ಹಾಸನ: ನಗರದ ತಣ್ಣೀರುಹಳ್ಳಿದಲ್ಲಿ ನಾಯಿಯೊಂದು 50ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಬುಧವಾರ ನಡೆದಿದೆ. ರಸ್ತೆಯಲ್ಲಿ ಸಂಚರಿಸುವವರ ಮೇಲೆ ಹರಿ ಹಾಯ್ದು ಕಚ್ಚುತ್ತಿದ್ದ ಬೀದಿ ನಾಯಿಯನ್ನು ಸಾರ್ವಜನಿಕರು ಅಟ್ಟಾಡಿಸಿ ಹೊಡೆದು ಸಾಯಿಸಿದ್ದಾರೆ.
ನಾಯಿಯಿಂದ ಕಚ್ಚಿಸಿಕೊಂಡವರು ನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಹಾಸನ ನಗರ ಮತ್ತು ಹೊರವಲಯಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ ನಡೆದಾಡುವವರು, ಬೈಕ್ ಸವಾರರು ಜೀವವನ್ನು ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಹಾವಳಿ ಹೆಚ್ಚಾಗಿದ್ದರೂ ಹಾಸನ ನಗರಸಭೆ ಮಾತ್ರ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ.
ಪ್ರಾಣಿದಯಾ ಸಂಘ ಅಡ್ಡಿಪಡಿಸುತ್ತದೆ ಎಂಬ ನೆಪ ಹೇಳಿ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ರಾಜ್ಯದಲ್ಲಿ ಸದ್ಯಕ್ಕೆ ತರಾತುರಿಯಲ್ಲಿ ಶಾಲೆ ಆರಂಭ ಮಾಡಲ್ಲ: ಸಚಿವ ಸುರೇಶ್ ಕುಮಾರ್