Advertisement
ಇಲ್ಲಿ ಕಾರ್ಯಾ ಚರಣೆ ಸಫಲಗೊಂಡರೆ ಇಡೀ ಜಿಲ್ಲೆಗೆ ಇದೇ ಮಾದರಿಯನ್ನು ವಿಸ್ತರಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
Related Articles
Advertisement
ಇಡೀ ಜಿಲ್ಲೆಗೆ ವಿಸ್ತರಿಸುವ ಗುರಿ : ಬೀದಿನಾಯಿಗಳ ನಿಯಂತ್ರಣಕ್ಕೆ ಹೊಸ ಕಾಯಿದೆ ಜಾರಿಗೆ ಬಂದ ಬಳಿಕ ನಾಯಿಗಳ ಸಂತಾನಹರಣ ಚಿಕಿತ್ಸೆ ಸವಾ ಲಾಗಿ ಪರಿಣಮಿಸಿತ್ತು. ಜಿಲ್ಲೆಯ ಮೂರು ನಗರಸಭೆ ಮತ್ತು ಒಂದು ಪುರಸಭೆಯ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಟೆಂಡರ್ ಕರೆಯಲಾಗುತ್ತಿತ್ತಾದರೂ ಯಾವುದೇ ಸಂಸ್ಥೆ ಟೆಂಡರ್ ಹಾಕಲು ಮುಂದೆ ಬರುತ್ತಿರಲಿಲ್ಲ. ಇದರಿಂದಾಗಿ ಬೀದಿ ನಾಯಿಗಳ ನಿಯಂತ್ರಣ ಕಗ್ಗಂಟಾಗಿ ಪರಿಣಮಿಸಿತ್ತು. ಇದೇ ಮೊದಲ ಬಾರಿಗೆ ಟೆಂಡರ್ ಅನುಮತಿ ಪಡೆದು ಕಾರ್ಯ ರೂಪಕ್ಕೆ ಬರಲು ಸಿದ್ಧತೆ ನಡೆದಿದೆ.
ರಾಮನಗರದಲ್ಲಿ ಸಫಲಗೊಂಡರೆ ಇಡೀ ಜಿಲ್ಲೆಗೆ ಯೋಜನೆಯನ್ನು ವಿಸ್ತರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಮಕ್ಕಳ ಮೇಲೆ ಹೆಚ್ಚು ದಾಳಿ: ರಾಮನಗರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 24595 ಮಂದಿ ನಾಯಿಕಡಿತಕ್ಕೆ ಒಳಗಾಗಿದ್ದಾರೆ ಎಂಬ ಸಂಗತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವಿವರದಿಂದ ತಿಳಿದು ಬರುತ್ತದೆ.
ಇನ್ನು ಗ್ರಾಮೀಣ ಕೆಲ ಮಂದಿ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿದ್ದರೆ, ಮತ್ತೆ ಕೆಲವರು ನಾಯಿಕಡಿತಕ್ಕೆ ಚಿಕಿತ್ಸೆ ಪಡೆಯದೆ ಉದಾ ಸೀನ ಮಾಡುವ, ನಾಟಿ ಔಷಧಿ ತೆಗದು ಕೊಳ್ಳುವ ಉದಾಹರಣೆ ಸಹ ಸಾಕಷ್ಟಿದೆ. ನಾಯಿದಾಳಿಗೆ ಒಳಗಾಗಿರುವರಲ್ಲಿ ಶೇ.50ಕ್ಕಿಂತ ಹೆಚ್ಚು 14 ವರ್ಷದೊಳಗಿನ ಮಕ್ಕಳು ಇದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಶಾಶ್ವತ ಕೇಂದ್ರಕ್ಕೆ ಚಿಂತನೆ: ರಾಮನಗರ ವ್ಯಾಪ್ತಿಯ ಬೀದಿನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ, ಅವುಗಳನ್ನು ಹಾರೈಕೆ ಮಾಡಿ ಬಿಡಲು 1 ಎಕರೆ ವಿಸ್ತೀರ್ಣದಲ್ಲಿ ಶಾಶ್ವತ ನಾಯಿ ಶಸ್ತ್ರ ಚಿಕಿತ್ಸಾ ಘಟಕವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಪಶುವೈದ್ಯ ಆಸ್ಪತ್ರೆಯಲ್ಲಿ ಸ್ಥಾಪಿಸಿರುವುದು ತಾತ್ಕಾಲಿಕ ಕೇಂದ್ರವಾಗಿದ್ದು, ಮುಂದಿನ ಹಂತದಲ್ಲಿ ಇದಕ್ಕಾಗಿ ಶಾಶ್ವತ ಕೇಂದ್ರ ಸ್ಥಾಪನೆಗೆ ರಾಮನಗರ ನಗರಸಭೆ ಚಿಂತನೆ ನಡೆಸಿದೆ. ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ಖಾಸಗಿ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ. 20 ಲಕ್ಷ ರೂ.ವೆಚ್ಚದಲ್ಲಿ ಸಂತಾನಹರಣ ಚಿಕಿತ್ಸೆ ಮಾಡಿಸಲಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಪ್ರಯತ್ನ ನಡೆಯುತ್ತಿದೆ.
ಸಂತಾನಹರಣ ಚಿಕಿತ್ಸೆಗೆ ಬೇಕಾದ ಎಲ್ಲಾ ಮೂಲಸೌಕರ್ಯವನ್ನು ಕಲ್ಪಿಸಿ ಕೊಡಲಾಗಿದ್ದು, ಸದ್ಯದಲ್ಲೇ ಚಾಲನೆ ನೀಡಲಾಗುವುದು. ಈ ಬಗ್ಗೆ ಜಿಲ್ಲೆಯ ವಿವಿಧ ನಗರಸಭೆ ಮತ್ತು ಪುರಸಭೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದು, ನಮ್ಮ ಸಾಧಕಬಾಧಕ ನೋಡಿಕೊಂಡು ತಮ್ಮಲ್ಲೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ. ● ನಾಗೇಶ್, ಪೌರಾಯುಕ್ತ, ನಗರಸಭೆ ರಾಮನಗರ
– ಸು.ನಾ.ನಂದಕುಮಾರ್