ಮಂಡ್ಯ: ಮಳವಳ್ಳಿ ತಾಲೂಕಿನ ಬಿಜಿಪುರ ಹೋಬಳಿಯ ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಕುರಿ ಮತ್ತು ಮೇಕೆಗಳು ನಿರಂತರವಾಗಿ ಬಲಿಯಾಗುತ್ತಿವುದರಿಂದ ಜನರು ಆತಂಕಕ್ಕೆ ಒಳಗಾಗುತ್ತಿದ್ದರೆ, ಇತ್ತ ಕಿರುಗಾವಲು ಹೋಬಳಿಯ ರೈತರಿಗೆ ನಾಯಿಗಳ ಕಾಟ ಇನ್ನಷ್ಟು ಆತಂಕ ತಂದಿದೆ.
ತಾಲ್ಲೂಕಿನ ಅಕ್ಕಮ್ಮನಕೊಪ್ಪಲು ಗ್ರಾಮದಲ್ಲಿ ಶನಿವಾರ ಕುರಿಗಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದು, ಗ್ರಾಮದ ಶಿವಸ್ವಾಮಿ ಅವರಿಗೆ ಸೇರಿದ 12 ಕುರಿಗಳು ಬಲಿಯಾಗಿವೆ.
ಇದನ್ನೂ ಓದಿ:ತನಿಖೆಯ ದಿಕ್ಕು ತಪ್ಪಿಸುವ ತಂತ್ರ:ದೆಹಲಿ-ಐಇಡಿ ಸ್ಫೋಟದ ಹೊಣೆ ಹೊತ್ತ ಜೈಶ್ ಉಲ್ ಹಿಂದ್?
ಶಿವಸ್ವಾಮಿ ಅವರು ತಮ್ಮ ಮನೆಗೆ ಹಿಂಭಾಗದಲ್ಲಿ ಕುರಿಗಳಿಗೆ ನಿರ್ಮಿಸಿದ್ದ ಶೆಡ್ ಮೇಲೆ ಶನಿವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಸುಮಾರು 5-6 ನಾಯಿಗಳ ಹಿಂಡು ದಾಳಿ ಮಾಡಿದ್ದು, ಕೊಟ್ಟಿಗೆಗೆ ನುಗ್ಗಿ 18 ಕುರಿಗಳನ್ನು ಕಚ್ಚಿದೆ. ಈ ವೇಳೆ ಕುರಿಗಳ ಚೀರಾಟ ಶಬ್ದ ಕೇಳಿ ಶಿವಸ್ವಾಮಿ ಸ್ಥಳಕ್ಕೆ ಬರುವರಷ್ಟರಲ್ಲಿ 12 ಕುರಿಗಳು ಸಾವನ್ನಪ್ಪಿವೆ. ಸುಮಾರು 2 ಲಕ್ಷ ಮೌಲ್ಯದ ಕುರಿಗಳು ಮೃತಪಟ್ಟಿವೆ ಎಂದು ಅವರು ತಿಳಿಸಿದ್ದಾರೆ.
ಬಂಡೂರು ಪಶುವೈದ್ಯ ಆಸ್ಪತ್ರೆಯ ವೈದ್ಯರು ಕುರಿಗಳ ಶವ ಪರೀಕ್ಷೆ ನಡೆಸಿ, ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಠಾಕ್ರೆ ತನ್ನ ಅಧಿಕಾರ ಉಳಿಸಿಕೊಳ್ಳಲು ಗಡಿ ವಿಚಾರಕ್ಕೆ ಬಂದಿದ್ದಾರೆ: ಲಕ್ಷ್ಮಣ ಸವದಿ
ಇತ್ತೀಚಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ರಾತ್ರಿ ಸಮಯದಲ್ಲಿ ಓಡಾಟ ನಡೆಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಬೀದಿ ನಾಯಿಗಳ ದಾಳಿ: ಮತ್ತೊಂದೆಡೆ ಹಸು, ಕುರಿ, ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ತಾಲ್ಲೂಕು ಆಡಳಿತ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದರು.