Advertisement

ಬೀದಿನಾಯಿಗಳ ಜತೆ ಸಾಕುನಾಯಿಗಳೂ ಬೀದಿಗೆ ಬಂದರೆ…?

09:40 PM Apr 27, 2020 | Sriram |

ಉಡುಪಿ: ಬೆಂಗಳೂರಿನಲ್ಲಿ ಭಾರೀ ಕಲಿತ ದೊಡ್ಡ ಕುಳಗಳು ಕೋವಿಡ್ 19 ಸೋಂಕಿಗೆ ಹೆದರಿ ತಾವು ಇದುವರೆಗೆ ಮುದ್ದಿಸುತ್ತಿದ್ದ ಸಾಕು ನಾಯಿಗಳನ್ನು ಕದ್ದುಮುಚ್ಚಿ ಬೀದಿ ಪಾಲು ಮಾಡುತ್ತಿರುವುದು ವರದಿಯಾಗಿದೆ. ಕರಾವಳಿಯಲ್ಲಿ ಕಸಗಳನ್ನು ಕದ್ದುಮುಚ್ಚಿ ಎಸೆದು ಹೋಗುವ ಎಜುಕೇಟೆಡ್‌ಗಳು ಸಾಕು ನಾಯಿಗಳನ್ನು ಬೀದಿಗೆ ಅಟ್ಟಿದರೆ ಬೀದಿ ನಾಯಿಗಳ ಸಮಸ್ಯೆ ಜತೆ ಈ ದುಬಾರಿ ಸಾಕುನಾಯಿಗಳೂ ಸಮಸ್ಯೆ ತಂದೊಡ್ಡಬಹುದು ಎಂಬ ಆತಂಕವಿದೆ.

Advertisement

ಎರಡು ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಂಗನ ಕಾಯಿಲೆ ಈಗ 12 ಜಿಲ್ಲೆಗಳಿಗೆ ಹರಡಿದೆ. ನಾಯಿಗಳನ್ನು ಬಿಡುವ ಕುರಿತೂ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳಬಹುದು ಎಂಬ ಆತಂಕವನ್ನು ನಿವೃತ್ತ ಪ್ರಾಧ್ಯಾಪಕ ಡಾ| ಮುರಳೀಧರ ಉಪಾಧ್ಯ ಹಿರಿಯಡಕ ವ್ಯಕ್ತಪಡಿಸುತ್ತಾರೆ.

ಹಂದಿ ಜ್ವರ, ಹಕ್ಕಿ ಜ್ವರ ಇತ್ಯಾದಿಗಳಂತೆ ನಾಯಿ ಮೂಲದಿಂದ ವೈರಾಣುಗಳು ಹರಡಿದರೆ ಪರಿಸ್ಥಿತಿ ಗಂಡಾಂತರವಾಗಲಿದೆ ಎಂಬ ಕಳವಳ ಇದೆ.

ಬೆಂಗಳೂರಿನಲ್ಲಿ ಸಾಕು ನಾಯಿಗಳನ್ನು ಬಿಡುವ ಅಗತ್ಯವಿರಲಿಲ್ಲ. ಅವು ವ್ಯಾಕ್ಸಿನೇಟೆಡ್‌ ಆಗುವೆ. ಐಟಿ, ಬಿಟಿಯವರು ಸುಮ್ಮನೆ ಹೆದರಿ ಬಿಟ್ಟು ಬಂದರು. ಹೀಗೆ ಮಾಡಿದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಎಚ್ಚರಿಸಿದೆ ಎನ್ನುತ್ತಾರೆ ಪಶುಸಂಗೋಪನ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ|ಹರೀಶ್‌ ತಮಣಕರ್‌.

ಬಿಟ್ಟು ಹೋದ ನಾಯಿಗಳೂ ಒಳ್ಳೊಳ್ಳೆಯ ತಳಿಗಳಾದ ಕಾರಣ ಎನ್‌ಜಿಒಗಳು ಲಾಭ ಮಾಡಿಕೊಳ್ಳುವ ಅಪಾಯವೂ ಇದೆಯಂತೆ. ಇವರು ಈ ಬಿಟ್ಟು ಹೋದ ನಾಯಿಗಳನ್ನು ಎರಡು ಮೂರು ತಿಂಗಳು ಸಾಕಿ ಅನಂತರ ಒಳ್ಳೆಯ ಬೆಲೆಗೆ ಮಾರುವ ಸಾಧ್ಯತೆ ಇದೆ.

Advertisement

ಉಡುಪಿಯಲ್ಲಿ ಬೀದಿ ನಾಯಿಗಳು, ಬೀದಿ ಹಸುಗಳು, ಹಕ್ಕಿಗಳಿಗೆ ಆಹಾರ ಒದಗಿಸಲು ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗಿದೆ. ಇದರ ಪೂರ್ಣ ಜವಾಬ್ದಾರಿಯನ್ನು ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಡಾ|ಹರೀಶ್‌ ತಮಣಕರ್‌ ತಿಳಿಸಿದ್ದಾರೆ.

ಬೀದಿನಾಯಿಗಳಿಗೆ ಆಹಾರ
ಜಿಲ್ಲೆಯಲ್ಲಿ ಸಾಕು ನಾಯಿಗಳನ್ನು ಬೀದಿಗೆ ಬಿಡುವ ಪ್ರಕರಣ ನಡೆದಿಲ್ಲ. ಬೀದಿನಾಯಿಗಳಿಗೂ ಆಹಾರ ಕೊಡುವ ವ್ಯವಸ್ಥೆ ಮಾಡಲಾಗಿದೆ.
-ಡಾ| ಹರೀಶ್‌ ತಮಣಕರ್‌, ಉಪನಿರ್ದೇಶಕರು, ಪಶುಸಂಗೋಪನ ಇಲಾಖೆ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next