Advertisement

ಕೋವಿಡ್‌ ಭತ್ಯೆ ವಿಚಾರದಲ್ಲಿ ತಾರತಮ್ಯ ತರವಲ್ಲ

12:46 PM Jan 09, 2022 | Team Udayavani |

ಚನ್ನಪಟ್ಟಣ: ಕೋವಿಡ್‌ ಭತ್ಯೆ ವಿಚಾರದಲ್ಲಿ ತಾರತಮ್ಯ ಎಸಗಿರುವುದು ತರವಲ್ಲ ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷೆ ಅನುಸೂಯಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಸಂಘದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದಿನಕೋವಿಡ್‌ ಮೊದಲನೇ, ಎರಡನೇ ಅಲೆಯಲ್ಲಿ ನಮ್ಮ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಮ್ಮ ಕುಟುಂಬ ದಿಂದ ದೂರ ಇದ್ದು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಪ್ರಾಣ ಒತ್ತೆಯಿಟ್ಟು ನಾಗರಿಕರ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಸರಕಾರ ಇಲಾಖೆಯಲ್ಲಿ ಪಿಪಿಇ ಕಿಟ್‌ ಧರಿಸಿ ಕೆಲಸ ಮಾಡಿದ ನರ್ಸಿಂಗ್‌ ಮೇಲಾಧಿಕಾರಿಗಳಿಗೆ, ಡಿ.ದರ್ಜೆ ನೌಕರರಿಗೆ ಮಾತ್ರವೇ ಕೋವಿಡ್‌ ರಿಸ್ಕ್ ಅಲೆಯನ್ಸ್‌ ಕೊಡುವ ಮೂಲಕ ತಾರತಮ್ಯ ಎಸಗಿದೆ.

ತಾರತಮ್ಯನೀತಿ ಸಲ್ಲದು: ಪಿಪಿಇ ಕಿಟ್‌ ಧರಿಸಿದವರು ಕೋವಿಡ್‌ನಿಂದ ಸೇಫ್‌ ಆಗಿದ್ದಾರೆ. ಆದರೆ ನಮ್ಮ ನೌಕರರು ಪಿಪಿಇ ಕಿಟ್‌ ಇಲ್ಲದೆ ಕೊರೊನಾ ರೋಗಿಗಳ ಸೇವೆ ಮಾಡುವ ಸಂದರ್ಭದಲ್ಲಿ ಸೋಂಕಿಗೆ ಒಳಗಾಗಿ ನರಳಾಡಿದ್ದಾರೆ. ಕೋವಿಡ್‌ ರಿಸ್ಕ್ ಅಲೆಯನ್ಸ್‌ ಕೊಡುವಾಗ ಆರೋಗ್ಯ ಇಲಾಖೆ ಎಲ್ಲ ವೃಂದದ ಪ್ಯಾರಾಮೆಡಿಕಲ್‌ ನೌಕರರಿಗೆ ಕೊಡಬೇಕಿತ್ತು. ಆದರೆ ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೂಂದು ಕಣ್ಣಿಗೆ ಸುಣ್ಣ ಬಳಿಯುವ ಕೆಲಸ ಮಾಡಿದೆ ಎಂದು ಟೀಕಿಸಿದರು.

ವಿಶೇಷ ಭತ್ಯೆ ನೀಡಿ: ಈಗಾಗಲೇ ಕೊವಿಡ್‌ ಮೂರನೇ ಅಲೆ ಎದುರಿಸಲು ಕೊವಿಡ್‌ ಕೇರ್‌ ಸೆಂಟರ್‌ಗಳಲ್ಲಿ ದಿನದ 24 ಗಂಟೆ ಕೆಲಸ ಮಾಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆದ್ದರಿಂದ ನಮ್ಮ ನೌಕರ ರಿಗೆ ಇತರರಿಗೆ ಕೊಟ್ಟ ರೀತಿಯಲ್ಲಿ ನಮಗೂ ವಿಶೇಷ ಭತ್ಯೆ ಬಿಡುಗಡೆ ಮಾಡದಿದ್ದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಕೆಲಸವನ್ನ ನಮ್ಮ ರಾಜ್ಯಾದ್ಯಕ್ಷರ ಆದೇಶದ ಮೇರೆಗೆ ತಿರಸ್ಕರಿಸಿ, ದೂರ ಉಳಿಯುವುದಾಗಿ ತಿಳಿಸಿದರು.

ಹೋರಾಟಕ್ಕೆ ಬೆಂಬಲ: ಈ ಸಂದರ್ಭದಲ್ಲಿ ರಾಮ ನಗರ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಂಬರೀಶ್‌ಗೌಡ, ಪ್ರಧಾನ ಕಾರ್ಯದರ್ಶಿ ದೊಡ್ಡಾಲಹಳ್ಳಿ ಪುಟ್ಟಸ್ವಾಮಿಗೌಡ ಹಾಜರಿದ್ದು ತಮ್ಮ ಹೊರಾಟಕ್ಕೆ ನಾವು ಸಹ ಬೆಂಬಲಕೊಡಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.

Advertisement

ಮೊದಲನೆಯದಾಗಿ ಸಂಘದ ವತಿಯಿಂದ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಲಿಖೀತ ಮನವಿ ನೀಡಿ, ನಮ್ಮ ಹೋರಾಟವನ್ನು ಹಂತ ಹಂತವಾಗಿ ಮುಂದುವರೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಚನ್ನಪಟ್ಟಣ ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಂಪಿ.ಗುಂಡಪ್ಪ, ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್‌. ಎಸ್‌.ಸಿದ್ದೇಗೌಡ, ಜಿಲ್ಲಾ ಆರೋಗ್ಯನಿರೀಕ್ಷಣಾಧಿಕಾರಿ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್‌, ಜಿಲ್ಲಾ ಆರೋಗ್ಯ ಸುರಕ್ಷಾಧಿಕಾರಿಗಳಾದ ಸಂಘದ ಪ್ರಧಾನ ಕಾರ್ಯದರ್ಶಿ ದೇವಸುಂದರಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸಾದ್‌, ಇತರೇ ನೂರೈವತ್ತುಕ್ಕೂ ಹೆಚ್ಚು ನೌಕರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next