್ಚಿ ಕುಳಿತಿರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ನಗರಸಭೆ ಆಡಳಿತ ಕಾರಣವಾಗಿದೆ.
ಸಾರ್ವಜನಿಕರ ಅಳಲು: ನಮ್ಮ ಮನೆಯ ಸುತ್ತಮುತ್ತ ಹತ್ತಾರು ಬೀದಿನಾಯಿಗಳಿವೆ. ಬೀದಿಯಲ್ಲಿ ಮಕ್ಕಳಿರಲಿ ದೊಡ್ಡವರೂ ಓಡಾಡಲು ಭಯ ಪಡುವಂತ ವಾತಾವರಣವಿದೆ. ಬಡಾವಣೆಯ ಜನತೆ ಎಷ್ಟೇ ಎಚ್ಚರದಿಂದ ಇದ್ದರೂ ಮಕ್ಕಳು ಮತ್ತೆ ದೊಡ್ಡ ವರ ಮೇಲೆ ನಾಯಿಗಳು ದಾಳಿ ಮಾಡುತ್ತಲೇ ಇವೆ.
•ತಮ್ಮ ಮಕ್ಕಳನ್ನು ಆಟವಾಡಲು ಕಳುಹಿಸಲು ಪೋಷಕರಿಗೆ ಭಯ
•ಯಾವಾಗ ಎಲ್ಲಿ ಬಿದಿನಾಯಿಗಳು ದಾಳಿ ಮಾಡುತ್ತವೋ ಎಂದು ನಗರದ ಸಾರ್ವಜನಿಕರಿಗೆ ಆತಂಕ
•ಶ್ವಾನಗಳ ಹಾವಳಿ ಮುಂದುವರಿದಿದ್ದರೂ ಕ್ರಮಕೈಗೊಳ್ಳದ ನಗರಸಭೆ ಅಧಿಕಾರಿಗಳು
•ಬೀದಿನಾಯಿಗಳ ದಾಳಿಯಿಂದಾಗಿ ಕಳೆದ ಒಂದು ವರ್ಷದ ಈಚೆಗೆ 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ