Advertisement

ಗಮನ ಸೆಳೆದ ಸ್ತ್ರೀಶಕ್ತಿ ಸಂಘಗಳ ಆಹಾರ ಮೇಳ

03:25 PM Oct 30, 2021 | Team Udayavani |

ಚಿತ್ರದುರ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಾಗೂಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ತ್ರೀಶಕ್ತಿಸ್ವ-ಸಹಾಯ ಗುಂಪುಗಳ ಆಹಾರ ಮೇಳ ಆಯೋಜಿಸಲಾಗಿತ್ತು.

Advertisement

ಜಿಲ್ಲಾ ವ್ಯಾಪ್ತಿಯ ಏಳು ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬರುವ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ಮನೆಯಲ್ಲಿಯೇ ತಯಾರಿಸಿದ ಆಹಾರ ಪದಾರ್ಥಗಳು ಆಹಾರ ಮಳಿಗೆಗಳಲ್ಲಿ ಕಂಡುಬಂದವು.

ಹಪ್ಪಳ, ಸಂಡಿಗೆ, ಚಕ್ಕುಲಿ, ಕೋಡುಬಳೆ, ರಾಗಿ ರೊಟ್ಟಿ, ಚಟ್ನಿ, ದ್ವಿದಳ ಧಾನ್ಯಗಳು, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಮೊಟ್ಟೆ ತರಕಾರಿ, ಎಲ್ಲಾ ತರಹದ ಹಣ್ಣುಗಳು, ತಂಪುಪಾನೀಯಗಳು, ಸಿಹಿ ತಿನಿಸು, ದೇಸಿಯಕೊಬ್ಬರಿ ಎಣ್ಣೆ, ಸಾಬೂನು, ವಿಧ ವಿಧವಾದ ಮೊಳಕೆ ಕಾಳುಗಳಿಂದ ತಯಾರಿಸಿದಪಲ್ಯ, ಕೋಸಂಬರಿ, ಅಗಸಿ ಚಟ್ನಿ ಮತ್ತಿತರೆತಿನಿಸುಗಳು ಕೈ ಬೀಸಿ ಕರೆಯುತ್ತಿದ್ದವು.

ಆಹಾರ ಮೇಳ ಉದ್ಘಾಟಿಸಿದ ಜಿಲ್ಲಾಧಿಕಾರಿ ಕವಿತಾ ಎಸ್‌ ಮನ್ನಿಕೇರಿ ಮಾತನಾಡಿ, ಆರೋಗ್ಯವನ್ನು ಸದೃಢವಾಗಿ ಕಾಯ್ದುಕೊಳ್ಳುವ ಮೂಲಕ ಆರೋಗ್ಯವಂತಸಮಾಜ ನಿರ್ಮಾಣ ಮಾಡಬೇಕು ಎಂದರು. ಆಹಾರ ಮೇಳದಲ್ಲಿ ಯಾವ ರೀತಿಯಾಗಿಆಹಾರ ಸೇವನೆ ಮಾಡಬೇಕು ಎಂದುವಿಭಿನ್ನವಾಗಿ ತೋರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಆಹಾರ ಮೇಳದಲ್ಲಿ ಮನೆಯಲ್ಲಿಯೇ ಸಿಗುವಂತಹ ಆಹಾರ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸಿಕೊಂಡು ರುಚಿ ರುಚಿಯಾಗಿತಿನಿಸುಗಳನ್ನು ಸಿದ್ಧಪಡಿಸಿರುವುದು ವಿಶೇಷ ಎಂದರು.

Advertisement

ತಾಯಂದಿರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಹೇಗೆ ತಯಾರಿಸಿ ನೀಡಬೇಕುಎಂಬುದನ್ನು ಹಲವಾರು ಸ್ತ್ರೀಶಕ್ತಿ ಸಂಘಗಳು ಮೇಳದಲ್ಲಿ ಪ್ರದರ್ಶನ ನೀಡಿವೆ. ಇಲ್ಲಿ ಸಿಗುವ ಸಿದ್ಧವಾದ ಆಹಾರ ಯಾವ ಕಾರ್ಪೋರೇಟ್‌ ವಾಣಿಜ್ಯ ಸಂಸ್ಥೆಯಲ್ಲಿಯು ಸಿಗುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ ಮಾತನಾಡಿದರು. ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಆಹಾರಮೇಳ ಕಾರ್ಯಕ್ರಮದಲ್ಲಿ ಜಿಲ್ಲೆಯ 30 ಸ್ವ-ಸಹಾಯ ಗುಂಪುಗಳು ಭಾಗವಹಿಸಿದ್ದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ರಾಜಾನಾಯ್ಕ,

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಪಂ ಉಪಕಾರ್ಯದರ್ಶಿ ರಂಗಸ್ವಾಮಿ, ಮಕ್ಕಳ ರಕ್ಷಣಾಧಿಕಾರಿ ಲೋಕೇಶಪ್ಪ, ಜಿಲ್ಲಾಅಂಗವಿಕಲರ ಕಲ್ಯಾಣಾ ಧಿಕಾರಿ ಜೆ.ವೈಶಾಲಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next