Advertisement

ದಾರಿದೀಪ ದುರಸ್ತಿಗೆ ಮುಂದಾದ ಗುತ್ತಿಗೆದಾರರು!

12:07 PM Oct 29, 2018 | Team Udayavani |

ಕಾಪು: ಕತ್ತಲ ಸಂಚಾರಕ್ಕೆ ಹೆಸರುವಾಸಿಯಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು – ಕುಂದಾಪುರ ನಡುವಿನ ದಾರಿದೀಪಗಳನ್ನು ಹಂತ ಹಂತವಾಗಿ ಸರಿಪಡಿಸುವ‌ ನಿಟ್ಟಿನಲ್ಲಿ ಗುತ್ತಿಗೆದಾರರು ಮುಂದಾಗಿದ್ದಾರೆ.
ಮಂಗಳೂರಿನ ನಂತೂರು ಜಂಕ್ಷನ್‌ನಿಂದ ಕುಂದಾಪುರ ಪಾರಿಜಾತ ಸರ್ಕಲ್‌ ವರೆಗಿನ ಹೆದ್ದಾರಿಯ ಡಿವೈಡರ್‌ಗಳಲ್ಲಿ ಇರುವ ಸಾವಿರಾರು ದಾರಿದೀಪಗಳ ಪೈಕಿ ಅರ್ಧದಷ್ಟು ದೀಪಗಳು ಉರಿಯುತ್ತಿಲ್ಲ ಎನ್ನುವ ವರದಿ
ಯನ್ನು “ಉದಯವಾಣಿ’ ಅ.15ರಂದು ಪ್ರಕಟಿಸಿತ್ತು.

Advertisement

ಸಚಿತ್ರ ವರದಿ ಪ್ರಕಟವಾದ ತತ್‌ಕ್ಷಣ ಎಚ್ಚೆತ್ತುಕೊಂಡ ರಾ.ಹೆ. 66ರ ಚತುಷ್ಪಥ ಯೋಜನೆಯ ಗುತ್ತಿಗೆದಾರರು ದಾರಿದೀಪಗಳನ್ನು ಸರಿಪಡಿಸಲು ಮುಂದಾಗಿದ್ದು, ಕ್ರೇನ್‌ಗಳ ಮೂಲಕ ದುರಸ್ತಿ ನಡೆಸುತ್ತಿದ್ದಾರೆ.

ಕಾಪು, ಉಳಿಯಾರಗೋಳಿ, ಉದ್ಯಾವರ, ಕೋಟ, ಕಲ್ಯಾಣಪುರ, ಅಂಬಲಪಾಡಿ, ಹೆಜಮಾಡಿ, ಕೂಳೂರು, ಸುರತ್ಕಲ್‌ ಸಹಿತ ವಿವಿಧೆಡೆಗಳಲ್ಲಿ ವಿದ್ಯುತ್‌ ದೀಪಗಳನ್ನು ಸರಿಪಡಿಸುತ್ತಿದ್ದಾರೆ. ವಿವಿಧ ಜಂಕ್ಷನ್‌ ಪ್ರದೇಶಗಳಲ್ಲಿ ಬೆಳಗದೆ ಇರುವ ಹೈಮಾಸ್ಟ್‌ ದೀಪಗಳನ್ನೂ ದುರಸ್ತಿ ಮಾಡುತ್ತಿದ್ದಾರೆ.

ಹುಲ್ಲಿಗೂ ಕತ್ತರಿ
ಕುಂದಾಪುರರಿಂದ ಹೆಜಮಾಡಿಯ ವರೆಗಿನ ರಾ.ಹೆ. 66ರ ಡಿವೈಡರ್‌ ಮೇಲೆ ಅಲ್ಲಲ್ಲಿ ಹುಲ್ಲು ಮತ್ತು ಕುರುಚಲು ಗಿಡಗಳು ಬೆಳೆದಿದ್ದು, ಅವನ್ನು ಕೂಡ ಕತ್ತರಿಸಿ ತೆಗೆದು, ಮಳೆ ದೂರವಾಗಿರುವುದರಿಂದ ಡಿವೈಡರ್‌ ಮೇಲೆ ನೆಟ್ಟಿರುವ ಗಿಡಗಳಿಗೆ ನೀರು ಹಾಕುವ ಕಾರ್ಯಕ್ಕೂ ಗುತ್ತಿಗೆದಾರರು ಮುಂದಾಗಿದ್ದಾರೆ.

3 ವರ್ಷಗಳಲ್ಲಿ  ಉಡುಪಿ ಜಿಲ್ಲೆ  ಮತ್ತು ಮಂಗಳೂರು 
ತಾಲೂಕಿನ ರಾ.ಹೆ. 66ರಲ್ಲಿ  ನಡೆದ ಅಪಘಾತಗಳು

ಉಡುಪಿ ಜಿಲ್ಲೆ
2016 – 467 (ಅಪಘಾತ) – 119 (ಸಾವು)     – 505 (ಗಾಯ)
2017 – 485 (ಅಪಘಾತ) – 98 (ಸಾವು)     – 525 (ಗಾಯ)
2018 – 117 (ಅಪಘಾತ) – 21 (ಸಾವು)     – 130 (ಗಾಯ) (ಎಪ್ರಿಲ್‌ವರೆಗೆ)

Advertisement

ಮಂಗಳೂರು ತಾಲೂಕು
2016 – 181 (ಅಪಘಾತ) – 45 (ಸಾವು)     – 164 (ಗಾಯ)
2017 – 182 (ಅಪಘಾತ) – 43 (ಸಾವು)     – 158 (ಗಾಯ)
2018 – 102 (ಅಪಘಾತ) – 23 (ಸಾವು)     – 98 (ಗಾಯ) (ಎಪ್ರಿಲ್‌ವರೆಗೆ)

Advertisement

Udayavani is now on Telegram. Click here to join our channel and stay updated with the latest news.

Next